ಐಪಿಎಲ್ 2021: ಸಿಎಸ್‌ಕೆ vs ಪಿಬಿಕೆಎಸ್, ಟಾಸ್ ವರದಿ, Live ಸ್ಕೋರ್, ಪ್ಲೇಯಿಂಗ್ XI

ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈ ಬಾರಿ ಐಪಿಎಲ್‌ನ ಕೊನೆಯ ಲೀಗ್ ಪಂದ್ಯವನ್ನಾಡಲು ಕಣಕ್ಕಿಳಿದಿದೆ. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಧೋನಿ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ಈಗಾಗಲೇ ಪ್ಲೇಆಫ್ ಪ್ರವೇಶಿಸಿರುವ ಕಾರಣ ಚೆನ್ನೈ ಹೆಚ್ಚು ನಿರಾಳವಾಗಿದೆ. ಆದರೆ ಪಂಜಾಬ್ ತಂಡಕ್ಕೆ ಪ್ಲೇಆಫ್‌ಗೇರುವ ಕನಸು ಬಹುತೇಕ ಅಂತ್ಯವಾಗಿದ್ದು ತುಂಬಾ ಸಣ್ಣ ಅವಕಾಶವೊಂದಿದೆ. ಹೀಗಾಗಿ ರಾಹುಲ್ ಪಡೆ ಅದೃಷ್ಠ ಪರೀಕ್ಷೆಗೆ ಇಳಿದಿದೆ.

ಆ ರನೌಟ್ ಪಂದ್ಯದ ಗತಿ ಬದಲಾಯಿಸಿತು: ಎಸ್‌ಆರ್‌ಹೆಚ್ ವಿರುದ್ಧ ಸೋತ ಬಳಿಕ ಕೊಹ್ಲಿ ಪ್ರತಿಕ್ರಿಯೆಆ ರನೌಟ್ ಪಂದ್ಯದ ಗತಿ ಬದಲಾಯಿಸಿತು: ಎಸ್‌ಆರ್‌ಹೆಚ್ ವಿರುದ್ಧ ಸೋತ ಬಳಿಕ ಕೊಹ್ಲಿ ಪ್ರತಿಕ್ರಿಯೆ

ಇನ್ನು ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಒಂದು ಬದಲಾವಣೆ ಮಾಡಿಕೊಂಡಿದೆ. ಈ ಟೂರ್ನಿಯಲ್ಲಿ ಪಂಜಾಬ್ ಪರವಾಗಿ ನಿರಂತರವಾಗಿ ಅವಕಾಶ ಪಡೆಯುತ್ತಿದ್ದರೂ ಭಾರೀ ವೈಫಲ್ಯ ಅನುಭವಿಸಿರುವ ನಿಕೋಲಸ್ ಪೂರನ್ ಈ ಪಂದ್ಯದಲ್ಲಿ ಹೊರಬಿದ್ದಿದ್ದಾರೆ. ಪೂರನ್ ಬದಲಿಗೆ ಕ್ರಿಸ್ ಜೋರ್ಡಾನ್‌ಗೆ ಅವಕಾಶ ನೀಡಲಾಗಿದೆ.

1
50858

ಭರ್ಜರಿ ಸಿಕ್ಸರ್‌ಗಳಿಗಾಗಿ ಅಪರೂಪದ ದಾಖಲೆ ಬರೆದ ಎಬಿ ಡಿ ವಿಲಿಯರ್ಸ್ಭರ್ಜರಿ ಸಿಕ್ಸರ್‌ಗಳಿಗಾಗಿ ಅಪರೂಪದ ದಾಖಲೆ ಬರೆದ ಎಬಿ ಡಿ ವಿಲಿಯರ್ಸ್

