ಐಪಿಎಲ್ 2021: ಸನ್‌ರೈಸರ್ಸ್ ಫ್ರಾಂಚೈಸಿ ಬಗ್ಗೆ ಮೊದಲ ಬಾರಿಗೆ ಬೇಸರ ಹೊರಹಾಕಿದ ವಾರ್ನರ್

ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಹಾಗೂ ಆಟಗಾರನಾಗಿ ಮಿಂಚಿದ್ದ ಡೇವಿಡ್ ವಾರ್ನರ್ ಪ್ರತಿ ಆವೃತ್ತಿಯಲ್ಲಿಯೂ ಅಬ್ಬರಿಸುತ್ತಲೇ ಬಂದಿದ್ದರು. ಆದರೆ ಈ ಬಾರಿಯ ಐಪಿಎಲ್ ಆವೃತ್ತಿ ಮಾತ್ರ ಡೇವಿಡ್ ವಾರ್ನರ್ ಪಾಲಿಗೆ ಅತ್ಯಂತ ಕಹಿ ಅನುಭವ ನೀಡಿದೆ. 2017ರ ಆವೃತ್ತಿಯಲ್ಲಿ ಹೈದರಾಬಾದ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ವಾರ್ನರ್ ಈ ಬಾರಿಯ ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ನಾಯಕತ್ವವನ್ನೇ ಕಳೆದುಕೊಂಡಿದ್ದರು. ಅದಾದ ಬಳಿಕವೂ ಡೇವಿಡ್ ವಾರ್ನರ್ ಅವರನ್ನು ಫ್ರಾಂಚೈಸಿ ನಡೆಸಿಕೊಂಡ ರೀತಿಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ.

ಐಪಿಎಲ್‌ನಲ್ಲಿ ಆರ್‌ಸಿಬಿ ನಾಯಕರಾಗಿ ವಿರಾಟ್ ಕೊಹ್ಲಿ ಅಂಕಿ-ಅಂಶಗಳು!ಐಪಿಎಲ್‌ನಲ್ಲಿ ಆರ್‌ಸಿಬಿ ನಾಯಕರಾಗಿ ವಿರಾಟ್ ಕೊಹ್ಲಿ ಅಂಕಿ-ಅಂಶಗಳು!

ಮೊದಲಿಗೆ ನಾಯಕತ್ವ ಕಳೆದುಕೊಂಡ ಡೇವಿಡ್ ವಾರ್ನರ್ ಬಳಿಕ ಆಡುವ ಬಳಗದಿಂದಲೂ ಹೊರಬಿದ್ದಿದ್ದರು. ನಂತರ ಅಂತಿಮ 18ರ ತಂಡದಿಂದಲೂ ವಾರ್ನರ್ ಹೊರಗುಳಿದಿದ್ದರು. ಈ ಸಂದರ್ಭದಲ್ಲಿ ವಾರ್ನರ್‌ಗೆ ತಂಡದ ಜೊತೆ ಪ್ರಯಾಣಕ್ಕೂ ಅವಕಾಶ ನೀಡಿರಲಿಲ್ಲ ಎಂದು ಸುದ್ದಿಯಾಗಿತ್ತು. ಬಳಿಕ ವಾರ್ನರ್ ಪ್ರೇಕ್ಷಕರ ಗ್ಯಾಲರಿಯಲ್ಲಿ ಎಸ್‌ಆರ್‌ಹೆಚ್ ಜರ್ಸಿ ಜೊಟ್ಟು ತಂಡದ ಆಟಗಾರರನ್ನು ಹುರಿದುಂಬಿಸುತ್ತಿರುವುದು ಕಾಣಿಸಿತ್ತು. ಆದರೆ ಈ ಬಗ್ಗೆ ವಾರ್ನರ್ ಯಾವುದೇ ಹೇಳಿಕೆ ನೀಡಿರಲಿಲ್ಲ. ಆದರೆ ಈಗ ಡೇವಿಡ್ ವಾರ್ನರ್ ಮೊದಲ ಬಾರಿಗೆ ಪ್ರಾಂಚೈಸಿ ನಡೆಸಿಕೊಂಡ ವಿಚಾರವಾಗಿ ಬಾಯ್ಬಿಟ್ಟಿದ್ದಾರೆ.

