ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್, ಮೀಮ್ಸ್ ತಮಾಷೆ ನೋಡಿ!

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್‌ 1) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 45ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 5 ವಿಕೆಟ್‌ ಜಯ ಗಳಿಸಿದೆ. ರೋಚಕ ಹಂತಕ್ಕೆ ತಲುಪಿದ್ದ ಪಂದ್ಯ ಗೆಲ್ಲುವ ಮೂಲಕ ಪಂಜಾಬ್ ಪ್ಲೇ ಆಫ್ಸ್ ಆಸೆ ಜೀವಂತವಾಗಿರಿಸಿಕೊಂಡಿದೆ. ಪಂಜಾಬ್ ಪಂದ್ಯ ಗೆಲ್ಲುತ್ತಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇ ಆಫ್ಸ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಸಂದೇಶ ಬರೆದ ಡೇವಿಡ್ ವಾರ್ನರ್ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಸಂದೇಶ ಬರೆದ ಡೇವಿಡ್ ವಾರ್ನರ್

ಶುಕ್ರವಾರದ ಪಂದ್ಯ ಕೊನೇಯ ಓವರ್‌ನವರೆಗೆ ಹೋಗಿತ್ತು. ಅಂತಿಮ ಓವರ್‌ನಲ್ಲಿ ಕೆಎಲ್ ರಾಹುಲ್ ಔಟ್ ಆದಾಗ ಪಂದ್ಯ ಬಹಳ ಕುತೂಹಲ ಮೂಡಿಸಿತ್ತು. ಆದರೆ ವೆಂಕಟೇಶ್ ಐಯ್ಯರ್ ಅವರ 19.3ನೇ ಎಸೆತಕ್ಕೆ ಪಂಜಾಬ್ ಕಿಂಗ್ಸ್‌ನ ಶಾರುಖ್ ಖಾನ್ ಸಿಕ್ಸ್ ಬಾರಿಸಿ ತಂಡದ ಗೆಲುವು ಸಾರಿದ್ದರು. ಈ ಪಂದ್ಯದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಮೀಮ್ಸ್‌ ನೆಟ್ಟಿಗರನ್ನು ನಗಿಸುತ್ತಿವೆ.

ಕ್ರಿಸ್‌ಗೇಲ್‌ರನ್ನು ಪಂಜಾಬ್ ಕಿಂಗ್ಸ್ ಬಳಸಿ ಎಸೆದಿದೆ: ಕೆವಿನ್ ಪೀಟರ್ಸನ್

ಪಂಜಾಬ್ ಕಿಂಗ್ಸ್‌ ತಂಡಕ್ಕೆ ಬಾಲಿವುಡ್ ನಟಿ ಪ್ರೀತಿ ಝಿಂಟಾ ಸಹ ಮಾಲೀಕತ್ವ ಹೊಂದಿದ್ದಾರೆ. ಇತ್ತ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ನಟ ಶಾರುಖ್ ಖಾನ್ ಮಾಲೀಕರಾಗಿದ್ದಾರೆ. ಶಾರುಖ್ ಖಾನ್ ತಂಡದ ವಿರುದ್ಧ ಶಾರುಖ್ ಖಾನ್ ಸಿಕ್ಸ್ ಬಾರಿಸಿ ಪಂದ್ಯ ಗೆಲ್ಲಿಸಿರುವ ಸನ್ನಿವೇಶವನ್ನು ಟ್ರೋಲಿಗರು ಸಮಾಷೆಯಾಗಿ ತೆಗೆದುಕೊಂಡು ನಗಿಸುತ್ತಿದ್ದಾರೆ.

