ಹೀಗೆ ಆದ್ರೆ ಧೋನಿ ಒಂದು ಪಂದ್ಯದ ನಿಷೇಧ ಎದುರಿಸುವುದು ಗ್ಯಾರಂಟಿ!

ಯುಎಇಯಲ್ಲಿ ನಡೆದ ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳಪೆ ಪ್ರದರ್ಶನವನ್ನು ನೀಡಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಹೀಗಾಗಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಯಶಸ್ಸಿನ ಹಾದಿಗೆ ಮರಳಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ಟೂರ್ನಿ ಆರಂಭಕ್ಕೂ ಮುನ್ನ ಕಠಿಣಾಭ್ಯಾಸವನ್ನು ನಡೆಸಿತ್ತು.

ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ಪಾಲಿಗೆ ಐಪಿಎಲ್ 2021 ಸಕಾರಾತ್ಮಕವಾದ ಆರಂಭವನ್ನು ನೀಡಿಲ್ಲ. ಏಪ್ರಿಲ್ 10ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲುಂಡಿತ್ತು. ಈ ಪಂದ್ಯದ ಸೋಲಿನ ಜೊತೆಗೆ ಎಂ ಎಸ್ ಧೋನಿಗೆ ಚೆನ್ನೈ ತಂಡ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣಕ್ಕೆ 12 ಲಕ್ಷ ದಂಡವನ್ನು ಸಹ ವಿಧಿಸಲಾಗಿತ್ತು.

ಐಪಿಎಲ್ 2021ರ ನೀತಿ ಸಂಹಿತೆಯ ಪ್ರಕಾರ ತಂಡವೊಂದು 20 ಓವರ್‌ಗಳನ್ನು 90 ನಿಮಿಷಗಳಲ್ಲಿ ಮುಗಿಸಬೇಕು, ಇಲ್ಲದಿದ್ದರೆ ಆ ತಂಡದ ನಾಯಕನಿಗೆ 12 ಲಕ್ಷ ದಂಡ ವಿಧಿಸಲಾಗುತ್ತದೆ. ಎಂಎಸ್ ಧೋನಿ ಅವರಿಗೂ ಸಹ ಇದೇ ಮಾದರಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿಧಾನಗತಿಯ ಬೌಲಿಂಗ್ ಮಾಡಿಸಿದ್ದಕ್ಕೆ ದಂಡ ಹಾಕಲಾಗಿತ್ತು. ಒಂದು ವೇಳೆ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಎರಡನೇ ಬಾರಿ ನಿಧಾನಗತಿಯ ಬೌಲಿಂಗ್ ಮಾಡಿದರೆ 24 ಲಕ್ಷ ದಂಡ ವಿಧಿಸಲಾಗುವುದು.

ಹಾಗೂ ಮೂರನೇ ಬಾರಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಧಾನಗತಿಯ ಬೌಲಿಂಗ್ ಮಾಡಿದ್ದೇ ಆದಲ್ಲಿ ನಾಯಕ ಎಂಎಸ್ ಧೋನಿಗೆ 30 ಲಕ್ಷ ದಂಡದ ಜೊತೆಗೆ ಒಂದು ಪಂದ್ಯದ ನಿಷೇಧವನ್ನು ನಿಯಮದ ಪ್ರಕಾರ ಹೇರಲಾಗುತ್ತದೆ ಹಾಗೂ ತಂಡಕ್ಕೂ ಕೂಡ 12 ಲಕ್ಷ ದಂಡ ವಿಧಿಸಲಾಗುತ್ತದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, April 16, 2021, 18:25 [IST]
Other articles published on Apr 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X