ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂಜಾಬ್ ಕಿಂಗ್ಸ್ ವಿರುದ್ಧ ಮ್ಯಾಕ್ಸ್‌ವೆಲ್ ಅಬ್ಬರಕ್ಕೆ ತಲೆದೂಗಿದ ಗೌತಮ್ ಗಂಭೀರ್‌

IPL 2021: Gautam Gambhir praises Glenn Maxwells knock said Unbelievable

ಕಳೆದ ಬಾರಿಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರವಾಗಿ ಕಣಕ್ಕಿಳಿದಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಅತ್ಯಂತ ಹೀನಾಯ ಪ್ರದರ್ಶನವನ್ನು ನೀಡಿದ್ದರು. ಹೀಗಾಗಿ ಸಾಕಷ್ಟು ಟೀಕೆಗೂ ಗುರಿಯಾಗಿದ್ದರು. ಆದರೆ ಈ ಬಾರಿಯ ಐಪಿಎಲ್ ಆವೃತ್ತಿಗೆ ಆರ್‌ಸಿಬಿ ತೆಕ್ಕೆಗೆ ಬಿದ್ದಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಭಾನುವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿಯೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿರುವ ಮ್ಯಾಕ್ಸ್‌ವಲ್ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ.

ಐಪಿಎಲ್: ಆಡಿದ ಮೊದಲ ಪಂದ್ಯದಲ್ಲಿಯೇ ದಾಖಲೆ ಬರೆದ ಸನ್ ರೈಸರ್ಸ್ ಹೈದರಾಬಾದ್‌ನ ಉಮ್ರಾನ್ ಮಲಿಕ್ಐಪಿಎಲ್: ಆಡಿದ ಮೊದಲ ಪಂದ್ಯದಲ್ಲಿಯೇ ದಾಖಲೆ ಬರೆದ ಸನ್ ರೈಸರ್ಸ್ ಹೈದರಾಬಾದ್‌ನ ಉಮ್ರಾನ್ ಮಲಿಕ್

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ನೀಡಿದ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಮ್ಯಾಕ್ಸ್‌ವೆಲ್ ಪ್ರದರ್ಶನವನ್ನು ಗಂಭೀರ್ 'ನಂಬಲಸಾಧ್ಯ' ಎಂದು ಉದ್ಘರಿಸಿದ್ದಾರೆ. ಭಾನುವಾರ ಮಧ್ಯಾಹ್ನ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಕೇವಲ 33 ಎಸೆತಗಳಲ್ಲಿ 57 ರನ್ ಬಾರಿಸಿದ್ದರು. ಮ್ಯಾಕ್ಸ್‌ವೆಲ್ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಆರ್‌ಸಿಬಿ 164/7 ರನ್‌ಗಳ ಸವಾಲಿನ ಮೊತ್ತವನ್ನು ಪೇರಿಸಲು ಯಶಸ್ವಿಯಾಗಿತ್ತು. ಈ ಪಂದ್ಯದವನ್ನು ಕೊಹ್ಲಿ ಪಡೆ 6 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ಗೌತಮ್ ಗಂಭೀರ್ ಗ್ಲೆನ್ ಮ್ಯಾಕ್ಸ್‌ವೆಲ್ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ. "ನಿಜಕ್ಕೂ ನಂಬುವುದು ಕಷ್ಟ. ಆತ ದೊಡ್ಡ ದೊಡ್ಡ ಹೊಡೆತಗಳನ್ನು ಬಾರಿಸಿದ್ದಾರೆ ಎಂಬ ಕಾರಣಕ್ಕೆ ಮಾತ್ರವಲ್ಲ ಆ ದೊಡ್ಡ ಶಾಟ್‌ಗಳನ್ನು ಬಾರಿದಸಿದ ರೀತಿಗೆ. ಎರಡು ದೊಡ್ಡ ಹೊಡೆತಗಳನ್ನು ಅವರು ಬಿಷ್ಣೋಯ್ ಎಸೆತಕ್ಕೆ ಬಾರಿಸಿದರೆ ಎರಡು ಶಾಟ್‌ಗಳು ಹರ್ಪ್ರೀತ್ ಬ್ರಾರ್ ಎಸೆತದಲ್ಲಿ ಬಂದಿದೆ. ಅದನ್ನು ಹೊರತಾಗಿಯೂ ತನ್ನ ಹೊಡೆತಗಳಲ್ಲಿ ಮ್ಯಾಕ್ಸ್‌ವೆಲ್ ಅದ್ಭುತವಾಗಿ ನಿಯಂತ್ರಣವನ್ನು ಹೊಂದಿದ್ದರು" ಎಂದಿದ್ದಾರೆ ಗೌತಮ್ ಗಂಭೀರ್.