ಪ್ರೀತಿ ಝಿಂಟಾನನ್ನು ಶಾರುಖ್ ಖಾನ್ ಉಳಿಸಿದ್ದು ಇದೇ ಮೊದಲಲ್ಲ

ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್‌ ತಂಡ ಜಯ ಗಳಿಸುತ್ತಲೇ ಮೀಮ್ಸ್‌ ವೈರಲ್ ಆಗ ತೊಡಗಿವೆ. ಶಾರುಖ್ ಖಾನ್ ಅವರು ಪ್ರೀತಿ ಝಿಂಟಾ ಅವರನ್ನು ಉಳಿಸಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಬಹಳಷ್ಟು ಸಾರಿ (ಪಿಚ್ಚರಿನಲ್ಲಿ) ಉಳಿಸಿದ್ದಾರೆ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಹೀರೋ ಶಾರುಖ್ ಖಾನ್ ಹೀರೋಹಿನ್ ಝಿಂಟಾ ಅವರನ್ನು ಸೇವ್ ಮಾಡಿದ್ದರೆ, ಐಪಿಎಲ್‌ನಲ್ಲಿ ಕ್ರಿಕೆಟರ್ ಶಾರುಖ್ ಖಾನ್ ಅವರು ಮಾಲಕಿ ಝಿಂಟಾ ಅವರನ್ನು ಸೇವ್ ಮಾಡಿದ್ದಾರೆ, ಅದೂ ಕೂಡ ಶಾರುಖ್ ಖಾನ್ ವಿರುದ್ಧದ ಪಂದ್ಯದಲ್ಲಿ ಶಾರುಖ್ ಖಾನೇ ಸೇವ್ ಮಾಡಿದ್ದಾರೆ ಎಂದು ಅನೇಕರು ಟ್ರೋಲ್ ಮಾಡುತ್ತಿದ್ದಾರೆ.

ಸಿಕ್ಸ್ ಬಾರಿಸಿದ ಮೇಲೆ ಶಾರುಖ್ ಖಾನ್ ಪೋಸು

ಕೆಕೆಆರ್ ವಿರುದ್ಧ ಪಂಜಾಬ್ ಕಿಂಗ್ಸ್ ಅನ್ನು ಗೆಲ್ಲಿಸಿದ ಬಳಿಕ ಶಾರುಖ್ ಖಾನ್ ಹೀಗೆ ಪೋಸ್ ಕೊಡುತ್ತಿದ್ದಾರೆ ಎಂದು ಕೆಲವರು ಮೀಮ್ಸ್ ಟ್ವೀಟ್ ಮಾಡುತ್ತಿದ್ದಾರೆ. ಪ್ರೀತಿ ಝಿಂಟಾ ಮತ್ತು ಶಾರುಖ್ ಖಾನ್ ಜೊತೆಯಾಗಿ ನಟಿಸಿದ್ದ ಚಿತ್ರಗಳಲ್ಲಿ ಹೆಚ್ಚಿನ ಸಾರಿ ಶಾರುಖ್ ಬಿಲ್ಡಪ್ ರಾಜ ತರ ಪೋಸು ಕೊಡುತ್ತಿರುತ್ತಾರೆ. ಈ ಸಂಗತಿ ಮುಂದಿಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ.

ಶಾರುಖ್ ಖಾನ್ ವಿರುದ್ಧ ಶಾರುಖ್ ಖಾನ್, ಏನ್ ನಡೀತಿದೆ ಇಲ್ಲಿ?!

ಕೋಲ್ಕತ್ತಾ ಮತ್ತು ಪಂಜಾಬ್ ತಂಡಗಳ ನಡುವಿನ ಪಂದ್ಯದಲ್ಲಿ ಕೆಕೆಆರ್ ಮಾಲೀಕ, ನಟ ಶಾರುಖ್ ಖಾನ್ ಮತ್ತು ಪಿಬಿಕೆಎಸ್ ಮಾಲಕಿ ಪ್ರೀತಿ ಝಿಂಟಾ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸುತ್ತಿದ್ದರು. ಈ ವೇಳೆ ಶಾರುಖ್ ಖಾನ್ ತಂಡದ ವಿರುದ್ಧ ಶಾರುಖ್ ಖಾನ್ ಸಿಕ್ಸ್ ಚಚ್ಚಿ ಪಂಜಾಬ್ ತಂಡ ಗೆಲ್ಲಿಸಿರುವ ಸಂಗತಿಯನ್ನು ತಮಾಷೆ ಮಾಡಲಾಗಿದೆ. ಶಾರುಖ್ ಖಾನ್ ವಿರುದ್ಧ ಶಾರುಖ್ ಖಾನ್? ಏನ್ ನಡೀತಿದೆ ಇಲ್ಲಿ ಎಂದು ಇಲ್ಲೊಬ್ಬರು ಟ್ವೀಟ್ ಮಾಡಿದ್ದಾರೆ.

