ಐಪಿಎಲ್ ಯುಎಇ ಚರಣದಲ್ಲಿ ಆರ್‌ಸಿಬಿಗೆ ಕೈಕೊಟ್ಟು 'ಫ್ಲಾಪ್ ಸ್ಟಾರ್' ಆದ ಸ್ಟಾರ್ ಬ್ಯಾಟ್ಸ್‌ಮನ್‌ ಇವರೇ!

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿಯುವ ಹಂತಕ್ಕೆ ಬಂದು ತಲುಪಿದೆ. ಇತ್ತೀಚೆಗಷ್ಟೇ ಲೀಗ್ ಹಂತದ ಪಂದ್ಯಗಳು ಮುಗಿದು ಪ್ಲೇ ಆಫ್ ಸುತ್ತಿನ ಪಂದ್ಯಗಳು ಆರಂಭವಾಗಿವೆ. ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಪ್ಲೇ ಆಫ್ ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿದ್ದವು. ಹೀಗೆ ಪ್ಲೇ ಆಫ್ ಸುತ್ತಿನ ಮೊದಲನೇ ಪಂದ್ಯವಾದ ಕ್ವಾಲಿಫೈಯರ್ 1ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಿದವು. ಈ ಪಂದ್ಯದಲ್ಲಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನೇರವಾಗಿ ಫೈನಲ್ ಪ್ರವೇಶಿಸಿತು, ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ಕ್ವಾಲಿಫೈಯರ್ 2 ಪಂದ್ಯಕ್ಕೆ ಪ್ರವೇಶಿಸಿದೆ.

ಐಪಿಎಲ್: ತನ್ನ ಅತಿಹೆಚ್ಚು ವಿಕೆಟ್ ದಾಖಲೆ ಸರಿದೂಗಿಸಿದ ಹರ್ಷಲ್ ಪಟೇಲ್ ಕುರಿತು ಬ್ರಾವೊ ಪ್ರತಿಕ್ರಿಯೆಐಪಿಎಲ್: ತನ್ನ ಅತಿಹೆಚ್ಚು ವಿಕೆಟ್ ದಾಖಲೆ ಸರಿದೂಗಿಸಿದ ಹರ್ಷಲ್ ಪಟೇಲ್ ಕುರಿತು ಬ್ರಾವೊ ಪ್ರತಿಕ್ರಿಯೆ

ಇತ್ತ ಇತ್ತೀಚೆಗಷ್ಟೇ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಿದವು. ಈ ರೋಚಕ ಪಂದ್ಯದ ಅಂತಿಮ ಹಂತದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಜಯ ಸಾಧಿಸುವುದರ ಮೂಲಕ ಕ್ವಾಲಿಫೈಯರ್ 2 ಪಂದ್ಯಕ್ಕೆ ಅರ್ಹತೆಯನ್ನು ಪಡೆದುಕೊಂಡಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹತ್ವದ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಶರಣಾಗುವುದರ ಮೂಲಕ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದು ಮತ್ತೊಮ್ಮೆ ನಿರಾಸೆ ಮೂಡಿಸಿದೆ.

ಕೊಹ್ಲಿ ನಾಯಕತ್ವದ ಕೊನೆಯ ಪಂದ್ಯ ಸೋತು ಟೂರ್ನಿಯಿಂದ ಹೊರಬಿದ್ದ ಆರ್‌ಸಿಬಿ; ಸೋಲಿಗೆ ಕಾರಣ ತಿಳಿಸಿದ ಕೊಹ್ಲಿಕೊಹ್ಲಿ ನಾಯಕತ್ವದ ಕೊನೆಯ ಪಂದ್ಯ ಸೋತು ಟೂರ್ನಿಯಿಂದ ಹೊರಬಿದ್ದ ಆರ್‌ಸಿಬಿ; ಸೋಲಿಗೆ ಕಾರಣ ತಿಳಿಸಿದ ಕೊಹ್ಲಿ

ಹೀಗೆ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋಲುವುದರ ಮೂಲಕ ಟೂರ್ನಿಯಿಂದ ಹೊರಬಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರಾಸೆ ಮೂಡಿಸಿದರೆ, ಮತ್ತೊಂದೆಡೆ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಯುಎಇ ಚರಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಅಕ್ಷರಶಃ ವಿಫಲರಾಗಿದ್ದಾರೆ. ಹೌದು, ಎಬಿ ಡಿವಿಲಿಯರ್ಸ್ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ದ್ವಿತೀಯಾರ್ಧದಲ್ಲಿ ನಡೆದ ಸಾಲು ಸಾಲು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದು ಅವುಗಳ ವಿವರ ಮುಂದಿದೆ ಓದಿ..