ಅವರಿಬ್ಬರು ಪಂದ್ಯವನ್ನು ಪವರ್‌ಪ್ಲೇನಲ್ಲಿಯೇ ಮುಗಿಸಿದ್ದರು: ಸಂಜು ಸ್ಯಾಮ್ಸನ್ ಪ್ರತಿಕ್ರಿಯೆಅವರಿಬ್ಬರು ಪಂದ್ಯವನ್ನು ಪವರ್‌ಪ್ಲೇನಲ್ಲಿಯೇ ಮುಗಿಸಿದ್ದರು: ಸಂಜು ಸ್ಯಾಮ್ಸನ್ ಪ್ರತಿಕ್ರಿಯೆ

"ಅಗತ್ಯ ಸಂದರ್ಭದಲ್ಲಿ ಮ್ಯಾಕ್ಸ್‌ವೆಲ್ ತಮ್ಮ ರನ್‌ವೇಗವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಒಂದು ಹಂತದಲ್ಲಿ ಮೋಯ್ಸಿಸ್ ಹೆನ್ರಿಕ್ಯೂಸ್ ಅದ್ಭುತವಾದ ಸ್ಪೆನ್ ಮಾಡುತ್ತಿದ್ದಾಗ ಆರ್‌ಸಿಬಿ 130 ಅಥವಾ 140 ರನ್‌ಗಳಿಗಿಂತ ಹೆಚ್ಚಿನ ರನ್ ಗಳಿಸಲಾರರು ಎಂದು ಭಾವಿಸಿದ್ದೆ. ಆದರೆ ಮ್ಯಾಕ್ಸ್‌ವೆಲ್ ಅವರ ಪ್ರದರ್ಶನದಿಂದಾಗಿ ಆರ್‌ಸಿಬಿ 165 ರನ್‌ಗಳ ಗುರಿಯನ್ನು ಎದುರಾಳಿಗೆ ನೀಡುವಂತಾಯಿತು" ಎಂದಿದ್ದಾರೆ ಗೌತಮ್ ಗಂಭೀರ್.

ಇನ್ನು ಇದೇ ಸಮದರ್ಭದಲ್ಲಿ ಗೌತಮ್ ಗಂಭೀರ್ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿವಲಿಯರ್ಸ್ ಅವರಂತಾ ಆಟಗಾರರು ಅತ್ಯುತ್ತಮ ಲಯದಲ್ಲಿದ್ದಾಗ ಪಿಚ್ ಯಾವ ರೀತಿಯಾಗಿ ವರ್ತಿಸುತ್ತದೆ ಎಂಬುದು ಸಂಗತೊಯೇ ಆಗುವುದಿಲ್ಲ ಎಂದಿದ್ದಾರೆ. "ಅವರಲ್ಲಿರುವ ಸಮರ್ಥ್ಯಕ್ಕೆ ಪಿಚ್ ವೇಗ, ಅಥವಾ ನಿಧಾನ ಯಾವುದು ಕೂಡ ವಿಚಾರವಾಗುವುದಿಲ್ಲ. ಅವರು ಅಂಗಳದ ಹೊರಕ್ಕೆ ಚೆಂಡನ್ನು ಕಳುಹಿಸುತ್ತಿರುತ್ತಾರೆ" ಎಂದಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್ ಮ್ಯಾಕ್ಸ್‌ವೆಲ್ 57 ರನ್‌ಗಳನ್ನು ಗಳಿಸಿದ್ದರು. ಇದರಲ್ಲಿ ಮೂರು ಬೌಂಡರು ಹಾಗೂ ನಾಲ್ಕು ಸಿಕ್ಸರ್ ಒಳಗೊಂಡಿತ್ತು. ಈ ಅಮೋಘ ಪ್ರದರ್ಶನದಿಂದಾಗಿ ಮ್ಯಾಕ್ಸ್‌ವೆಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ"