ಫ್ರಾಂಚೈಸಿ ಬಗ್ಗೆ ಬೇಸರ ವ್ಯಕ್ತಪಡಿಸಿದ ವಾರ್ನರ್

ಫ್ರಾಂಚೈಸಿ ಬಗ್ಗೆ ಬೇಸರ ವ್ಯಕ್ತಪಡಿಸಿದ ವಾರ್ನರ್

ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಸ್ಪೋರ್ಟ್ಸ್ ಟುಡೇ ಜೊತೆಗೆ ಸಂವಾದ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಾರ್ನರ್ ಕೇವಲ ನಾಲ್ಕು ಪಂದ್ಯಗಳಲ್ಲಿ ಕೆಟ್ಟ ಪ್ರದರ್ಶನ ನೀಡಿದ ಕಾರಣಕ್ಕಾಗಿ 8 ವರ್ಷಗಳಿಗೂ ಅಧಿಕ ಕಾಲ ತಂಡಕ್ಕಾಗಿ ತಾನು ನೀಡಿದ ಕೊಡುಗೆಯನ್ನು ಫ್ರಾಂಚೈಸಿ ಕಡೆಗಣಿಸಿತು ಎಂದು ಬೇಸರವನ್ನು ಹೊರಹಾಕಿದ್ದಾರೆ. ಅಲ್ಲದೆ ಪ್ರಾಂಚೈಸಿ ನಡೆಸಿಕೊಂಡ ರೀತಿಯ ವಿಚಾರವಾಗಿ ಕೆಲ ಉತ್ತರ ದೊರೆಯದ ಪ್ರಶ್ನೆಗಳು ತನ್ನನ್ನು ಇನ್ನೂ ಕಾಡುತ್ತಿದೆ ಎಂದು ವಾರ್ನರ್ ಹೇಳಿಕೊಂಡಿದ್ದಾರೆ. ಈ ಪ್ರಶ್ನೆಗಳಿಗೆ ಶೀಘ್ರದಲ್ಲಿಯೇ ಉತ್ತರ ದೊರೆಯಬಹುದು ಎಂದು ಕೂಡ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ ವಾರ್ನರ್.

"ನನಗಿರುವ ಬೇಸರ ಅದೊಂದೆ.."

ಫ್ರಾಂಚೈಸಿ ತನ್ನನ್ನು ನಡೆಸಿಕೊಂಡ ವಿಚಾರವಾಗಿ ಡೇವಿಡ್ ವಾರ್ನರ್ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು "ನನಗಿರುವ ಒಂದೇ ಒಂದು ಬೇಸರವೆಂದರೆ ನನ್ನನ್ನು ಯಾವ ಕಾರಣಕ್ಕಾಗಿ ನಾಯಕತ್ವದಿಂದ ಕೆಳಗಿಳಿಸಲಾಯಿತು ಎಂದು ವಿವರಣೆಯನ್ನು ನೀಡಲಿಲ್ಲ. ಫಾರ್ಮ್‌ನ ಕಾರಣಕ್ಕಾಗಿಯಾಗಿದ್ದರೆ ಅದನ್ನು ಒಪ್ಪಿಕೊಳ್ಳುವುದು ಕಷ್ಟ. ಯಾಕೆಂದರೆ ಈ ಹಿಂದೆ ನೀಡಿದ್ದ ಪ್ರದರ್ಶನಗಳು ಪರಿಗಣನೆಗೆ ಬರುತ್ತವೆ. ಅದರಲ್ಲೂ ನೂರು ಪಂದ್ಯಗಳನ್ನಿ ಒಂದು ತಮಡಕ್ಕಾಗಿ ಆಡಿದ್ದಾಗ ಚೆನ್ನೈನಲ್ಲಿ ಆಡಿದ ಮೊದಲ ಐದು ಪಂದ್ಯಗಳ ಪೂಕಿ ನಾಲ್ಕರಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ನಾಯಕತ್ವದಿಂದ ಕಿತ್ತುಕೊಳ್ಳುತ್ತೀರಾದರೆ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ಈ ಬಗ್ಗೆ ನನ್ನಲ್ಲಿನ್ನೂ ಉತ್ತರ ದೊರೆಯದ ಪ್ರಶ್ನೆಗಳಿದೆ. ಆದರೆ ಅವುಗಳನ್ನು ಬಿಟ್ಟು ನಾನು ಮುಂದುವರಿಯಬೇಕಿದೆ" ಎಂದಿದ್ದಾರೆ ಡೇವಿಡ್ ವಾರ್ನರ್.

