ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಬಾರಿಯ ಐಪಿಎಲ್ ಮುಂದುವರೆದರೆ ಕಪ್ ಆರ್‌ಸಿಬಿಯದ್ದೇ ; ಇಲ್ಲಿವೆ 5 ಪ್ರಮುಖ ಕಾರಣಗಳು

IPL 2021 : Here is the list of 5 reasons why RCB can win IPL 2021 when it resumes
RCB ಈ ಬಾರಿ ಗೆದ್ದೇ ಗೆಲ್ಲುತ್ತದೆ , ಯಾಕೆ ಗೊತ್ತಾ? | Oneindia Kannada

ಏಪ್ರಿಲ್ 9ರಂದು ಆರಂಭವಾಗಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಧ್ಯದಲ್ಲಿಯೇ ಮೊಟಕುಗೊಂಡಿದೆ. ಟೂರ್ನಿಯಲ್ಲಿ ಇದುವರೆಗೂ 29 ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದು ಕೆಲ ಆಟಗಾರರಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಕಾರಣ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಮುಂದೂಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಉಳಿದ 31 ಪಂದ್ಯಗಳು ಇಂಗ್ಲೆಂಡ್ ಅಥವಾ ಯುಎಇಯಲ್ಲಿ ನಡೆಯಲಿವೆ ಎಂಬ ಸುದ್ದಿ ಹರಿದಾಡುತ್ತಿದೆ.

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಉತ್ತಮ ಪ್ರದರ್ಶನವನ್ನು ತೋರುವುದರ ಮೂಲಕ ಅಂಕಪಟ್ಟಿಯಲ್ಲಿ ಟಾಪ್ 4 ಸ್ಥಾನಗಳನ್ನು ಪಡೆದುಕೊಂಡಿವೆ. ಟೂರ್ನಿಯಲ್ಲಿ ಯಾರೂ ಊಹಿಸದ ರೀತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭವನ್ನು ಪಡೆದುಕೊಳ್ಳುವುದರ ಮೂಲಕ ಮಿಂಚಿತು ಎಂದು ಹೇಳಿದರೆ ತಪ್ಪಾಗಲಾರದು. ಟೂರ್ನಿಯ ಮೊದಲ 4 ಪಂದ್ಯಗಳಲ್ಲಿ ಸತತವಾಗಿ ಜಯ ಸಾಧಿಸುವುದರ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯ ಮೊದಲ ನಾಲ್ಕೂ ಪಂದ್ಯಗಳನ್ನು ಗೆದ್ದು ಬೀಗಿತು. ಹೀಗೆ ಸ್ಪರ್ಧಾತ್ಮಕ ಪ್ರದರ್ಶನವನ್ನು ನೀಡಿ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ಮುಂದುವರೆದರೆ ಖಚಿತವಾಗಿಯೂ ಟ್ರೋಫಿ ಗೆಲ್ಲಲಿದೆ ಎನ್ನಲಾಗುತ್ತಿದೆ.

ಈ ಬಾರಿಯ ಐಪಿಎಲ್ ಮುಂದುವರೆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆಲ್ಲಲಿದೆ ಎಂದು ಹೇಳುತ್ತಿವೆ ಕೆಳಕಂಡ ಈ 5 ಅಂಶಗಳು

