ಸಿಎಸ್‌ಕೆ ಸೋಲಿನ ಬಳಿಕ ಪ್ರತಿಕ್ರಿಯಿಸಿದ ಡಿಸಿ ನಾಯಕ ರಿಷಭ್ ಪಂತ್

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 50ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 3 ವಿಕೆಟ್‌ ರೋಚಕ ಜಯ ಗಳಿಸಿತ್ತು. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಚೆನ್ನೈ ತಂಡವನ್ನು ಕೆಳಗಿಳಿಸಿ ಡೆಲ್ಲಿ ಈಗ ಅಗ್ರ ಸ್ಥಾನಕ್ಕೇರಿದೆ. ಮೊದಲು ಬ್ಯಾಟಿಂಗ್‌ ಮಾಡಿದ್ದ ಚೆನ್ನೈ ಕಡಿಮೆ ರನ್ ಬಾರಿಸಿದ್ದರಿಂದ ಡೆಲ್ಲಿ ಪಂದ್ಯ ಜಯಿಸಿ ಸೀಸನ್‌ನ ಬಲಿಷ್ಠ ತಂಡವಾಗಿ ಕಾಣಿಸಿದೆ.

CSK vs DC ಪಂದ್ಯದ ಬಳಿಕ ಅಂಕಪಟ್ಟಿ, ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಆಟಗಾರರ ಪಟ್ಟಿ ಹೀಗಿದೆCSK vs DC ಪಂದ್ಯದ ಬಳಿಕ ಅಂಕಪಟ್ಟಿ, ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಆಟಗಾರರ ಪಟ್ಟಿ ಹೀಗಿದೆ

ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಎರಡೂ ತಂಡಗಳೂ ಈ ಸೀಸನ್‌ನಲ್ಲಿ ಈಗಾಗಲೇ ಪ್ಲೇ ಆಫ್ಸ್‌ಗೆ ಅರ್ಹತೆ ಪಡೆದುಕೊಂಡಿವೆ. ಸಿಎಸ್‌ಕೆ ಮೊದಲು ಪ್ಲೇ ಆಫ್ಸ್‌ಗೆ ಅಹರ್ತೆ ಪಡೆದುಕೊಂಡಿದ್ದರೆ, ಪ್ಲೇ ಆಫ್ಸ್‌ಗೆ ಪ್ರವೇಶಿಸಿದ ಎರಡನೇ ತಂಡವಾಗಿ ಡೆಲ್ಲಿ ಗುರುತಿಸಿಕೊಂಡಿತ್ತು. ಎರಡೂ ತಂಡಗಳಿಗೂ ಇನ್ನು ಲೀಗ್‌ ಹಂತದ ಒಂದೊಂದು ಪಂದ್ಯಗಳು ಬಾಕಿ ಉಳಿದಿವೆ.

ಖಂಡಿತಾ ಇದು ಬಲು ದೊಡ್ಡ ಗೆಲುವು

ಖಂಡಿತಾ ಇದು ಬಲು ದೊಡ್ಡ ಗೆಲುವು

ಸೋಮವಾರ (ಅಕ್ಟೋಬರ್‌ 4) ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯ ಬಳಿಕ ಪಂದ್ಯದ ಗೆಲುವಿನ ಬಗ್ಗೆ ಡಿಸಿ ನಾಯಕ ರಿಷಭ್ ಪಂತ್ ಮಾತನಾಡಿದ್ದಾರೆ. "ಖಂಡಿತವಾಗಿಯೂ ಇದೊಂದು ದೊಡ್ಡ ಗೆಲುವು. ಹುಟ್ಟು ಹಬ್ಬದ ಉಡುಗೊರೆ ಕೆಟ್ಟದಾಗಿ ಇರಲಿಲ್ಲ. ಆದರೆ ಪಂದ್ಯದ ಕೊನೆ ನಮ್ಮ ಪಾಲಿಗೆ ಸ್ವಲ್ಪ ತ್ರಾಸದಾಯಕ ಅನ್ನಿಸಿತು. ಆದರೆ ಒಮ್ಮೆ ಪಂದ್ಯ ಗೆದ್ದ ಬಳಿಕ ಎಲ್ಲವೂ ಸರಿಯೆನ್ನಬಹುದು," ಎಂದು ಪಂತ್ ಹೇಳಿದ್ದಾರೆ. ಅಕ್ಟೋಬರ್‌ 24ರಂದು ಪಂತ್ 24ರ ಹರೆಯಕ್ಕೆ ಕಾಲಿರಿಸಿದ್ದಾರೆ. ಪಂದ್ಯದಲ್ಲಿ ಪಂತ್ 15 ರನ್ ಬಾರಿಸಿ ರವೀಂದ್ರ ಜಡೇಜಾ ಓವರ್‌ನಲ್ಲಿ ಮೊಯೀನ್ ಅಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು. ಪಂತ್ ಗಳಿಸಿದ ಈ 15 ರನ್‌ನಲ್ಲಿ 1 ಫೋರ್, 1 ಸಿಕ್ಸರ್ ಸೇರಿತ್ತು.

