ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೈಲಿಗಲ್ಲು ಸ್ಥಾಪಿಸುವತ್ತ ರೋಹಿತ್, ಧವನ್, ರಬಾಡ, ಪಂತ್ ಕಣ್ಣು

IPL 2020: Rohit Sharma, Rishabh Pant, Shikhar Dhawan eye milestones

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 27ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡುತ್ತಿವೆ. ಈ ಪಂದ್ಯದಲ್ಲಿ ಒಂದಿಷ್ಟು ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆಯಿದೆ.

ವಿರಾಟ್ ಕೊಹ್ಲಿ ಗೆಲುವಿನ ಸೀಕ್ರೆಟ್ಟು ಈ ಫ್ಲೈಯಿಂಗ್ ಕಿಸ್ಸು: ವಿಡಿಯೋವಿರಾಟ್ ಕೊಹ್ಲಿ ಗೆಲುವಿನ ಸೀಕ್ರೆಟ್ಟು ಈ ಫ್ಲೈಯಿಂಗ್ ಕಿಸ್ಸು: ವಿಡಿಯೋ

ಡೆಲ್ಲಿ ಕ್ಯಾಪಿಟಲ್ಸ್‌ನ ರಿಷಭ್ ಪಂತ್ ಮತ್ತು ಶಿಖರ್ ಧವನ್, ವಿಶೇಷ ಮೈಲಿಗಲ್ಲು ಸ್ಥಾಪಿಸಲಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ, ಟ್ರೆಂಟ್‌ ಬೌಲ್ಟ್, ಕ್ವಿಂಟನ್ ಡಿ ಕಾಕ್ ಕೂಡ ಒಂದು ವಿಶೇಷ ದಾಖಲೆ ನಿರ್ಮಿಸಲಿದ್ದಾರೆ. ಇಂದು ದಾಖಲೆ ನಿರ್ಮಿಸಲಿರುವವರ ಮಾಹಿತಿ ಇಲ್ಲಿದೆ.

1. ರೋಹಿತ್ ಶರ್ಮಾ
ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ದಾಖಲೆ ನಿರ್ಮಿಸಲು 61 ರನ್‌ ಬೇಕು. 194 ಐಪಿಎಲ್‌ ಪಂದ್ಯಗಳಲ್ಲಿ ರೋಹಿತ್ 5109 ರನ್ ಬಾರಿಸಿದ್ದಾರೆ. ಇನ್ನು 91 ರನ್‌ ಬಾರಿಸಿದರೆ 5,200 ರನ್ ಪುರೈಸಲಿದ್ದಾರೆ.

2. ಟ್ರೆಂಟ್ ಬೌಲ್ಟ್
ಮುಂಬೈ ಇಂಡಿಯನ್ಸ್ ವೇಗಿ ಟ್ರೆಂಟ್ ಬೌಲ್ಟ್ ಕೂಡ ದಾಖಲೆ ಬರೆಯಲು ಅವಕಾಶವಿದೆ. ಇಂದಿನ ಪಂದ್ಯದಲ್ಲಿ ಬೌಲ್ಟ್ 2 ವಿಕೆಟ್ ಪಡೆದರೆ ಐಪಿಎಲ್‌ನಲ್ಲಿ 50 ವಿಕೆಟ್‌ಗಳು ಲಭಿಸಿದಂತಾಗುತ್ತದೆ.

ಐಪಿಎಲ್ 2020: ಆರೋಗ್ಯದ ಬಗ್ಗೆ ಆಸ್ಪತ್ರೆಯಿಂದ ಅಪ್‌ಡೇಟ್ ಕೊಟ್ಟ ಕ್ರಿಸ್ ಗೇಲ್ಐಪಿಎಲ್ 2020: ಆರೋಗ್ಯದ ಬಗ್ಗೆ ಆಸ್ಪತ್ರೆಯಿಂದ ಅಪ್‌ಡೇಟ್ ಕೊಟ್ಟ ಕ್ರಿಸ್ ಗೇಲ್

3. ಕ್ವಿಂಟನ್ ಡಿ ಕಾಕ್
ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌-ವಿಕೆಟ್ ಕೀಪರ್, ಮುಂಬೈ ಇಂಡಿಯನ್ಸ್‌ನ ಕ್ವಿಂಟನ್ ಡಿ ಕಾಕ್ ಇನ್ನು ಎರಡು ವಿಕೆಟ್‌ಗಳನ್ನು ವಿಕೆಟ್ ಕೀಪರ್ ಆಗಿ ಪಡೆದರೆ, ಐಪಿಎಲ್‌ನಲ್ಲಿ ವಿಕೆಟ್ ಕೀಪರ್ ಆಗಿದ್ದುಕೊಂಡು 50 ವಿಕೆಟ್‌ ದಾಖಲೆ ನಿರ್ಮಿಸಲಿದ್ದಾರೆ.

4. ಕಾಗಿಸೊ ರಬಾಡ, ಹರ್ಷಲ್ ಪಟೇಲ್
ದಕ್ಷಿಣ ಆಫ್ರಿಕಾದ ವೇಗಿ ಕಾಗಿಸೊ ರಬಾಡ ಮತ್ತು ಭಾರತದ ಹರ್ಷಲ್ ಪಟೇಲ್ ಗೆ 4 ವಿಕೆಟ್‌ ಸಿಕ್ಕರೆ ಐಪಿಎಲ್‌ನಲ್ಲಿ 50 ವಿಕೆಟ್‌ ದಾಖಲೆ ಪೂರೈಕೆಯಾಗಲಿದ್ದಾರೆ.

5. ಶಿಖರ್ ಧವನ್, ರಿಷಭ್ ಪಂತ್
ಡೆಲ್ಲಿ ಕ್ಯಾಪಿಟಲ್ಸ್‌ನ ಶಿಖರ್ ಧವನ್ ಮತ್ತು ರಿಷಭ್ ಪಂತ್ ಇನ್ನು 1 ಸಿಕ್ಸ್ ಬಾರಿಸಿದರೆ ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳ ದಾಖಲೆ ಪೂರೈಸಲಿದ್ದಾರೆ.

Story first published: Sunday, October 11, 2020, 20:09 [IST]
Other articles published on Oct 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X