8 ಪಂದ್ಯಗಳಲ್ಲಿ ಎಬಿಡಿ ಗಳಿಸಿದ್ದು 106 ರನ್ ಮಾತ್ರ

8 ಪಂದ್ಯಗಳಲ್ಲಿ ಎಬಿಡಿ ಗಳಿಸಿದ್ದು 106 ರನ್ ಮಾತ್ರ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಂಕಷ್ಟದಲ್ಲಿ ಸಿಲುಕಿಕೊಂಡಾಗಲೆಲ್ಲ ಅಬ್ಬರದ ಬ್ಯಾಟಿಂಗ್ ನಡೆಸಿ ಆಪತ್ಬಾಂಧವನಾಗಿ ನಿಲ್ಲುತ್ತಿದ್ದ ಎಬಿ ಡಿವಿಲಿಯರ್ಸ್ ತನ್ನ ಕೊನೆಯ 8 ಪಂದ್ಯಗಳಲ್ಲಿ ಗಳಿಸಿರುವುದು ಕೇವಲ 106 ರನ್ ಮಾತ್ರ. ಹೀಗೆ ಯುಎಇ ಚರಣ ಆರಂಭವಾದ ನಂತರ ಮಂಕಾಗಿರುವ ಎಬಿ ಡಿವಿಲಿಯರ್ಸ್ ಒಂದೇ ಒಂದು ಅರ್ಧಶತಕವನ್ನು ಕೂಡಾ ಬಾರಿಸಲಿಲ್ಲ.

ಕಳೆದ 8 ಪಂದ್ಯಗಳಲ್ಲಿ ಎಬಿಡಿ ಗಳಿಸಿದ ರನ್‌ಗಳು

ಕಳೆದ 8 ಪಂದ್ಯಗಳಲ್ಲಿ ಎಬಿಡಿ ಗಳಿಸಿದ ರನ್‌ಗಳು

ಹೀಗೆ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಯುಎಇ ಚರಣದಲ್ಲಿ ಮಂಕಾಗಿರುವ ಎಬಿ ಡಿವಿಲಿಯರ್ಸ್ ತಮ್ಮ ಕೊನೆಯ 8 ಪಂದ್ಯಗಳಲ್ಲಿ ಕ್ರಮವಾಗಿ 26, 19*, 23, 4*, 11, 12 ಮತ್ತು 0 ರನ್ ಗಳಿಸಿದ್ದಾರೆ. ಹೀಗೆ ಕಳೆದ 8 ಪಂದ್ಯಗಳಲ್ಲಿ ಸತತವಾಗಿ ಎಬಿ ಡಿವಿಲಿಯರ್ಸ್ ಮಂಕಾಗಿದ್ದಾರೆ.

Virat Kohli ಹಾಗು ತಂಡ ಪಂದ್ಯ ಸೋತ ನಂತರ ಮಾಡಿದ್ದೇನು | Oneindia Kannada
ಐಪಿಎಲ್ ಮೊದಲಾರ್ಧದಲ್ಲಿ ಮಿಂಚಿದ್ದ ಎಬಿ ಡಿ ವಿಲಿಯರ್ಸ್

ಐಪಿಎಲ್ ಮೊದಲಾರ್ಧದಲ್ಲಿ ಮಿಂಚಿದ್ದ ಎಬಿ ಡಿ ವಿಲಿಯರ್ಸ್

ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಯುಎಇ ಚರಣದಲ್ಲಿ ತಾವು ಆಡಿದ ಎಲ್ಲಾ ಪಂದ್ಯಗಳಲ್ಲೂ ಮಂಕಾಗಿರುವ ಎಬಿ ಡಿವಿಲಿಯರ್ಸ್ ಭಾರತ ನೆಲದಲ್ಲಿ ನಡೆದ ಪ್ರಸಕ್ತ ಸಾಲಿನ ಟೂರ್ನಿಯ ಮೊದಲಾರ್ಧದಲ್ಲಿ ಮಿಂಚು ಹರಿಸಿದ್ದರು. ಭಾರತ ನೆಲದಲ್ಲಿ ನಡೆದಿದ್ದ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿದ್ದ ಎಬಿ ಡಿ ವಿಲಿಯರ್ಸ್ 207 ರನ್‌ಗಳನ್ನು ಗಳಿಸಿದ್ದರು. ಈ ಮೂಲಕ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಒಟ್ಟಾರೆ 15 ಪಂದ್ಯಗಳಲ್ಲಿ ಎಬಿ ಡಿವಿಲಿಯರ್ಸ್ 313 ರನ್‌ಗಳನ್ನು ಕಲೆ ಹಾಕಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 20 - October 27 2021, 03:30 PM
ಇಂಗ್ಲೆಂಡ್
ಬಾಂಗ್ಲಾದೇಶ್
Predict Now

For Quick Alerts
ALLOW NOTIFICATIONS
For Daily Alerts
Story first published: Tuesday, October 12, 2021, 15:49 [IST]
Other articles published on Oct 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X