5. ಪೈಪೋಟಿ ನೀಡುವಂತಹ ತಂಡ

5. ಪೈಪೋಟಿ ನೀಡುವಂತಹ ತಂಡ

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪೈಪೋಟಿಯನ್ನು ನೀಡಿ ಸೋಲುವ ಪಂದ್ಯಗಳನ್ನು ಸಹ ಗೆದ್ದುಕೊಂಡಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿಯೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆಯ ಎಸೆತದವರೆಗೂ ಹೋರಾಟ ನಡೆಸಿ 2 ವಿಕೆಟ್‍ಗಳ ಜಯವನ್ನು ಸಾಧಿಸಿತು ಬೆಂಗಳೂರು ತಂಡ. ಅಷ್ಟೇ ಅಲ್ಲದೆ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಪೈಪೋಟಿಯ 6 ರನ್‌ಗಳ ಜಯ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 1 ರನ್‌ನಿಂದ ಜಯಗಳಿಸಿತ್ತು ಆರ್‌ಸಿಬಿ. ಈ ಎಲ್ಲಾ ಪಂದ್ಯಗಳಲ್ಲಿಯೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಯ ಎಸೆತದವರೆಗೂ ಪೈಪೋಟಿ ನಡೆಸಿ ಜಯವನ್ನು ಸಾಧಿಸಿದ್ದು ಟ್ರೋಫಿ ಗೆಲ್ಲುವ ತಂಡಕ್ಕೆ ಬೇಕಾದ ಗುಣವನ್ನೊಂದಿದೆ.

4. ಟೂರ್ನಿಯಲ್ಲಿ ಅತ್ಯದ್ಭುತ ಆರಂಭ

4. ಟೂರ್ನಿಯಲ್ಲಿ ಅತ್ಯದ್ಭುತ ಆರಂಭ

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಯಾವ ತಂಡವೂ ಪಡೆದುಕೊಳ್ಳದಷ್ಟು ಯಶಸ್ವಿ ಆರಂಭವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಡೆದುಕೊಂಡಿದೆ. ಟೂರ್ನಿಯಲ್ಲಿ ಮೊದಲ ನಾಲ್ಕೂ ಪಂದ್ಯಗಳನ್ನು ಸತತವಾಗಿ ಗೆಲ್ಲುವುದರ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಆರ್‌ಸಿಬಿ ಇಷ್ಟು ದೊಡ್ಡ ಮಟ್ಟದ ಆರಂಭವನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ಇದುವರೆಗೂ 7 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಜಯಗಳಿಸಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಬೆಂಗಳೂರು ತಂಡ ಸೋಲುಂಡಿದೆ.

3. ಅತ್ಯುತ್ತಮ ಬೌಲಿಂಗ್ ದಾಳಿ

3. ಅತ್ಯುತ್ತಮ ಬೌಲಿಂಗ್ ದಾಳಿ

ಕಳೆದ ಐಪಿಎಲ್ ಟೂರ್ನಿಗೆ ಹೋಲಿಸಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ವಿಭಾಗ ಈ ಬಾರಿ ಅತ್ಯುತ್ತಮವಾಗಿದೆ. ಕಳೆದ ಆವೃತ್ತಿಗಳಲ್ಲಿ ಧಾರಾಳವಾಗಿ ರನ್ ನೀಡುತ್ತಿದ್ದ ಬೌಲರ್‌ಗಳು ಯಶಸ್ಸಿನ ಹಾದಿಗೆ ಮರಳಿದ್ದು ವಿಕೆಟ್‍ಗಳನ್ನು ಪಡೆದು ಮಿಂಚಿದ್ದಾರೆ. ಉದಾಹರಣೆಗೆ ಪಂದ್ಯವೊಂದರಲ್ಲಿ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸುತ್ತಿದ್ದ ಆ್ಯಂಡ್ರೆ ರಸೆಲ್ ಮೊಹಮ್ಮದ್ ಸಿರಾಜ್ ಓವರ್‌ನಲ್ಲಿ ಕೇವಲ ಒಂದು ರನ್ ಗಳಿಸಿ ಮಂಕಾಗಿ ಪಂದ್ಯವನ್ನು ಕೈಚೆಲ್ಲಿದ್ದರು. ಇನ್ನು ಇಲ್ಲಿಯವರೆಗೂ 7 ಪಂದ್ಯಗಳನ್ನಾಡಿ 17 ವಿಕೆಟ್ ಪಡೆದಿರುವ ಆರ್‌ಸಿಬಿಯ ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ಲಿಸ್ಟ್‌ನಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಐಪಿಎಲ್ ಮುಂದುವರೆದಾಗಲೂ ಸಹ ಆರ್‌ಸಿಬಿ ಇದೇ ರೀತಿಯ ಬೌಲಿಂಗ್ ದಾಳಿ ಮುಂದುವರಿಸಿದರೆ ಆರ್‌ಸಿಬಿ ಕಪ್ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ.

