ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಲಿಮಿನೇಟರ್ ಪಂದ್ಯದಲ್ಲಿ ಕೊಹ್ಲಿ ಮಾಡಿದ ಈ ತಪ್ಪಿನಿಂದಲೇ ಆರ್‌ಸಿಬಿ ಸೋಲುಂಡಿತು: ಗಂಭೀರ್

IPL 2021: Gautam Gambhir revealed the reason behind RCBs loss against KKR in eliminator match

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು ಇತ್ತೀಚೆಗಷ್ಟೇ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಅಂತಿಮ ಹಂತದಲ್ಲಿ ರೋಚಕ ಜಯ ಸಾಧಿಸುವುದರ ಮೂಲಕ ಕ್ವಾಲಿಫೈಯರ್ 2 ಪಂದ್ಯಕ್ಕೆ ಅರ್ಹತೆಯನ್ನು ಪಡೆದುಕೊಂಡಿದೆ.

ಇನ್ನು ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವೆ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು.

ಐಪಿಎಲ್: ತನ್ನ ಅತಿಹೆಚ್ಚು ವಿಕೆಟ್ ದಾಖಲೆ ಸರಿದೂಗಿಸಿದ ಹರ್ಷಲ್ ಪಟೇಲ್ ಕುರಿತು ಬ್ರಾವೊ ಪ್ರತಿಕ್ರಿಯೆಐಪಿಎಲ್: ತನ್ನ ಅತಿಹೆಚ್ಚು ವಿಕೆಟ್ ದಾಖಲೆ ಸರಿದೂಗಿಸಿದ ಹರ್ಷಲ್ ಪಟೇಲ್ ಕುರಿತು ಬ್ರಾವೊ ಪ್ರತಿಕ್ರಿಯೆ

ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರೋಚಕ 4 ವಿಕೆಟ್‍ಗಳ ಗೆಲುವನ್ನು ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 138 ರನ್ ಕಲೆಹಾಕಿತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ 4 ಓವರ್ ಮಾಡಿದ ಸುನಿಲ್ ನರೈನ್ ಕೇವಲ 21 ರನ್ ನೀಡಿ 4 ವಿಕೆಟ್ ಪಡೆದರು. ಹೀಗೆ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 138 ರನ್ ಕಲೆಹಾಕುವ ಮೂಲಕ ಎದುರಾಳಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಗೆಲ್ಲಲು 139 ರನ್‌ಗಳ ಗುರಿಯನ್ನು ನೀಡಿತು.

ಆರ್‌ಸಿಬಿ ಸೋಲಿಸಿ ಕ್ವಾಲಿಫೈಯರ್2 ತಲುಪಿರುವ ಕೆಕೆಆರ್ ವಿರುದ್ಧ ಕಣಕ್ಕಿಳಿಯಲಿದೆ ಡೆಲ್ಲಿಯ ಈ ಬಲಿಷ್ಠ ತಂಡಆರ್‌ಸಿಬಿ ಸೋಲಿಸಿ ಕ್ವಾಲಿಫೈಯರ್2 ತಲುಪಿರುವ ಕೆಕೆಆರ್ ವಿರುದ್ಧ ಕಣಕ್ಕಿಳಿಯಲಿದೆ ಡೆಲ್ಲಿಯ ಈ ಬಲಿಷ್ಠ ತಂಡ

ಈ ಸುಲಭ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಶುಬ್ ಮನ್ ಗಿಲ್ 29, ವೆಂಕಟೇಶ್ ಐಯ್ಯರ್ 26, ನಿತೀಶ್ ರಾಣಾ 23 ಮತ್ತು ಸುನಿಲ್ ನರೈನ್ 26 ರನ್ ಬಾರಿಸಿದರು. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ 19.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 139 ರನ್ ಕಲೆ ಹಾಕಿ 4 ವಿಕೆಟ್‍ಗಳ ರೋಚಕ ಗೆಲುವನ್ನು ಸಾಧಿಸಿತು.

ಹೀಗೆ ಈ ರೋಚಕ ಹಣಾಹಣಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಡವಿದ್ದೆಲ್ಲಿ ಎಂಬುದರ ಕುರಿತು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ಕೊಹ್ಲಿ ತೆಗೆದುಕೊಂಡ ಈ ನಿರ್ಧಾರವೇ ಸೋಲಿಗೆ ಪ್ರಮುಖ ಕಾರಣ