ಭಾವನಾತ್ಮಕ ಸಂದೇಶ ಬರೆದಿದ್ದ ವಾರ್ನರ್

ಭಾವನಾತ್ಮಕ ಸಂದೇಶ ಬರೆದಿದ್ದ ವಾರ್ನರ್

ಈ ಸಂದರ್ಭದಲ್ಲಿ ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣದಲ್ಲಿ ತಂಡ ತೊರೆಯುತ್ತಿರುವ ಬಗ್ಗೆ ಭಾವನಾತ್ಮಕ ಸಂದೇಶ ನೀಡಿದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಐಪಿಎಲ್ 2022ರ ಆವೃತ್ತಿಗೆ ಫ್ರಾಂಚೈಸಿ ತನ್ನನ್ನು ಉಳಿಸಿಕೊಳ್ಳುವುದಿಲ್ಲ ಎಂಬ ಭಾವನೆ ನನಗೆ ಬಂದಿದೆ. ಹೀಗಾಗಿ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಇದು ಸರಿಯಾದ ಸಮಯ ಎನಿಸಿತ್ತು. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ನಾನು ಈ ಬಗ್ಗೆ ಹಂಚಿಕೊಂಡಿದ್ದೇನೆ ಎಂದು ವಾರ್ನರ್ ವಿವರಿಸಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಬಹುತೇಕ ಎಲ್ಲಾ ಬ್ಯಾಟಿಂಗ್ ದಾಖಲೆಗಳನ್ನು ಕೂಡ ಡೇವಿಡ್ ವಾರ್ನರ್ ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಮಡವನ್ನು ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸುವ ಮೂಲಕ ಯಶಸ್ವೀ ನಾಯಕರ ಪಟ್ಟಿಗೂ ಸೇರಿಕೊಂಡಿದ್ದಾರೆ. 2020ರ ಐಪಿಎಲ್ ಟೂರ್ನಿಯಲ್ಲಿ ಪ್ಲೇಆಫ್ ಪ್ರವೇಶಿಸಿದ್ದ ಹೈದರಾಬಾದ್ ಮೂರನೇ ಸ್ಥಾನ ಪಡೆದು ಮಿಂಚಿತ್ತು. ಆದರೆ ಈ ಬಾರಿ ಲೀಗ್ ಹಂತದಲ್ಲಿ ಕೊನೆಯ ಸ್ಥಾನ ಪಡೆದು ಹೊರಬಿದ್ದಿದೆ.

Virat Kohli ಅಸಲಿಗೆ Umpire ವಿರುದ್ಧ ಕಿಡಿಕಾರಿದ್ದೇಕೆ | Oneindia Kannada
ಸನ್‌ರೈಸರ್ಸ್ ಜೊತೆಗೆ ಮುಂದುವರಿಯಲು ಇಷ್ಟಪಡುತ್ತೇನೆ

ಸನ್‌ರೈಸರ್ಸ್ ಜೊತೆಗೆ ಮುಂದುವರಿಯಲು ಇಷ್ಟಪಡುತ್ತೇನೆ

ಇಷ್ಟಲ್ಲಾ ಆಗಿದ್ದರೂ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ತೊರೆಯಲು ಡೇವಿಡ್ ವಾರ್ನರ್‌ಗೆ ಮನಸ್ಸು ಒಪ್ಪುತ್ತಿಲ್ಲ ಎಂಬುದು ಅವರ ಮಾತುಗಳಿಂದಲೇ ಸ್ಪಷ್ಟವಾಗುತ್ತದೆ. "ಹೈದರಾಬಾದ್ ನನ್ನ ಎರಡನೇ ತವರು. ನನ್ನನ್ನು ಇಲ್ಲಿನ ಜನ ಸಾಕಷ್ಟು ಗೌರವದಿಂದ ಕುಟುಂಬದ ಸದಸ್ಯನಂತೆ ಪ್ರೀತಿಸಿದ್ದಾರೆ. ಪ್ರತಿ ಬಾರಿಯೂ ನಾನು ಅಲ್ಲಿಗೆ ತೆರಳಿದಾಗ ಜನರು ನನ್ನನ್ನು ಅಪ್ಪಿಕೊಳ್ಳಲು ಬಯಸುತ್ತಾರೆ, ಅವರ ಮಕ್ಕಳೊಂದಿಗೆ ಮಾತನಾಡಿಸುತ್ತಾರೆ. ನನ್ನ ಜೀವನದಲ್ಲಿ ಇದು ಬಹಳ ಮುಖ್ಯವಾದ ಸಂಗತಿ. ಇಂತಾ ಕ್ಷಣಗಳಿಗಾಗಿ ನಾನು ಹೆಮ್ಮೆ ಪಡುತ್ತೇನೆ, ಭವಿಷ್ಯದಲ್ಲಿ ಏನಾಗಲಿದೆಯೋ ನನಗೆ ತಿಳಿದಿಲ್ಲ. ಮುಂದಿನ ವರ್ಷವೂ ಸನ್‌ರೈಸರ್ಸ್ ಪರವಾಗಿ ಆಡಲು ನಾನು ಇಷ್ಟಪಡುತ್ತೇನೆ. ಅದರೆ ಅದನ್ನು ಸಮಯ ಹೇಳಬೇಕಿದೆ. 2022ರಲ್ಲಿ ಐಪಿಎಲ್‌ನ ಭಾಗವಾಗಲು ನಾನು ಇಷ್ಟಪಡುತ್ತೇನೆ" ಎಂದು ವಾರ್ನರ್ ಮುಕ್ತವಾಗಿ ತಮ್ಮ ಭಾವನೆಯನ್ನು ಹಂಚಿಕೊಮಡಿದ್ದಾರೆ

For Quick Alerts
ALLOW NOTIFICATIONS
For Daily Alerts
Story first published: Tuesday, October 12, 2021, 21:56 [IST]
Other articles published on Oct 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X