2. ಮ್ಯಾಕ್ಸ್‌ವೆಲ್ ಸೇರ್ಪಡೆ

2. ಮ್ಯಾಕ್ಸ್‌ವೆಲ್ ಸೇರ್ಪಡೆ

ಆರ್‌ಸಿಬಿ ಬ್ಯಾಟಿಂಗ್ ಸಮಸ್ಯೆಗೆ ಗ್ಲೆನ್ ಮ್ಯಾಕ್ಸ್‌ವೆಲ್ ಸೇರ್ಪಡೆ ಒಂದೊಳ್ಳೆ ಔಷಧಿಯಾಗಿ ಪರಿಣಮಿಸಿದೆ. 14.25 ಕೋಟಿ ಕೊಟ್ಟು ಮ್ಯಾಕ್ಸ್‌ವೆಲ್ ಅವರನ್ನು ಖರೀದಿಸಿದ್ದಕ್ಕೆ ತಕ್ಕನಾಗಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಮಿಂಚಿದ್ದಾರೆ. ಇದುವರೆಗೂ 7 ಪಂದ್ಯಗಳನ್ನಾಡಿರುವ ಮ್ಯಾಕ್ಸ್‌ವೆಲ್ 223 ರನ್ ಗಳಿಸಿ ಆರ್‌ಸಿಬಿ ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮ್ಯಾಕ್ಸ್‌ವೆಲ್ ಟೂರ್ನಿಯಲ್ಲಿ ಇದುವರೆಗೂ 2 ಅರ್ಧಶತಕಗಳನ್ನೂ ಸಹ ಸಿಡಿಸಿ ಮಿಂಚಿದ್ದಾರೆ.

1. ಅತ್ಯುತ್ತಮ ಬ್ಯಾಟಿಂಗ್ ವಿಭಾಗ

1. ಅತ್ಯುತ್ತಮ ಬ್ಯಾಟಿಂಗ್ ವಿಭಾಗ

ಮೊದಲೇ ಹೇಳಿದ ಹಾಗೆ ಈ ಬಾರಿ ಆರ್‌ಸಿಬಿ ತಂಡಕ್ಕ ಗ್ಲೆನ್ ಮ್ಯಾಕ್ಸ್‌ವೆಲ್ ಸೇರ್ಪಡೆಯಾಗಿರುವುದು ಬ್ಯಾಟಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸಿದೆ. ಒಂದೆಡೆ ಗ್ಲೆನ್ ಮ್ಯಾಕ್ಸ್‌ವೆಲ್ ಸೇರ್ಪಡೆ, ಎಂದಿನಂತೆ ಎಬಿಡಿ ಅಬ್ಬರದ ಬ್ಯಾಟಿಂಗ್, ದೇವದತ್ ಪಡಿಕ್ಕಲ್ ಕೂಡ ಸ್ಫೋಟಕ ಆಟವನ್ನು ಆಡಲು ಶುರು ಮಾಡಿರುವುದು ಹಾಗೂ ಆಕ್ರಮಣಕಾರಿ ವಿರಾಟ್ ಕೊಹ್ಲಿ ತಂಡದಲ್ಲಿರುವುದು ಆರ್‌ಸಿಬಿ ತಂಡದ ಬ್ಯಾಟಿಂಗ್ ವಿಭಾಗ ಸಖತ್ ಡೇಂಜರ್ ಎಂಬುದನ್ನು ಹೇಳುತ್ತಿದೆ.

Story first published: Tuesday, May 18, 2021, 17:53 [IST]
Other articles published on May 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X