ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಆಡುವ ಬಗ್ಗೆ ಫ್ರಾಂಚೈಸಿಗಳಲ್ಲಿ ವಿಶ್ವಾಸ

ನವದೆಹಲಿ: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಕ್ಟೋಬರ್-ನವೆಂಬರ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ 2021ರ ಐಪಿಎಲ್‌ನ ಇನ್ನುಳಿದ ಪಂದ್ಯಗಳನ್ನು ನಡೆಸುವ ನಿರ್ಧಾರ ಪ್ರಕಟಿಸಿದೆ. ಫ್ರಾಂಚೈಸಿಗಳು ಈಗಾಗಲೇ ಇದಕ್ಕೆ ಸಿದ್ಧತೆ ನಡೆಸುತ್ತಿವೆ.
ಆಗಸ್ಟ್ ತಿಂಗಳ ಮೂರನೇ ವಾರ ಯುಇಗೆ ಸ್ಥಳಾಂತರಗೊಳ್ಳಲು ಐಪಿಎಲ್ ಫ್ರಾಂಚೈಸಿಗಳು ಯೋಚಿಸುತ್ತಿವೆ. ಕೊರೊನಾವೈರಸ್ ಮುನ್ನೆಚ್ಚರಿಕಾ ಕ್ರಮಗಳು ಮತ್ತು ಇನ್ನಿತರ ಸಂಗತಿಗಳ ಬಗ್ಗೆ ಬಿಸಿಸಿಐ ಜೊತೆಗೆ ಚರ್ಚಿಸಿದ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಫ್ರಾಂಚೈಸಿಗಳು ಎದುರು ನೋಡುತ್ತಿವೆ ಎಂದು ಹೇಳಲಾಗುತ್ತಿದೆ.
ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಐಪಿಎಲ್ ಇನ್ನುಳಿದ ಪಂದ್ಯಗಳಲ್ಲಿ ವಿದೇಶಿ ಆಟಗಾರರು ಆಡೋದು ಅನುಮಾನ ಎಂಬ ಮಾತುಗಳು ಕೇಳಿ ಬಂದಿತ್ತು. ಕಾರಣ, ಐಪಿಎಲ್ ಮುಗಿದು ಶೀಘ್ರದಲ್ಲೇ ಟಿ20 ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಆದರೆ ಫ್ರಾಂಚೈಸಿಗಳಿಗೆ ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಆಡುವ ಬಗ್ಗೆ ವಿಶ್ವಾಸವಿದೆ.
'ಒಂದು ಅಥವಾ ಎರಡು ತಂಡಗಳು ಬಿಟ್ಟು ಉಳಿದೆಲ್ಲಾ ತಂಡಗಳು ಕಳೆದ ಸೀಸನ್‌ನಲ್ಲಿ ಬುಕ್ ಮಾಡಿದ್ದ ಅದೇ ಹೋಟೆಲ್‌ಗಳನ್ನು ಬುಕ್ ಮಾಡಲಿವೆ. ಇದು ತಂಡಗಳು ಮತ್ತು ಸಿಬ್ಬಂದಿಗಳು ಇಬ್ಬರಿಗೂ ಬಯೋ ಬಬಲ್ ಒಳಗೆ ಏನು ವ್ಯವಸ್ಥೆ ಮಾಡಬೇಕು ಅನ್ನೋದು ತಿಳಿದುಕೊಳ್ಳಲು ನೆರವಾಗುತ್ತದೆ,' ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications