ಐಪಿಎಲ್ 2021: ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿತಾರಾ ರೋಹಿತ್ ಶರ್ಮಾ?

ಐಪಿಎಲ್‌ನಲ್ಲಿ ಗುರುವಾರ ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಣಕ್ಕಿಳಿಯಲು ಸಜ್ಜಾಗಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ನೀರಸ ಪ್ರದರ್ಶನ ನೀಡುತ್ತಿದೆ. ಎರಡನೇ ಚರಣದ ಆರಂಭಿಕ ಪಂದ್ಯದಲ್ಲಿಯೂ ಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಶರಣಾಗಿತ್ತು. ಈ ಮೂಲಕ ಆಡಿದ 8 ಪಂದ್ಯಗಳ ಪೈಕಿ ನಾಲ್ಕು ಗೆಲುವು ನಾಲ್ಕು ಸೋಲು ಕಂಡಿದೆ ಮುಂಬೈ ಇಂಡಿಯನ್ಸ್ ತಂಡ. ಈ ಮಧ್ಯೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದು ಕಳೆದ ಪಂದ್ಯಕ್ಕೆ ಅಲಭ್ಯವಾಗಿದ್ದರು.

ಐಪಿಎಲ್‌ನಲ್ಲಿ ಆಡಿದ 8 ಪಂದ್ಯಗಳಲ್ಲಿ 7 ಪಂದ್ಯ ಸೋತ ತಂಡಗಳ ಪಟ್ಟಿಐಪಿಎಲ್‌ನಲ್ಲಿ ಆಡಿದ 8 ಪಂದ್ಯಗಳಲ್ಲಿ 7 ಪಂದ್ಯ ಸೋತ ತಂಡಗಳ ಪಟ್ಟಿ

ಇಂದು ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ ಕಣಕ್ಕಿಳಿಯುತ್ತಿದ್ದು ಈ ಸೆಣೆಸಾಟದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕಣಕ್ಕಿಳಿಯುತ್ತಾ ಎಂಬುದು ಅಧಿಕೃತವಾಗಿಲ್ಲ. ಆದರೆ ನಾಯಕ ರೋಹಿತ್ ಶರ್ಮಾ ಈ ಬಗ್ಗೆ ಸುಳಿವು ನೀಡಿದ್ದು ಆಡುವ ಸಾಧ್ಯತೆ ದಟ್ಟವಾಗಿದೆ.

ಟಿ ನಟರಾಜನ್ ಕೋವಿಡ್‌ಗೆ ತುತ್ತಾಗಿದ್ದು ಆಟದ ಮೇಲೆ ಪರಿಣಾಮ ಬೀರಿಲ್ಲ'ಟಿ ನಟರಾಜನ್ ಕೋವಿಡ್‌ಗೆ ತುತ್ತಾಗಿದ್ದು ಆಟದ ಮೇಲೆ ಪರಿಣಾಮ ಬೀರಿಲ್ಲ'

"ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2021ರ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ತಂಡ ಒಟ್ಟಾಗಿ ಹೋರಾಡುವುದು ಬಹಳ ಮುಖ್ಯವಾಗಿದೆ ಎಂದು ರೋಹಿತ್ ಶರ್ಮಾ ಹೇಳಿಕೆ ನೀಡಿದ್ದಾರೆ. "ತಂಡದಲ್ಲಿ ನಾವೆಲ್ಲಾ ಎದ್ದು ನಿಂತು ಮುಂದೆ ಬರಬೇಕು ಹಾಗೂ ಅವರ ಕರ್ತವ್ಯವನ್ನು ನಿರ್ವಹಿಸಬೇಕು" ಎಂದಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು ರೋಹಿತ್ ಶರ್ಮಾ ಇಂದಿನ ಪಂದ್ಯದಲ್ಲಿ ಕಂಡಿತಾ ಕಣಕ್ಕಿಳಿಯಲಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ರೋಹಿತ್ ಶರ್ಮಾ ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ ಹೊಂದಿರುವ ಕಳಪೆ ದಾಖಲೆ ಬಗ್ಗೆ ಪ್ರತಿಕ್ರಿಯಿಸಿದರು. "ಪ್ರಾಮಾಣಿಕವಾಗಿ ಹೇಳಬೇಕೆಂದರೆ ಹಿಂದಿನ ದಾಖಲೆಗಳನ್ನು ನಾನು ನಂಬುವುದಿಲ್ಲ, ಟಿ 20 ನಿರ್ದಿಷ್ಟ ದಿನದ ಆಟವಾಗಿದೆ. ಆಯಾ ದಿನ ನೀವು ಯಾವ ರೀತಿಯ ಪ್ರದರ್ಶನ ನೀಡುತ್ತೀರೋ ಅದರ ಮೇಲೆ ಅವಲಂಬಿತವಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಉತ್ತಮ ಎದುರಾಳಿ ತಂಡ. ಒಂದು ತಂಡವಾಗಿ ಕೆಕೆಆರ್ ಉತ್ತಮವಾಗಿ ಆಡುತ್ತಿದೆ. ತಮ್ಮ ಕೊನೆಯ ಪಂದ್ಯವನ್ನು ಉತ್ತಮ ರೀತಿಯಲ್ಲಿ ಗೆದ್ದುಕೊಂಡಿದ್ದರು. ಃಈಗಾಗಿ ಅವರ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಹೀಗಾಗಿ ನಮಗೆ ಈ ಪಂದ್ಯ ಸುಲಭ ಸವಾಲು ಆಗಿರುವುದಿಲ್ಲ" ಎಂದಿದ್ದರೆ ರೋಹಿತ್ ಶರ್ಮಾ.

