ಅರ್ಧಶತಕಕ್ಕಾಗಿ ಚೆನ್ನೈ ವಿರುದ್ಧ ಬ್ಯಾಟ್ ಬೀಸಿದ್ರಾ ಕೊಹ್ಲಿ?; ಮಾಜಿ ಕ್ರಿಕೆಟಿಗನ ಅಸಮಾಧಾನ

ಯುಎಇಯಲ್ಲಿ ಮುಂದುವರಿಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 35ನೇ ಪಂದ್ಯ ಶಾರ್ಜಾ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸುವುದರ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಟಿ20 ವಿಶ್ವಕಪ್ ತಂಡದಲ್ಲಿ ಹಾರ್ದಿಕ್ ಪಾಂಡ್ಯಗೆ ಹೇಗೆ ಸ್ಥಾನ ಸಿಕ್ಕಿತು?; ಮಾಜಿ ಕ್ರಿಕೆಟಿಗನ ಅಸಮಾಧಾನಟಿ20 ವಿಶ್ವಕಪ್ ತಂಡದಲ್ಲಿ ಹಾರ್ದಿಕ್ ಪಾಂಡ್ಯಗೆ ಹೇಗೆ ಸ್ಥಾನ ಸಿಕ್ಕಿತು?; ಮಾಜಿ ಕ್ರಿಕೆಟಿಗನ ಅಸಮಾಧಾನ

ಇತ್ತ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13 ಓವರ್‌ಗಳವರೆಗೂ ಯಾವುದೇ ವಿಕೆಟ್ ಕಳೆದುಕೊಳ್ಳದೇ 111 ರನ್ ಗಳಿಸಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ( 53 ) ಮತ್ತು ದೇವದತ್ ಪಡಿಕ್ಕಲ್ ( 70 ) ಇಬ್ಬರೂ ಸಹ ಅರ್ಧಶತಕಗಳನ್ನು ಸಿಡಿಸಿ ಉತ್ತಮ ಪ್ರದರ್ಶನವನ್ನು ತೋರಿದರು. 13 ಓವರ್‌ಗಳ ತನಕ ಇಬ್ಬರೂ ಸಹ ವಿಕೆಟ್ ಒಪ್ಪಿಸದೇ 108 ರನ್‌ಗಳ ಜತೆಯಾಟವನ್ನು ಆಡುವುದರ ಮೂಲಕ ಬೆಂಗಳೂರು ತಂಡ ಬೃಹತ್ ಮೊತ್ತವನ್ನು ಮುಟ್ಟುವ ಭರವಸೆಯನ್ನು ಮೂಡಿಸಿದ್ದರು.

ಆ ಇಬ್ಬರು ಆಟಗಾರರಿಂದ ಸೂರ್ಯಕುಮಾರ್ ಯಾದವ್‌ಗೆ ಸರಿಯಾದ ಅವಕಾಶ ಸಿಗಲಿಲ್ಲ; ಗಂಭೀರ್ ಬೇಸರಆ ಇಬ್ಬರು ಆಟಗಾರರಿಂದ ಸೂರ್ಯಕುಮಾರ್ ಯಾದವ್‌ಗೆ ಸರಿಯಾದ ಅವಕಾಶ ಸಿಗಲಿಲ್ಲ; ಗಂಭೀರ್ ಬೇಸರ

ಹೀಗೆ ಉತ್ತಮ ಆರಂಭವನ್ನು ಪಡೆದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹದಿನಾಲ್ಕನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದ ನಂತರ ಸಾಲುಸಾಲಾಗಿ ವಿಕೆಟ್ ಕಳೆದುಕೊಂಡು ಅಂತಿಮವಾಗಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 156 ರನ್ ಗಳಿಸಿತು. ಮೊದಲ 13 ಓವರ್‌ಗಳಲ್ಲಿ 111 ರನ್ ಗಳಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಯ 7 ಓವರ್‌ಗಳಲ್ಲಿ ಕೇವಲ 45 ರನ್ ಗಳಿಸಿ 6 ವಿಕೆಟ್‍ಗಳನ್ನೂ ಕಳೆದುಕೊಂಡಿತು. ಹೀಗೆ ಕೊನೆಯ 7 ಓವರ್‌ಗಳಲ್ಲಿ ಸಾಲುಸಾಲಾಗಿ ವಿಕೆಟ್ ಒಪ್ಪಿಸಿ ಕಳಪೆ ಪ್ರದರ್ಶನ ನೀಡಿ ನಿಧಾನಗತಿಯ ರನ್ ಕಲೆ ಹಾಕಿದ ಬೆಂಗಳೂರು ತಂಡದ ಬ್ಯಾಟ್ಸ್‌ಮನ್‌ಗಳ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದ್ದರೆ, ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ ಕೂಡ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶನ ಮಾಡಿದರು ಎಂಬ ಆರೋಪವನ್ನು ಮಾಡಿದ್ದು ಈ ಕೆಳಕಂಡಂತೆ ಕೊಹ್ಲಿ ಬ್ಯಾಟಿಂಗ್ ಕುರಿತು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

