ಐಪಿಎಲ್ ನಂತರ ಇಂಗ್ಲೆಂಡ್‌ಗೆ ತೆರಳಿ ಆಸ್ಟ್ರೇಲಿಯಾಗೆ ಪ್ರಯಾಣದ ಸುಳಿವು ನೀಡಿದ ಮ್ಯಾಕ್ಸ್‌ವೆಲ್

ಭಾರತದಲ್ಲಿ ಐಪಿಎಲ್ ಆರಂಭವಾಗುತ್ತಿದ್ದಂತೆಯೇ ಎರಡನೇ ಅಲೆಯ ಕೊರೊನಾ ವೈರಸ್ ತೀವ್ರವಾಗಿ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರ ಈಗ ಭಾರತದಿಂದ ತೆರಳುವ ಎಲ್ಲಾ ಪ್ರಯಾಣಿಕ ವಿಮಾನಗಳನ್ನು ನಿರ್ಬಂಧಿಸಿದೆ. ಹೀಗಾಗಿ ಆಸ್ಟ್ರೇಲಿಯಾದ ಕ್ರಿಕೆಟಿಗರಿಗೆ ತವರಿಗೆ ಮರಳುವ ಬಗ್ಗೆ ಚಿಂತೆ ಆರಂಭವಾಗಿದೆ. ಆದರೆ ಈ ಬಿಸಿಸಿಐ ಎಲ್ಲಾ ಕ್ರಿಕೆಟಿಗರಿಗೆ ಯಾವುದೇ ಆತಂಕವಿಲ್ಲದೆ ತವರಿಗೆ ಮರಳುವ ವ್ಯವಸ್ಥೆಯ ಬಗ್ಗೆ ಭರವಸೆ ನೀಡಿದೆ.

ಈ ಮಧ್ಯೆ ಆಸ್ಟ್ರೇಲಿಯಾದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಆಸಿಸ್ ಆಟಗಾರರು ತವರಿಗೆ ಮರಳಲು ಇರುವ ದಾರಿಯ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ಆಟಗಾರರ ಜೊತೆಗೆ ಆಸ್ಟ್ರೇಲಿಯಾದ ಆಟಗಾರರು ಕೂಡ ಇಂಗ್ಲೆಂಡ್‌ಗೆ ಪ್ರಯಾಣಿಸುವ ಬಗ್ಗೆ ಮ್ಯಾಕ್ಸ್‌ವೆಲ್ ಮಾತನಾಡಿದ್ದಾರೆ.

RCB vs PBKS, Preview: ಬೆಂಗಳೂರು vs ಪಂಜಾಬ್, ಸಂಭಾವ್ಯ ತಂಡ ಹಾಗೂ ಪಂದ್ಯದ ಮಾಹಿತಿRCB vs PBKS, Preview: ಬೆಂಗಳೂರು vs ಪಂಜಾಬ್, ಸಂಭಾವ್ಯ ತಂಡ ಹಾಗೂ ಪಂದ್ಯದ ಮಾಹಿತಿ

ಐಪಿಎಲ್ ಮುಕ್ತಾಯದ ನಂತರ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ಗೆ ಪ್ರಯಾಣವನ್ನು ನಡೆಸಲಿದೆ. ಐಪಿಎಲ್‌ನಲ್ಲಿ ಪಾಲ್ಗೊಂಡಿರುವ ಇಂಗ್ಲೆಂಡ್ ಕ್ರಿಕೆಟಿಗರು ಕೂಡ ಇದರಲ್ಲಿ ಪ್ರಯಾಣಿಸಲಿದ್ದಾರೆ. ಈಗಿನ ಬೆಳವಣಿಗೆಯ ಪ್ರಕಾರ ಈ ಮೂರು ರಾಷ್ಟ್ರಗಳ ಆಟಗಾರರ ಜೊತೆಗೆ ಆಸ್ಟ್ರೇಲಿಯಾ ಆಟಗಾರರು ಕೂಡ ಇಂಗ್ಲೆಂಡ್‌ಗೆ ಪ್ರಯಾಣಿಸುವ ಸಂಭವವಿದೆ ಎನ್ನಲಾಗಿದೆ.

"ನಾವು ತವರಿಗೆ ಮರಳು ಇರುವ ದಾರಿಗಳತ್ತ ಚಿತ್ತ ನೆಟ್ಟಿದ್ದೇವೆ. ಇದಕ್ಕಿರುವ ಪರಿಹಾರಗಳ ಬಗ್ಗೆ ಬಿಸಿಸಿಐ ಎರಡು ದೇಶಗಳ ಸರ್ಕಾರದ ಜೊತೆಗೆ ಸಂಪರ್ಕದಲ್ಲಿದೆ. ನಾವು ಸ್ವಲ್ಪ ಕಾಲ ಕಾಯಬೇಕಾಗಬಹುದು ಆದರೆ ನಮಗೆ ತವರಿಗೆ ಮರಳುವ ದಾರಿಯಿದೆ" ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

ಪೃಥ್ವಿ ಶಾ ಬ್ಯಾಟಿಂಗ್ ಹೊಗಳಿ ಕೆಕೆಆರ್ ಪ್ರದರ್ಶನಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಮೆಕ್ಕಲಂಪೃಥ್ವಿ ಶಾ ಬ್ಯಾಟಿಂಗ್ ಹೊಗಳಿ ಕೆಕೆಆರ್ ಪ್ರದರ್ಶನಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಮೆಕ್ಕಲಂ

"ಭಾರತ ಮತ್ತು ಇಂಗ್ಲೆಂಡ್‌ನಲ್ಲಿ ಸರಣಿಯಲ್ಲಿ ಭಾಗಿಯಾಗಲಿದೆ. ನಾವು ಕೂಡ ಇಂಗ್ಲೆಂಡ್‌ನಲ್ಲಿ ಕಾಯಬೇಕಾಗಬಹುದು. ಭಾರತದಿಂದ ಹೊರ ತೆರಳಬೇಕಾದರೆ ಇದೊಂದು ಮಾರ್ಗವಿದೆ. ಈ ದಾರಿಯ ಬಗ್ಗೆ ಖಂಡಿತವಾಗಿಯೂ ಪ್ರಯತ್ನಗಳು ನಡೆಯಲಿದೆ ಎಂಬ ಭರವಸೆ ನನಗಿದೆ" ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, April 30, 2021, 16:20 [IST]
Other articles published on Apr 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X