ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ ಅಲ್ಲ, ಆರ್‌ಸಿಬಿ ಕೂಡ ಅಲ್ಲ ; ಅತಿಹೆಚ್ಚು ಬಾರಿ 220+ ರನ್ ಗಳಿಸಿರುವ ತಂಡವಿದು

IPL 2021 : Here is the list of teams with most times scoring 220 or more in IPL

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 15ನೇ ಪಂದ್ಯ ಬುಧವಾರ (ಏಪ್ರಿಲ್ 21) ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ಬ್ಯಾಟ್ಸ್‌ಮನ್‌ಗಳ ಆರ್ಭಟಕ್ಕೆ ಮಂಕಾದರು. ರುತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ಭರ್ಜರಿ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 220 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು.

221 ರನ್‌ಗಳ ಗುರಿ ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ ಮೇಲಿನ ಕ್ರಮಾಂಕ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್‌ಗಳ ದಾಳಿಗೆ ತತ್ತರಿಸಿತು. ತದನಂತರ ಬಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಧ್ಯಮ ಕ್ರಮಾಂಕದ ಆಟಗಾರರು ಭರ್ಜರಿ ಬ್ಯಾಟಿಂಗ್ ನಡೆಸುವುದರ ಮೂಲಕ ಪಂದ್ಯವನ್ನು ಕೊನೆಯ ಓವರ್‌ನವರೆಗೂ ಕೊಂಡೊಯ್ದರು. ಕೊನೆಯ ಹಂತದಲ್ಲಿ ಕೊಲ್ಕತ್ತಾ 202 ರನ್ ಗಳಿಸುವುದರ ಮೂಲಕ 19.1 ಓವರ್‌ಗೆ ಆಲ್ಔಟ್ ಆಯಿತು.

ಈ ಪಂದ್ಯವನ್ನು ಗೆಲ್ಲುವುದರ ಜೊತೆಗೆ ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಸ ಮೈಲಿಗಲ್ಲೊಂದನ್ನು ಮುಟ್ಟಿದೆ. ಹೌದು ಐಪಿಎಲ್ ಇತಿಹಾಸದಲ್ಲಿ 220 ಅಥವಾ 220ಕ್ಕಿಂತ ಅಧಿಕ ರನ್ ಗಳಿಸಿದ ತಂಡಗಳ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ 220 ರನ್ ಗಳಿಸುವ ಮೂಲಕ ಎರಡನೇ ಸ್ಥಾನಕ್ಕೇರಿದೆ. ಕೊಲ್ಕತ್ತಾ ತಂಡದ ವಿರುದ್ಧ 220 ರನ್ ಸಿಡಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಐದನೇ ಬಾರಿ 220+ ರನ್ ಕಲೆಹಾಕಿದೆ. ಐಪಿಎಲ್ ಇತಿಹಾಸದಲ್ಲಿ 220 ಅಥವಾ 220ಕ್ಕಿಂತ ಅಧಿಕ ರನ್ ಗಳಿಸಿರುವ ಟಾಪ್ 5 ತಂಡಗಳ ಪಟ್ಟಿ ಈ ಕೆಳಕಂಡಂತಿದೆ ನೋಡಿ.

 5. ಡೆಲ್ಲಿ ಕ್ಯಾಪಿಟಲ್ಸ್

5. ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ ಇತಿಹಾಸದಲ್ಲಿ ಒಟ್ಟು ಎರಡು ಬಾರಿ 220+ ರನ್ ಕಲೆಹಾಕಿದ್ದು ಈ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ.

4. ಕೊಲ್ಕತ್ತಾ ನೈಟ್ ರೈಡರ್ಸ್

4. ಕೊಲ್ಕತ್ತಾ ನೈಟ್ ರೈಡರ್ಸ್

ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ಇತಿಹಾಸದಲ್ಲಿ ಒಟ್ಟು ಮೂರು ಬಾರಿ 220+ ರನ್ ಕಲೆಹಾಕಿದ್ದು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

3. ರಾಯಲ್ ಚಾಲೆಂಜರ್ಸ್ ಬೆಂಗಳೂರು

3. ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಒಟ್ಟು ಐದು ಬಾರಿ 220+ ರನ್ ಕಲೆ ಹಾಕಿದ್ದು ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

2. ಚೆನ್ನೈ ಸೂಪರ್ ಕಿಂಗ್ಸ್

2. ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಇತಿಹಾಸದಲ್ಲಿ ಒಟ್ಟು ಐದು ಬಾರಿ 220+ ರನ್ ಗಳಿಸುವುದರ ಮೂಲಕ ಎರಡನೇ ಸ್ಥಾನದಲ್ಲಿದೆ.

1. ಪಂಜಾಬ್ ಕಿಂಗ್ಸ್

1. ಪಂಜಾಬ್ ಕಿಂಗ್ಸ್

ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ ಇತಿಹಾಸದಲ್ಲಿ ಬರೋಬ್ಬರಿ ಏಳು ಬಾರಿ 220+ ರನ್ ಬಾರಿಸುವುದರ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ.

Story first published: Thursday, April 22, 2021, 17:30 [IST]
Other articles published on Apr 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X