40 ರನ್ ಆಗ್ತಾ ಇದ್ದಂತೆ ಮಂಕಾದ ವಿರಾಟ್ ಕೊಹ್ಲಿ

40 ರನ್ ಆಗ್ತಾ ಇದ್ದಂತೆ ಮಂಕಾದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಅರ್ಧಶತಕದ ಬಳಿ ಸಮೀಪಿಸುತ್ತಿದ್ದಂತೆ ನಿಧಾನಗತಿಯ ಬ್ಯಾಟಿಂಗ್ ಮಾಡಿದರು ಎಂಬ ಆರೋಪವನ್ನು ಸಂಜಯ್ ಮಂಜ್ರೇಕರ್ ಮಾಡಿದ್ದಾರೆ. 'ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ 40 ರನ್ ಗಡಿ ದಾಟುತ್ತಿದ್ದಂತೆಯೇ ನಿಧಾನವಾಗಿ ಆಡಲು ಆರಂಭಿಸಿದ್ದು ಯಾಕೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಮೊದಲ 40 ರನ್‌ಗಳನ್ನು ಕೇವಲ 26 ಎಸೆತಗಳಲ್ಲಿ ವೇಗವಾಗಿ ಬಾರಿಸಿದ ವಿರಾಟ್ ಕೊಹ್ಲಿ ನಂತರದ 13 ರನ್‌ಗಳನ್ನು ಬಾರಿಸಲು 15 ಎಸೆತಗಳನ್ನು ತೆಗೆದುಕೊಂಡು 86. 66 ಸ್ಟ್ರೈಕ್ ರೇಟ್‌ನೊಂದಿಗೆ ಕಲೆಹಾಕಿದರು. ಹೀಗೆ ಅರ್ಧ ಶತಕದ ಸಮೀಪ ಬರುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಇಷ್ಟು ನಿಧಾನಗತಿ ಬ್ಯಾಟಿಂಗ್‌ನ್ನು ಟಿ ಟ್ವೆಂಟಿ ಪಂದ್ಯದಲ್ಲಿ ಮಾಡಿದ್ದು ಆಶ್ಚರ್ಯಕರವಾಗಿದೆ' ಎಂದು ಸಂಜಯ್ ಮಂಜ್ರೇಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಆರಂಭದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದರು

ವಿರಾಟ್ ಕೊಹ್ಲಿ ಆರಂಭದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದರು

ವಿರಾಟ್ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದರು ಎಂದು ಆರೋಪ ಮಾಡಿರುವ ಸಂಜಯ್ ಮಂಜ್ರೇಕರ್ ಆರಂಭದಲ್ಲಿ ಕೊಹ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದರು ಎಂದು ಕೂಡ ಹೊಗಳಿದ್ದಾರೆ. 'ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಟಿ ಟ್ವೆಂಟಿ ಪಂದ್ಯದಲ್ಲಿ ಯಾವ ರೀತಿಯ ಭರ್ಜರಿ ಬ್ಯಾಟಿಂಗ್ ಮಾಡಬೇಕೋ ಅದೇ ರೀತಿ ಬ್ಯಾಟ್ ಬೀಸಿದರು. 26 ಎಸೆತಗಳಲ್ಲಿ 40 ರನ್ ಬಾರಿಸಿದ ವಿರಾಟ್ ಕೊಹ್ಲಿ 153.84 ಸ್ಟ್ರೈಕ್ ರೇಟ್‌ನೊಂದಿಗೆ ಆಟವನ್ನಾಡಿದ್ದು ಉತ್ತಮವಾಗಿತ್ತು' ಎಂದು ಸಂಜಯ್ ಮಂಜ್ರೇಕರ್ ವಿರಾಟ್ ಕೊಹ್ಲಿಯ ಆರಂಭಿಕ ಆಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಚೆನ್ನೈ ವಿರುದ್ಧ ಸೋಲಿಗೆ ವಿರಾಟ್ ನೇರವಾಗಿ ದೂರಿದ್ದು ಯಾರನ್ನು ಗೊತ್ತಾ? | Oneindia Kannada
ಅಂಕಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಥಾನ

ಅಂಕಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಥಾನ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಸತತವಾಗಿ ಮೂರನೇ ಪಂದ್ಯವನ್ನು ಸೋಲುವುದರ ಮೂಲಕ ಟೂರ್ನಿಯಲ್ಲಿ ಆಡಿರುವ ಒಟ್ಟು 9 ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಸೋಲನುಭವಿಸಿದ್ದು 5 ಪಂದ್ಯಗಳಲ್ಲಿ ಜಯ ಸಾಧಿಸಿ 10 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದೆ.

For Quick Alerts
ALLOW NOTIFICATIONS
For Daily Alerts
Story first published: Saturday, September 25, 2021, 10:55 [IST]
Other articles published on Sep 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X