ಫ್ಲಾಪ್ ಆಗಿರುವ ರೈನಾ ಬದಲು ರಾಬಿನ್ ಉತ್ತಪ್ಪಗೆ ಯಾಕೆ ಅವಕಾಶ ನೀಡುತ್ತಿಲ್ಲ?; ಮಾಜಿ ಕ್ರಿಕೆಟಿಗನ ಪ್ರಶ್ನೆಫ್ಲಾಪ್ ಆಗಿರುವ ರೈನಾ ಬದಲು ರಾಬಿನ್ ಉತ್ತಪ್ಪಗೆ ಯಾಕೆ ಅವಕಾಶ ನೀಡುತ್ತಿಲ್ಲ?; ಮಾಜಿ ಕ್ರಿಕೆಟಿಗನ ಪ್ರಶ್ನೆ

ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದ ಆರ್‌ಸಿಬಿ ಶಾರ್ಜಾದ ಸವಾಲಿನ ಪಿಚ್‌ನಲ್ಲಿ ಉತ್ತಮ ಆರಂಭವನ್ನು ಪಡೆಯಿತು. ನಂತರ ಮಂದ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ಆರ್‌ಸಿಬಿ ಆಸರೆಯಾಗುವ ಮೂಲಕ ಸವಾಲಿನ ಮೊತ್ತ ಪೇರಿಸಲು ಕಾರಣರಾದರು. ಮತ್ತೊಂದು ನಿರ್ಣಾಯಕ ಅರ್ಧಶತಕದ ಕೊಡುಗೆ ನೀಡಿದ ಮ್ಯಾಕ್ಸ್‌ವೆಲ್ ಆರ್‌ಸಿಬಿ 164 ರನ್‌ಗಳಿಸಲು ಕಾರಣರಾದರು. ಯುವ ಆರಂಭಿಕ ಆಟಗಾರ ಪಡಿಕ್ಕಲ್ ಈ ಪಂದ್ಯದಲ್ಲಿಯೂ ಮಿಂಚಿದರು. ಯುಎಇ ಚರಣದಲ್ಲಿ ಫಾರ್ಮ್ ಕಳೆದುಕೊಂಡಂತಿದ್ದ ಎಬಿ ಡಿವಿಲಿಯರ್ಸ್ ಕೂಡ ಈ ಪಂದ್ಯದಲ್ಲಿ ಲಯಕ್ಕೆ ಮರಳಿದರೂ ರನೌಟ್ ಆಗಿ ಫೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 164 ರನ್‌ಗಳಿಸಿತು.

'ಧೋನಿ ಸಿಎಸ್‌ಕೆ ಪರ ಏನೂ ಮಾಡಿಲ್ಲ, ಆದರೂ ತಂಡ ಪ್ಲೇಆಫ್ ತಲುಪಿದೆ' ಎಂದ ಮಾಜಿ ಕ್ರಿಕೆಟಿಗ'ಧೋನಿ ಸಿಎಸ್‌ಕೆ ಪರ ಏನೂ ಮಾಡಿಲ್ಲ, ಆದರೂ ತಂಡ ಪ್ಲೇಆಫ್ ತಲುಪಿದೆ' ಎಂದ ಮಾಜಿ ಕ್ರಿಕೆಟಿಗ

ಸಂಕ್ಷಿಪ್ತ ಸ್ಕೋರ್‌ ಹೀಗಿದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 164 ರನ್‌ (ವಿರಾಟ್ ಕೊಹ್ಲಿ 25, ದೇವದತ್ ಪಡಿಕ್ಕಲ್ 40, ಗ್ಲೆನ್‌ ಮ್ಯಾಕ್ಸ್‌ವೆಲ್‌ 57, ಎಬಿ ಡಿ'ವಿಲಿಯರ್ಸ್‌ 23; ಮೊಹಮ್ಮದ್‌ ಶಮಿ 39 ರನ್‌ಗಳಿಗೆ 3 ವಿಕೆಟ್, ಮೊಯ್ಸೆಸ್‌ ಹೆನ್ರಿಕ್ಯೂಸ್ 12 ರನ್‌ಗಳಿಗೆ 3 ವಿಕೆಟ್).
ಪಂಜಾಬ್ ಕಿಂಗ್ಸ್: ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 158 ರನ್ (ಕೆಎಲ್‌ ರಾಹುಲ್ 39 ರನ್, ಮಯಾಂಕ್ ಅಗರ್ವಾಲ್ 57 ರನ್, ಐಡೆನ್ ಮಾರ್ಕ್ರಮ್ 20 ರನ್; ಯುಜ್ವೇಂದ್ರ ಚಹಲ್ 29ರನ್‌ಗಳಿಗೆ 3 ವಿಕೆಟ್).

Story first published: Tuesday, October 5, 2021, 9:55 [IST]
Other articles published on Oct 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X