ಕೊಹ್ಲಿ ತೆಗೆದುಕೊಂಡ ಈ ನಿರ್ಧಾರವೇ ಸೋಲಿಗೆ ಪ್ರಮುಖ ಕಾರಣ

'ಹರ್ಷಲ್ ಪಟೇಲ್ ವಿಕೆಟ್ ಪಡೆದ ಓವರ್‌ನ ಮುಂದಿನ ಓವರ್‌ನ್ನು ವಿರಾಟ್ ಕೊಹ್ಲಿ ತಂಡದ ಪ್ರಮುಖ ಬೌಲರ್‌ಗಳಾದ ಯುಜ್ವೇಂದ್ರ ಚಹಲ್ ಅಥವಾ ಮೊಹಮ್ಮದ್ ಸಿರಾಜ್ ಅವರಿಗೆ ನೀಡದೇ ಡೇನಿಯಲ್ ಕ್ರಿಸ್ಟಿಯನ್ ಅವರಿಗೆ ನೀಡಿದರು. ಆದರೆ ಆ ಓವರ್‌ನಲ್ಲಿ ಡೇನಿಯಲ್ ಕ್ರಿಸ್ಟಿಯನ್ 22 ರನ್ ನೀಡುವುದರ ಮೂಲಕ ಪಂದ್ಯ ಸಂಪೂರ್ಣವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ತಿರುಗಿತು. ಹೀಗೆ ವಿರಾಟ್ ಕೊಹ್ಲಿ ಯುಜ್ವೇಂದ್ರ ಚಹಲ್ ಅಥವಾ ಮೊಹಮ್ಮದ್ ಸಿರಾಜ್ ಅವರಿಗೆ ಬೌಲಿಂಗ್ ನೀಡುವ ಬದಲು ಡೇನಿಯಲ್ ಕ್ರಿಸ್ಟಿಯನ್ ಆಯ್ಕೆಮಾಡಿಕೊಂಡಿದ್ದೇ ಸೋಲಿಗೆ ಪ್ರಮುಖ ಕಾರಣವಾಯಿತು' ಎಂದು ಗೌತಮ್ ಗಂಭೀರ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಡೇನಿಯಲ್ ಕ್ರಿಸ್ಟಿಯನ್ ಅನುಭವದೊಂದಿಗೆ ಬೌಲಿಂಗ್ ಮಾಡಬೇಕಿತ್ತು

ಡೇನಿಯಲ್ ಕ್ರಿಸ್ಟಿಯನ್ ಅನುಭವದೊಂದಿಗೆ ಬೌಲಿಂಗ್ ಮಾಡಬೇಕಿತ್ತು

'ಇದರಲ್ಲಿ ಡೇನಿಯಲ್ ಕ್ರಿಸ್ಟಿಯನ್ ಅವರದ್ದು ಕೂಡ ತಪ್ಪಿದೆ. ಅಪಾರವಾದ ಅನುಭವವನ್ನು ಹೊಂದಿರುವ ಡೇನಿಯಲ್ ಕ್ರಿಸ್ಟಿಯನ್ ಸುನೀಲ್ ನರೈನ್ ರೀತಿಯ ಆಟಗಾರನಿಗೆ ಯಾವ ರೀತಿಯ ಬೌಲಿಂಗ್ ಮಾಡಬೇಕು ಎಂಬುದನ್ನು ಅರಿತು ಬೌಲಿಂಗ್ ಮಾಡಬೇಕಿತ್ತು. ಆದರೆ ಡೇನಿಯಲ್ ಕ್ರಿಸ್ಟಿಯನ್ ತಮ್ಮ ಅನುಭವವನ್ನು ಇಲ್ಲಿ ಬಳಸದೇ ಇರುವುದೇ ಇಷ್ಟು ದೊಡ್ಡ ರನ್ ನೀಡಲು ಕಾರಣವಾಯಿತು' ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

T20 ವಿಶ್ವಕಪ್ ತಂಡ ಸೇರಲಿದ್ದಾರೆ Avesh Khan | Oneindia Kannada
ಒಂದೇ ಓವರ್‌ನಲ್ಲಿ 22 ರನ್ ನೀಡಿದ್ದರು ಡೇನಿಯಲ್ ಕ್ರಿಸ್ಟಿಯನ್

ಒಂದೇ ಓವರ್‌ನಲ್ಲಿ 22 ರನ್ ನೀಡಿದ್ದರು ಡೇನಿಯಲ್ ಕ್ರಿಸ್ಟಿಯನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಡೇನಿಯಲ್ ಕ್ರಿಸ್ಟಿಯನ್ 12ನೇ ಓವರ್ ಬೌಲಿಂಗ್ ಮಾಡಿದರು. ಈ ಒಂದೇ ಒಂದು ಓವರ್‌ನಲ್ಲಿ 22 ರನ್ ನೀಡಿದ ಡೇನಿಯಲ್ ಕ್ರಿಸ್ಟಿಯನ್ ದುಬಾರಿಯಾದರು. ಈ ಓವರ್‌ನಲ್ಲಿ ಸುನಿಲ್ ನರೈನ್ 3 ಸಿಕ್ಸರ್ ಸಿಡಿಸಿದರು ಹಾಗೂ 1 ರನ್ ಕಲೆಹಾಕಿದರು ಮತ್ತು ಡೇನಿಯಲ್ ಕ್ರಿಸ್ಟಿಯನ್ 3 ವೈಡ್ ಎಸೆತಗಳನ್ನು ಹಾಕಿದರು.

Story first published: Tuesday, October 12, 2021, 20:45 [IST]
Other articles published on Oct 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X