ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಡೆಲ್ಲಿ ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆಯಿದೆ ಎಂದ ರಿಷಭ್ ಪಂತ್

IPL 2020: very proud of Delhi Capitals team: Rishabh Pant

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್, ಫಯನಲ್ ಪಂದ್ಯದಲ್ಲಿ ಮುಂಬೈ ಶರಣಾಯಿತು. ಈ ಮೂಲಕ ಚೊಚ್ಚಲ ಟ್ರೋಫಿಯ ಕನಸು ನನಸಾಗದೆ ಉಳಿಯುವಂತಾಯಿತು. ಆದರೆ ಡೆಲ್ಲಿ ತಂಡದ ಪ್ರದರ್ಶನದ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ರಿಷಭ್ ಪಂತ್ ಹೇಳಿದ್ದಾರೆ.

ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿದ್ದ ಮುಂಬೈ ಇಂಡಿಯನ್ಸ್ ಫೈನಲ್ ಪಂದ್ಯದಲ್ಲೂ ಅದ್ಭುತ ಆರಂಭವನ್ನು ಪಡೆಯಿತು. ಪಂದ್ಯದ ಮೊದಲ ಎಸೆತದಲ್ಲೇ ಆರಂಭಿಕ ಆಟಗಾರ ಮಾರ್ಕಸ್ ಸ್ಟೋಯ್ನಿಸ್ ವಿಕೆಟ್ ಪಡೆದರು ಟ್ರೆಂಟ್ ಬೋಲ್ಟ್. ಕೆಲವೇ ಕ್ಷಣಗಳಲ್ಲಿ ಅಜಿಂಕ್ಯ ರಹಾನೆ ಹಾಗೂ ಧವನ್ ವಿಕೆಟ್ ಕೂಡ ಪಡೆಯುವಲ್ಲಿ ಮುಂಬೈ ಯಶಸ್ವಿಯಾಗಿತ್ತು.

2020ರ ಬೆಸ್ಟ್ ಐಪಿಎಲ್ ತಂಡ ಹೆಸರಿಸಿದ ಎಬಿ ಡಿ ವಿಲಿಯರ್ಸ್2020ರ ಬೆಸ್ಟ್ ಐಪಿಎಲ್ ತಂಡ ಹೆಸರಿಸಿದ ಎಬಿ ಡಿ ವಿಲಿಯರ್ಸ್

ನಾಲ್ಕನೇ ಓವರ್‌ ವೇಳೆಗೆ 22 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಡೆಲ್ಲಿ ಆಘಾತವನ್ನು ಅನುಭವಿಸಿತ್ತು. ಈ ಸಂದರ್ಭದಲ್ಲಿ ನಾಯಕನನ್ನು ಸೇರಿಕೊಂಡ ರಿಷಭ್ ಪಂತ್ 6 ರನ್‌ಗಳ ಅಮೂಲ್ಯ ಜೊತೆಯಾಟವನ್ನು ನೀಡಿದರು. ಈ ಮೂಲಕ ತಂಡವನ್ನು ಪಾರು ಮಾಡುವಲ್ಲಿ ಯಶಸ್ವಿಯಾದರು.

"ದುರದೃಷ್ಟವಶಾತ್ ನಾವು ಟೂರ್ನಿಯನ್ನು ಉನ್ನತವಾಗಿ ಅಂತ್ಯಮಾಡಲು ಸಾಧ್ಯವಾಗಲಿಲ್ಲ. ಆದರೆ ನಮ್ಮ ತಂಡದ ಬಗ್ಗೆ ಹೆಮ್ಮೆಯಿದೆ. ನಾವು ಸಾಕಷ್ಟು ಏರಿಳಿತವನ್ನು ಕಂಡೆವು. ಆದರೆ ನಮ್ಮ ಸ್ಪೂರ್ತಿಯನ್ನು ಕಳೆದುಕೊಳ್ಳಲಿಲ್ಲ. ತಂಡದ ಎಲ್ಲಾ ಸದಸ್ಯರಿಗೂ ಹಾಗೂ ಕೋಚ್‌ಗಳಿಗೂ ಧನ್ಯವಾದಗಳು. ನಮ್ಮ ಅದ್ಭುತವಾದ ಅಭಿಮಾನಿಗಳಿಗೂ ಪ್ರೀತಿಪೂರ್ವಕ ಧನ್ಯವಾದಗಳು. ಮತ್ತಷ್ಟು ಬಲಿಷ್ಠರಾಗಿ ಬರುತ್ತೇವೆ" ಎಂದು ಪಂತ್ ಟ್ವೀಟ್ ಮಾಡಿದ್ದಾರೆ.

ಮತ್ತೆ ಕ್ರಿಕೆಟ್ ಆಡುವ ಅವಕಾಶ ದೊರೆತಿದ್ದಕ್ಕೆ ಖುಷಿಯಾಗಿದೆ: ಧವನ್ಮತ್ತೆ ಕ್ರಿಕೆಟ್ ಆಡುವ ಅವಕಾಶ ದೊರೆತಿದ್ದಕ್ಕೆ ಖುಷಿಯಾಗಿದೆ: ಧವನ್

ರಿಷಬ್ ಪಂತ್ ಐಪಿಎಲ್ 2020 ಆವೃತ್ತಿಯಲ್ಲಿ ಫೈನಲ್ ಪಂದ್ಯದಲ್ಲಿ ಅರ್ಧ ಶತಕವನ್ನು ಗಳಿಸುವ ಮೂಲಕ ಟೂರ್ನಿಯ ಮೊದಲ ಅರ್ಧಶತಕವನ್ನು ಬಾರಿಸಿದರು. 38 ಎಸೆತಗಳಲ್ಲಿ ಪಂತ್ 56 ರನ್ ಬಾರಿಸಿದ್ದರು. ಈ ಇನ್ನಿಂಗ್ಸ್ಅನ್ನು ಹೊರತುಪಡಿಸಿದರೆ ಪಂತ್ ಪಾಲಿಗೆ ಈ ಆವೃತ್ತಿ ಉತ್ತಮವಾಗಿರಲಿಲ್ಲ. ಹಾಗಿದ್ದರೂ ಪಂತ್ 14 ಇನ್ನಿಂಗ್ಸ್‌ಗಳಲ್ಲಿ 343 ರನ್ ಬಾರಿಸಿದ್ದಾರೆ.

Story first published: Thursday, November 12, 2020, 12:15 [IST]
Other articles published on Nov 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X