ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೇದಾರ್ ಮನೆಗೆ ಕಳಿಸಿ, ರೈನಾ ವಾಪಸ್ ಕರೆಸಿ, ಫ್ಯಾನ್ಸ್ ಅಭಿಮಾನ

IPL 2020: Please bring Suresh Raina back, send Kedar Jadhav Fans online campaign

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಿಗೆ ವಿಲನ್ ಆಗಿರುವ ಕೇದಾರ್ ಜಾಧವ್ ತೀವ್ರ ಟೀಕೆಗೆ ಒಳಗಾಗುತ್ತಿದ್ದಾರೆ. ಗೆಲ್ಲುವ ಹಂತದಲ್ಲಿದ್ದ ಸಿಎಸ್‌ಕೆ, ಕೊನೆಯಲ್ಲಿ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ 10 ರನ್‌ಗಳ ಸೋಲು ಕಂಡಿತು. ಈ ಸೋಲಿಗೆ ಕೇದಾರ್ ಜಾಧವ್ ಕಳಪೆ ಆಟವೇ ಕಾರಣ ಎಂದು ಚೆನ್ನೈ ಅಭಿಮಾನಿಗಳು ಆಕ್ರೋಶಗೊಂಡಿದ್ದರು.

ಹಲವಾರು ಮಂದಿ ಇನ್ನೂ ಟ್ರಾಲ್ ಮಾಡಿ ಟೀಕಿಸುತ್ತಿದ್ದಾರೆ. ಧೋನಿ ಮೇಲಿನ ಕೋಪ ಕೂಡಾ ಜಾಧವ್ ಕಡೆಗೆ ತಿರುಗಿದೆ. ಈ ನಡುವೆ ಕೆಲವಾರು ಕೋಪಗೊಂಡ ಅಭಿಮಾನಿಗಳು ಜಾಧವ ಅವರನ್ನು ತಂಡದಿಂದ ಹೊರ ಹಾಕುವಂತೆ ಆನ್ ಲೈನ್ ಅಭಿಮಾನಿ ಆರಂಭಿಸಿದ್ದಾರೆ. ಸುಮಾರು 15000 ಸಹಿ ಸಂಗ್ರಹ ಗುರಿ ಹೊಂದಿದ್ದಾರೆ.

ಕೇದಾರ್ ಜಾಧವ್ ಅವರು ಸ್ಪಿನ್ನರ್‌ಗೆ ಚೆನ್ನಾಗಿ ಆಡುತ್ತಾರೆಕೇದಾರ್ ಜಾಧವ್ ಅವರು ಸ್ಪಿನ್ನರ್‌ಗೆ ಚೆನ್ನಾಗಿ ಆಡುತ್ತಾರೆ

ಧೋನಿ (12 ಎಸೆತಗಳಲ್ಲಿ 11 ರನ್) ನಿಧಾನಗತಿಯಲ್ಲಿ ಆಡಿ ಔಟಾದ ಬಳಿಕ ಅನುಭವಿ ಆಟಗಾರರಾದ ರವೀಂದ್ರ ಜಡೇಜಾ ಅಥವಾ ಡ್ವೇಯ್ನೆ ಬ್ರಾವೋ ಅವರನ್ನು ಕಳುಹಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆಗ ಸಿಎಸ್‌ಕೆಗೆ 21 ಎಸೆತಗಳಲ್ಲಿ 38 ರನ್ ಬೇಕಿತ್ತು.

IPL 2020: Please bring Suresh Raina back, send Kedar Jadhav Fans online campaign

ಆರನೇ ಕ್ರಮಾಂಕಕ್ಕೆ ಕೇದಾರ್ ಜಾಧವ್ ಅವರನ್ನು ಕಳುಹಿಸಿತ್ತು. ಈ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಜಾಧವ್ ಅದನ್ನು ಮುಂದುವರಿಸಿದ್ದರು. 12 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ಸಿಎಸ್‌ಕೆ ಸೋಲಿಗೆ ಪ್ರಮುಖ ಕಾರಣರಾದರು.

ಚೆನ್ನೈ ತನ್ನ ಮುಂದಿನ ಪಂದ್ಯವನ್ನು ಆರ್ ಸಿಬಿ ವಿರುದ್ಧ ದುಬೈನಲ್ಲಿ ಅಕ್ಟೋಬರ್ 10ರಂದು ಆಡಲಿದೆ. ಇಲ್ಲಿಂದ ಮುಂದೆ 6 ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇ ಆಫ್ ಗೆ ಅರ್ಹತೆ ಪಡೆದುಕೊಳ್ಳಬಹುದು.

ಗೆಲ್ಲುವ ಪಂದ್ಯ ಕೈಚೆಲ್ಲಿದ ಚೆನ್ನೈ ತಂಡಕ್ಕೆ ವಿಲನ್ ಆದ ನಾಯಕ ಧೋನಿ, ಕೇದಾರ್ ಜಾಧವ್ ಗೆಲ್ಲುವ ಪಂದ್ಯ ಕೈಚೆಲ್ಲಿದ ಚೆನ್ನೈ ತಂಡಕ್ಕೆ ವಿಲನ್ ಆದ ನಾಯಕ ಧೋನಿ, ಕೇದಾರ್ ಜಾಧವ್

ಚೆನ್ನೈ 600028 ಗಲ್ಲಿ ಕ್ರಿಕೆಟ್ ಬಗ್ಗೆ ಇರುವ ಚಿತ್ರದ ದೃಶ್ಯವನ್ನು ಹಂಚಿಕೊಂಡು ಕೆಕೆಆರ್ ವಿರುದ್ಧ ಜಾಧವ್ ಕೂಡಾ ಇದೇ ರೀತಿ ಆಡಿದರು ಎನ್ನಲಾಗಿದೆ.



ಐಪಿಎಲ್ ಹರಾಜಿನ ಐತಿಹಾಸಿಕ ಕ್ಷಣ, ಕೋಟ್ಯಾಂತರ ರುಪಾಯಿ ಕೊಟ್ಟು ಕೇದಾರ್ ಜಾಧವ್ ಖರೀದಿಸಿದ್ದನ್ನು ಮತ್ತೊಮ್ಮೆ ನೋಡಿ



ರಸೆಲ್ ಅಲ್ಲ ಜಾಧವ್ ಗೆಲ್ಲಿಸಿದರು, ಕೆಕೆಆರ್ ನಂಬುಗೆ ಆಲ್ ರೌಂಡರ್ ಬದಲಿಗೆ ಕೆಕೆಅರ್ ಬದಲಿಗೆ ಚೆನ್ನೈನ ಜಾಧವ್ ಅವರು ನೆರವಾದರು.



ಡಿಫೆನ್ಸ್ ಅಂದರೆ ಹೀಗಿರಬೇಕು!. ಜಾಧವ್ ಅವರ ರಕ್ಷಣಾತ್ಮಕ ಆಟ ನೋಡಿ ಕಲಿಯಿರಿ

Story first published: Friday, October 9, 2020, 0:57 [IST]
Other articles published on Oct 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X