ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

13 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಮುಂಬೈ ದಾಖಲೆ ಬ್ರೇಕ್!

IPL 2021, KKR vs MI : After No 5-Wicket Haul Against Them in 13 Years, MI Concede 2 in 2

ಮುಂಬೈ ಇಂಡಿಯನ್ಸ್, ಐಪಿಎಲ್ ಇತಿಹಾಸದಲ್ಲಿ ಈ ತಂಡದಷ್ಟು ಯಶಸ್ಸನ್ನು ಗಳಿಸಿರುವ ತಂಡ ಮತ್ತೊಂದಿಲ್ಲ. ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಜಯಗಳಿಸಿರುವಷ್ಟು ಪಂದ್ಯಗಳನ್ನು ಬೇರೆ ಯಾವುದೇ ತಂಡಗಳು ಕೂಡ ಜಯಗಳಿಸಿಲ್ಲ. ಇದುವರೆಗೂ ನಡೆದಿರುವ 13 ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ 5 ಬಾರಿ ಮುಂಬೈ ಇಂಡಿಯನ್ಸ್ ಗೆಲುವಿನ ಕೇಕೆ ಹಾಕಿದೆ.

ಮುಂಬೈ ಇಂಡಿಯನ್ಸ್ ತಂಡ ಇಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಲು ಕಾರಣ ಉತ್ತಮ ತಂಡ ರಚನೆ ಎಂದರೆ ತಪ್ಪಾಗಲಾರದು. ಒಬ್ಬ ಆಟಗಾರ ಕೈಕೊಟ್ಟರೆ ಮತ್ತೊಬ್ಬ ಆಟಗಾರ ಅದ್ಭುತ ಪ್ರದರ್ಶನ ನೀಡುವುದರ ಮೂಲಕ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡುತ್ತಾರೆ. ಮುಂಬೈ ಇಂಡಿಯನ್ಸ್ ಬೌಲಿಂಗ್ ವಿಭಾಗ ಬಲಿಷ್ಠವಾದರೆ ಬ್ಯಾಟಿಂಗ್ ವಿಭಾಗ ಅದಕ್ಕಿಂತ ಬಲಿಷ್ಠವಾದದ್ದು. ಇಷ್ಟು ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ಅತಿ ಸಾಮರ್ಥ್ಯವುಳ್ಳ ತಂಡವಾಗಿತ್ತು. ಆದರೆ ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಿಂದೆ ಇದ್ದ ಸಾಮರ್ಥ್ಯತೆ ಕಾಣಿಸುತ್ತಿಲ್ಲ.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೋಲು ಮತ್ತು ಮಂಗಳವಾರ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಹಂತದ ಗೆಲುವು ಹಳೆಯ ಮುಂಬೈ ಇಂಡಿಯನ್ಸ್ ತಂಡದ ಆಟದ ರೀತಿ ಇಲ್ಲ ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಇನ್ನು ಇದೀಗ ಹೊರಬಿದ್ದಿರುವ ಅಂಕಿಅಂಶದ ಪ್ರಕಾರ ಮುಂಬೈ ಇಂಡಿಯನ್ಸ್ ತಂಡ ಕೊನೆಯ ಆವೃತ್ತಿಯವರೆಗೆ ಇದ್ದ ರೀತಿಯೇ ಬೇರೆ ಈ ಬಾರಿ ಆರಂಭವಾಗಿರುವ ಐಪಿಎಲ್ ಆವೃತ್ತಿಯಲ್ಲಿ ಆಡುತ್ತಿರುವ ರೀತಿಯೇ ಬೇರೆ ಇದೆ.

2008ರಿಂದ 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿವರೆಗೆ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಯಾವುದೇ ಬೌಲರ್ ಕೂಡ ಒಂದೇ ಪಂದ್ಯದಲ್ಲಿ 5 ವಿಕೆಟ್‍ಗಳನ್ನು ಪಡೆಯುವ ಸಾಹಸವನ್ನು ಮಾಡಿರಲಿಲ್ಲ. ಆದರೆ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಹರ್ಷಲ್ ಪಟೇಲ್ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್‍ಗಳನ್ನು ಪಡೆದು ಮಿಂಚಿದರು. ಮಂಗಳವಾರ ( ಏಪ್ರಿಲ್ 13 ) ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಕೊಲ್ಕತ್ತಾ ಪರ ಆ್ಯಂಡ್ರೆ ರಸೆಲ್ 5 ವಿಕೆಟ್‍ಗಳ ಗೊಂಚಲನ್ನು ಪಡೆದು ಮಿಂಚಿದರು.

2008ರಿಂದ 2020ರವರೆಗೂ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಯಾವುದೇ ಬೌಲರ್ 5 ವಿಕೆಟ್‍ಗಳ ಗೊಂಚಲನ್ನು ಪಡೆಯುವ ದಾಖಲೆ ಮಾಡಿರಲಿಲ್ಲ. ಆದರೆ ಈ ಬಾರಿ ಮುಂಬೈ ಇಂಡಿಯನ್ಸ್ ಆಡಿರುವ ಎರಡೂ ಪಂದ್ಯಗಳಲ್ಲಿಯೂ ಎದುರಾಳಿ ತಂಡಗಳ ಬೌಲರ್‌ಗಳು 5 ವಿಕೆಟ್‍ಗಳ ಗೊಂಚಲನ್ನು ಪಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಮುಂಬೈ ತನ್ನ ಸಾಮರ್ಥ್ಯತೆಯನ್ನು ಕಳೆದುಕೊಳ್ಳುತ್ತಿದೆಯೇ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ.

Story first published: Friday, April 16, 2021, 9:56 [IST]
Other articles published on Apr 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X