'ದಾಖಲೆ ಮಾಡಿಬಿಟ್ರೆ ಆಗಲ್ಲ, ಪಂದ್ಯದ ದಿನ ಚೆನ್ನಾಗಿ ಆಡಬೇಕು'; ದಾಖಲೆ ಎನ್ನುವವರಿಗೆ ಕುಟುಕಿದ ರೋಹಿತ್'ದಾಖಲೆ ಮಾಡಿಬಿಟ್ರೆ ಆಗಲ್ಲ, ಪಂದ್ಯದ ದಿನ ಚೆನ್ನಾಗಿ ಆಡಬೇಕು'; ದಾಖಲೆ ಎನ್ನುವವರಿಗೆ ಕುಟುಕಿದ ರೋಹಿತ್

ನಾವು ಕೆಕೆಆರ್ ವಿರುದ್ಧ ಬಹಳ ಉತ್ತಮ ದಾಖಲೆಯನ್ನೇನು ಹೊಂದಿಲ್ಲ ಎಂದು ಗೊತ್ತಿದೆ. ಆದರೆ ಪಂದ್ಯದ ದಿನ ನಾವು ಉತ್ತಮ ಪ್ರದರ್ಶನ ನಿಡುವುದು ಪ್ರಮುಖವಾಗಿದೆ. 157ರಷ್ಟು ಸ್ಕೋರನ್ನು ನೀವು ಬೆನ್ನಟ್ಟುತ್ತಿದ್ದೀರಾದರೆ ಇಂಥಾ ಸಂದರ್ಭದಲ್ಲಿ ಒಳ್ಳೆಯ ಪಾರ್ಟ್ನರ್‌ಶಿಪ್ ಇರಬೇಕಾಗುತ್ತದೆ. ಸಾಧ್ಯವಾದಷ್ಟು ಸುದೀರ್ಘ ಕಾಲ ಆಟದಲ್ಲಿ ನಿಮ್ಮತನವನ್ನು ನೀವು ಪ್ರದರ್ಶಿಸಬೇಕಾಗುತ್ತದೆ" ಎಂದಿದ್ದಾರೆ ರೋಹಿತ್ ಶರ್ಮಾ.

ಐಸಿಸಿ ಟಿ20 ವಿಶ್ವಕಪ್ ರೋಮಾಂಚನಕಾರಿ ಅಧಿಕೃತ ಗೀತೆ ಬಿಡುಗಡೆಐಸಿಸಿ ಟಿ20 ವಿಶ್ವಕಪ್ ರೋಮಾಂಚನಕಾರಿ ಅಧಿಕೃತ ಗೀತೆ ಬಿಡುಗಡೆ

ನಾನು ದೊಡ್ಡ Rajini ಅಭಿಮಾನಿ ಎಂದ Venkatesh Iyer | Oneindia kannada

ಮುಂಬೈ ಇಂಡಿಯನ್ಸ್ ಸಂಪೂರ್ಣ ತಂಡ ರೋಹಿತ್ ಶರ್ಮಾ (ನಾಯಕ), ಆಡಮ್ ಮಿಲ್ನೆ, ಆದಿತ್ಯ ತಾರೆ, ಅನ್ಮೋಲ್‌ಪ್ರೀತ್ ಸಿಂಗ್, ಅನುಕುಲ್ ರಾಯ್, ಅರ್ಜುನ್ ತೆಂಡುಲ್ಕರ್, ಕ್ರಿಸ್ ಲಿನ್, ಧವಳ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರೀತ್ ಬೂಮ್ರಾ, ಜಯಂತ್ ಯಾದವ್, ಕಿರಾನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಮಾರ್ಕೊ ಜಾನ್ಸೆನ್, ಜೇಮ್ಸ್ ನೀಶಮ್, ಮೊಹ್ಸಿನ್ ಖಾನ್, ನಾಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ಕ್ವಿಂಟನ್ ಡಿ ಕಾಕ್, ರಾಹುಲ್ ಚಹರ್, ಸೌರಭ್ ತಿವಾರಿ, ಸೂರ್ಯಕುಮಾರ್ ಯಾದವ್, ಟ್ರೆಂಟ್ ಬೋಲ್ಟ್, ಯುಧ್ವೀರ್ ಸಿಂಗ್.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 20 - October 27 2021, 03:30 PM
ಇಂಗ್ಲೆಂಡ್
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 23, 2021, 17:08 [IST]
Other articles published on Sep 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X