ಶಾ, ಧವನ್‌ರಿಂದ ಡೀಸೆಂಟ್ ಸ್ಟಾರ್ಟ್

ಶಾ, ಧವನ್‌ರಿಂದ ಡೀಸೆಂಟ್ ಸ್ಟಾರ್ಟ್

"ಪೃಥ್ವಿ ಶಾ ಅವರು ನಮಗೆ ಡಿಸೆಂಟ್ ಸ್ಟಾರ್ಟ್ ನೀಡಿದರು. ಸಿಎಸ್‌ಕೆ ಮಾಡಿದ್ದು ಕಡಿಮೆ ಟೋಟಲ್ ಆಗಿದ್ದರಿಂದ ನಾವದನ್ನು ಚೇಸ್ ಮಾಡಬಹುದು ಎಂದು ಯಾವಾಗಲೂ ಅಂದುಕೊಂಡಿದ್ದೆವು. ಶಿಖರ್ ಧವನ್ ಕೂಡ ನಮಗೆ ಉತ್ತಮ ಕೊಡುಗೆ ನೀಡಿದರು. ನಿಜಕ್ಕೂ ಇದೊಂದು ದೊಡ್ಡ ಗೆಲುವು. ಈ ಗೆಲುವಿನ ಮೂಲಕ ನಾವು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಲು ಮತ್ತು ಮೊದಲ ಸ್ಥಾನದಲ್ಲೇ ಲೀಗ್‌ ಹಂತವನ್ನು ಮುಗಿಸಲು ಅವಕಾಶವಾಗಿದೆ," ಎಂದು ಪಂತ್ ವಿವರಿಸಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಪೃಥ್ವಿ ಶಾ 18 ರನ್, 3 ಬೌಂಡರಿಗಳ ಕೊಡುಗೆ ನೀಡಿದರೆ, ಶಿಖರ್ ಧವನ್ 39 ರನ್, 3 ಬೌಂಡರಿ, 2 ಸಿಕ್ಸರ್ ಬಾರಿಸಿದ್ದರು. ಅಂತಿಮವಾಗಿ ಶಿಮ್ರನ್ ಹೆಟ್ಮೈಯರ್ ಅಜೇಯ 28 ರನ್, ಕಾಗಿಸೋ ರಬಾಡ ಅಜೇಯ 4 ರನ್ ಬಾರಿಸಿ ಪಂದ್ಯ ಮುಗಿಸಿದರು.

ಸಿಎಸ್‌ಕೆ ಮತ್ತು ಡಿಸಿ ಪಂದ್ಯ ಸ್ಕೋರ್‌

ಸಿಎಸ್‌ಕೆ ಮತ್ತು ಡಿಸಿ ಪಂದ್ಯ ಸ್ಕೋರ್‌

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್, ಋತುರಾಜ್ ಗಾಯಕವಾಡ್ 13, ಫಾಫ್ ಡು ಪ್ಲೆಸಿಸ್ 10, ರಾಬಿನ್ ಉತ್ತಪ್ಪ 19, ಮೊಯೀನ್ ಅಲಿ 5, ಅಂಬಟಿ ರಾಯುಡು 55, ಎಂಎಸ್ ಧೋನಿ 18, ರವೀಂದ್ರ ಜಡೇಜಾ 1 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 136 ರನ್ ಗಳಿಸಿತು. ಪೃಥ್ವಿ ಶಾ 18, ಶಿಖರ್ ಧವನ್ 39, ಶ್ರೇಯಸ್ ಅಯ್ಯರ್ 2, ರಿಷಭ್ ಪಂತ್ 15, ರಿಪಾಲ್ ಪಟೇಲ್ 18, ಶಿಮ್ರಾನ್ ಹೆಟ್ಮೈಯರ್ 28, ಅಕ್ಸರ್ ಪಟೇಲ್ 5, ರವಿಚಂದ್ರನ್ ಅಶ್ವಿನ್ 2, ಕಾಗಿಸೊ ರಬಾಡಾ 4 ರನ್‌ನೊಂದಿಗೆ 19.4 ಓವರ್‌ಗೆ 7 ವಿಕೆಟ್ ಕಳೆದು 139 ರನ್ ಗಳಿಸಿತು.

For Quick Alerts
ALLOW NOTIFICATIONS
For Daily Alerts
Story first published: Tuesday, October 5, 2021, 16:59 [IST]
Other articles published on Oct 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X