ಐಪಿಎಲ್ 2021: ಡೆಲ್ಲಿ ವಿರುದ್ಧ ಗೆಲ್ಲುವ ಭರವಸೆ ಕಳೆದುಕೊಂಡಿದ್ದೆ: ಸಂಜು ಸ್ಯಾಮ್ಸನ್

Sanju Samson ಮೊದಲನೇ ಪಂದ್ಯದಲ್ಲಿ ಮಾಡಿದ ಎಡವಟ್ಟೇನು | Oneindia Kannada

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಗ್ರ ಕ್ರಮಾಂಕದ ಪ್ರಮುಖ ವಿಕೆಟ್‌ಗಳನ್ನು ಕಳೆದು ಕೊಂಡ ನಂತರ ಕ್ರೀಸ್‌ನಲ್ಲಿ ಡೇವಿಡ್ ಮಿಲ್ಲರ್ ಹಾಗೂ ಕ್ರಿಸ್ ಮೋರಿಸ್ ಆವರಂತಾ ಸ್ಪೋಟಕ ಆಟಗಾರರು ಇದ್ದರೂ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಪಂದ್ಯವನ್ನು ಗೆಲ್ಲುವ ಭರವಸೆ ಇರಲಿಲ್ಲ ಎಂದು ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೀಡಿದ್ದ 148 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ 42 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಆದರೆ ದಕ್ಷಿಣ ಆಫ್ರಿಕಾದ ಆಟಗಾರರು ಅದ್ಭುತ ಆಟದ ಮೂಲಕ ತಂಡಕ್ಕೆ 3 ವಿಕೆಟ್‌ಗಳ ಗೆಲುವನ್ನು ತಂದಿತ್ತರು.

ಐಪಿಎಲ್: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಹೈಲೈಟ್ಸ್‌

"ಪ್ರಾಮಾಣಿಕವಾಗಿ ಹೇಳಬೇಕೆಂದರೆ 40 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡ ನಂತರ ಈ ಗುರಿಯನ್ನು ಬೆನ್ನಟ್ಟುವುದು ಕಠಿಣ ಎಂದೇ ಭಾವಿಸಿದ್ದೆ. ನಮ್ಮಲ್ಲಿ ಮಿಲ್ಲರ್ ಹಾಗೂ ಮೋರಿಸ್ ಇದ್ದರಾದರೂ ಅದು ಬಹಳ ಕಠಿಣ ಎಂದೇ ನಾನು ಭಾವಿಸಿದ್ದೆ" ಎಂದು ಸಂಜು ಸ್ಯಾಮ್ಸನ್ ಪಂದ್ಯದ ಮುಕ್ತಾಯದ ನಂತರ ಹೇಳಿದ್ದಾರೆ.

"ಪರಿಸ್ಥಿತಿಗಳನ್ನು ಅರ್ಥೈಸುವುದು ಇಲ್ಲಿ ಬಹಳ ಮುಖ್ಯವಾಗುತ್ತದೆ. ಆರಂಭದಲ್ಲಿ ಪಿಚ್ ಕಠಿಣವಾಗಿತ್ತು. ಬೌಲಿಂಗ್‌ನಲ್ಲಿ ವೇಗದ ನಿಯಂತ್ರಣ ನಮ್ಮ ಬೌಲರ್‌ಗಳ ಶಕ್ತಿಯಾಗಿದೆ. ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲಾಯಿತು" ಎಂದು ಸ್ಯಾಮ್ಸನ್ ಹೇಳಿದ್ದಾರೆ.

ಐಪಿಎಲ್: ಕೆಟ್ಟ ದಾಖಲೆ ಮುಂದುವರೆಸಿದ ಪೃಥ್ವಿ ಶಾ

ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟುವ ವೇಳೆ ಅಂತಿಮ ಹಂತದಲ್ಲಿ ವಿಫಲವಾದ ರಾಜಸ್ಥಾನ್ ರಾಯಲ್ಸ್ ಎರಡನೇ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಟೂರ್ನಿಯಲ್ಲಿ ಮೊದಲ ಗೆಲುವನ್ನು ಪಡೆದುಕೊಂಡಿದೆ.

For Quick Alerts
ALLOW NOTIFICATIONS
For Daily Alerts
Story first published: Friday, April 16, 2021, 9:48 [IST]
Other articles published on Apr 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X