ಇನ್ನು ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಈ ಪಂದ್ಯದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಕಣಕ್ಕಿಳಿಯುತ್ತಿದೆ. ಹೀಗಾಗಿ ಕನ್ನಡಿಗ ರಾಬಿನ್ ಉತ್ತಪ್ಪ ಈ ಪಂದ್ಯದಲ್ಲಿಯೂ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಟೂರ್ನಿಯುದ್ದಕ್ಕೂ ಬೆಂಚ್ ಕಾದಿದ್ದ ಉತ್ತಪ್ಪ ಕಳೆದ ಪಂದ್ಯದಲ್ಲಿ ಸುರೇಶ್ ರೈನಾ ಬದಲಿಗೆ ಕಣಕ್ಕಿಳಿದಿದ್ದರು. ಆದರೆ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಈಗ ಮತ್ತೊಂದು ಅವಕಾಶ ಕರ್ನಾಟಕ ಮೂಲದ ಆಟಗಾರನಿಗೆ ದೊರೆತಿದ್ದು ಈ ಅವಕಾಶವನ್ನು ಹೇಗೆ ಬಳಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಪ್ರಸಕ್ತ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇತರೆ ಎಲ್ಲಾ ತಂಡಗಳನ್ನು ಹಿಂದಿಕ್ಕಿ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಬಳಿಕ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಅಧಿಕೃತವಾಗಿ ಪ್ಲೇ ಆಫ್ ಟಿಕೆಟ್ ಖಚಿತಪಡಿಸಿಕೊಂಡಿತು. ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಿದ ಮೂರನೇ ತಂಡ ಎನಿಸಿಕೊಂಡಿದೆ. ಆದರೆ ನಾಲ್ಕನೇ ಸ್ಥಾನಕ್ಕಾಗಿ ಈಗ ಪೈಪೋಟಿ ಜೋರಾಗಿದೆ.

1
50858

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XI: ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ (ವಿಕೆಟ್ ಕೀಪರ್/ ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜೋಶ್ ಹ್ಯಾಜಲ್‌ವುಡ್

ಬೆಂಚ್: ಸುರೇಶ್ ರೈನಾ, ಚೇತೇಶ್ವರ ಪೂಜಾರ, ಕರ್ನ್ ಶರ್ಮಾ, ಇಮ್ರಾನ್ ತಾಹಿರ್, ಜೇಸನ್ ಬೆಹ್ರೆಂಡೋರ್ಫ್, ಕೃಷ್ಣಪ್ಪ ಗೌತಮ್, ಲುಂಗಿ ನ್ಗಿಡಿ, ಮಿಚೆಲ್ ಸ್ಯಾಂಟ್ನರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಹರಿ ನಿಶಾಂತ್, ಎನ್ ಜಗದೀಶನ್, ಕೆಎಂ ಆಸಿಫ್, ಹರಿಶಂಕರ್ ರೆಡ್ಡಿ, ಭಗತ್ ವರ್ಮ

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI: ಕೆಎಲ್ ರಾಹುಲ್ (ನಾಯಕ/ ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ಸರ್ಫರಾಜ್ ಖಾನ್, ಶಾರುಖ್ ಖಾನ್, ಮೊಯಿಸ್ ಹೆನ್ರಿಕ್ಸ್, ಕ್ರಿಸ್ ಜೋರ್ಡಾನ್, ಹರಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್

ಬೆಂಚ್: ಆದಿಲ್ ರಶೀದ್, ಮನ್ ದೀಪ್ ಸಿಂಗ್, ಜಲಜ್ ಸಕ್ಸೇನಾ, ದೀಪಕ್ ಹೂಡಾ, ಫ್ಯಾಬಿಯನ್ ಅಲೆನ್, ಸೌರಭ್ ಕುಮಾರ್, ಇಶಾನ್ ಪೊರೆಲ್, ಉತ್ಕರ್ಷ ಸಿಂಗ್, ದರ್ಶನ್ ನಲ್ಕಂಡೆ, ಪ್ರಭಸಿಮ್ರಾನ್ ಸಿಂಗ್, ನಾಥನ್ ಎಲ್ಲಿಸ್, ಮುರುಗನ್ ಅಶ್ವಿನ್, ನಿಕೋಲಸ್ ಪೂರನ್

KL Rahul ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada
1
4-2021
ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Thursday, October 7, 2021, 15:32 [IST]
Other articles published on Oct 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X