ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021 : ಕೆಎಲ್ ರಾಹುಲ್ ನಿರ್ಮಿಸಬಹುದಾದ 3 ಮೈಲಿಗಲ್ಲುಗಳು

IPL 2021 : 3 milestones KL Rahul can reach this season

ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಈಗಾಗಲೇ ಐಪಿಎಲ್ ಟೂರ್ನಿಗಳಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. 2018ರಲ್ಲಿ ಕೆ ಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು, ಇಂದಿಗೂ ಸಹ ಇದು ಐಪಿಎಲ್ ಇತಿಹಾಸದಲ್ಲಿ ದಾಖಲಾದ ಅತೀ ವೇಗದ ಅರ್ಧಶತಕವಾಗಿಯೇ ಉಳಿದಿದೆ. 2020ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕೆಎಲ್ ರಾಹುಲ್ ಅಜೇಯ 132 ರನ್ ಸಿಡಿಸಿದ್ದರು, ಇದು ಐಪಿಎಲ್ ಇತಿಹಾಸದಲ್ಲಿ ಭಾರತೀಯ ಆಟಗಾರನೋರ್ವ ಸಿಡಿಸಿದ ಅತಿಹೆಚ್ಚು ರನ್ ದಾಖಲೆಯಾಗಿದೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದ್ದ ಕೆಎಲ್ ರಾಹುಲ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮಹತ್ವದ 3 ದಾಖಲೆಗಳನ್ನು ಮಾಡುವ ಸಾಧ್ಯತೆಗಳಿವೆ. ಕೆಎಲ್ ರಾಹುಲ್ ನಿರ್ಮಿಸಬಹುದಾದ ಆ ಮೂರು ದಾಖಲೆಗಳ ಪಟ್ಟಿ ಈ ಕೆಳಕಂಡಂತಿದೆ ನೋಡಿ.

3. 25 ಐಪಿಎಲ್ ಅರ್ಧಶತಕಗಳು :

ಕೆಎಲ್ ರಾಹುಲ್ ಐಪಿಎಲ್ ಇತಿಹಾಸದಲ್ಲಿ ಇದುವರೆಗೂ 87 ಪಂದ್ಯಗಳನ್ನಾಡಿದ್ದು 24 ಅರ್ಧಶತಕಗಳನ್ನು ಬಾರಿಸಿದ್ದಾರೆ. ಹೀಗಾಗಿ ಪ್ರಸ್ತುತ ಐಪಿಎಲ್ ಟೂರ್ನಿಯ ಮೂಲಕ 25 ಅರ್ಧಶತಕಗಳನ್ನು ಪೂರೈಸುವ ಅವಕಾಶವಿದ್ದು, ಕೆಎಲ್ ರಾಹುಲ್ 25 ಅರ್ಧಶತಕಗಳನ್ನು ಪೂರೈಸುವ ಮೂಲಕ ತಮ್ಮ ಐಪಿಎಲ್ ಹಾದಿಯಲ್ಲಿ ನೂತನ ಮೈಲಿಗಲ್ಲನ್ನು ನೆಡಲಿದ್ದಾರೆ. ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ 3 ಅರ್ಧಶತಕಗಳನ್ನು ಕೆಎಲ್ ರಾಹುಲ್ ಬಾರಿಸಿದ್ದಾರೆ.

2. 50 ಐಪಿಎಲ್ ಕ್ಯಾಚ್‌ಗಳು :

ಕಳೆದ 5 ಐಪಿಎಲ್ ಆವೃತ್ತಿಯ ಬಹುತೇಕ ಪಂದ್ಯಗಳಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಕೆಎಲ್ ರಾಹುಲ್ ಇದುವರೆಗೂ 43 ಕ್ಯಾಚ್‌ಗಳು ಮತ್ತು 5 ಸ್ಟಂಪಿಂಗ್‌ ಮಾಡಿದ್ದಾರೆ. ಈ ಐಪಿಎಲ್ ಆವೃತ್ತಿಯ ಮೂಲಕ ಕೆಎಲ್ ರಾಹುಲ್ 50 ಕ್ಯಾಚ್‌ಗಳ ಮೈಲಿಗಲ್ಲನ್ನು ಮುಟ್ಟುವ ಸಾಧ್ಯತೆಯಿದೆ.

1. 3000 ಐಪಿಎಲ್ ರನ್‌ಗಳು

ಕೆಎಲ್ ರಾಹುಲ್ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 2887 ರನ್ ಗಳಿಸುವುದರ ಮೂಲಕ 18ನೇ ಸ್ಥಾನದಲ್ಲಿದ್ದಾರೆ. 3000 ಐಪಿಎಲ್ ರನ್‌ಗಳನ್ನು ಪೂರೈಸಲು ಕೆಎಲ್ ರಾಹುಲ್‌ಗೆ 113 ರನ್‌ಗಳ ಅಗತ್ಯತೆಯಿದ್ದು ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಈ ಮಹತ್ವದ ಮೈಲಿಗಲ್ಲನ್ನು ಕೆಎಲ್ ರಾಹುಲ್ ಮುಟ್ಟಲಿದ್ದಾರೆ.

Story first published: Friday, April 30, 2021, 14:05 [IST]
Other articles published on Apr 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X