ಶಾರುಖ್ ಖಾನ್ ಸೋಲಿಸಿದ ಶಾರುಖ್ ಖಾನ್

ಕೆಕೆಆರ್ ಇನ್ನಿಂಗ್ಸ್: ಟಾಸ್ ಸೋತು ಬೌಲಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್ ವೆಂಕಟೇಶ್ ಐಯ್ಯರ್ 67, ಶುಬ್ಮನ್ ಗಿಲ್ 7, ರಾಹುಲ್ ತ್ರಿಪಾಠಿ 34, ನಿರೀಶ್ ರಾಣಾ 31, ಇಯಾನ್ ಮಾರ್ಗನ್ 2, ದಿನೇಶ್ ಕಾರ್ತಿಕ್ 11, ಟಿಮ್ ಸೀಫರ್ಟ್ 2, ಸುನಿಲ್ ನರೈನ್ 3 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್‌ ಕಳೆದು 165 ರನ್ ಗಳಿಸಿತ್ತು.

(ಶಾರುಖ್ ಖಾನ್ ಸೋಲಿಸಿದ ಶಾರುಖ್ ಖಾನ್ ಎಂದು ಇಲ್ಲೊಬ್ಬರು ಟ್ವೀಟ್ ಮಾಡಿದ್ದಾರೆ).

'ಪ್ರೀತಿಗಾಗಿ ಪಂದ್ಯ ಗೆದ್ದ ಶಾರುಖ್ ಖಾನ್'

ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್, ಕೆಎಲ್ ರಾಹುಲ್ 67 (55 ಎಸೆತ), ಮಯಾಂಕ್ ಅಗರ್ವಾಲ್ 40, ನಿಕೋಲಸ್ ಪೂರನ್ 12, ಐಡನ್ ಮಾರ್ಕ್ರಮ್ 18, ದೀಪಕ್ ಹೂಡ 3, ಶಾರುಖ್ ಖಾನ್ ಅಜೇಯ 22 ರನ್‌ನೊಂದಿಗೆ 19.3 ಓವರ್‌ಗೆ 3 ವಿಕೆಟ್ ಕಳೆದು 168 ರನ್ ಗಳಿಸಿತು. ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ 5ನೇ ಸ್ಥಾನದಲ್ಲಿದೆ. ಕೋಲ್ಕತ್ತಾ 4ನೇ ಸ್ಥಾನದಲ್ಲಿ ಉಳಿದಿದೆ. ಮೊದಲ ಸ್ಥಾನದಲ್ಲಿ ಚೆನ್ನೈ, ದ್ವಿತೀಯ ಸ್ಥಾನದಲ್ಲಿ ಡೆಲ್ಲಿ ಕ್ಯಾಪಟಲ್ಸ್, ತೃತೀಯ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ತಂಡವಿದೆ.

('ಪ್ರೀತಿಗಾಗಿ ಪಂದ್ಯ ಗೆದ್ದ ಶಾರುಖ್ ಖಾನ್' ಎಂದು ಇಲ್ಲೊಂದು ಟ್ವೀಟ್ ಇದೆ).

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 14 - October 23 2021, 07:30 PM
ಇಂಗ್ಲೆಂಡ್
ವೆಸ್ಟ್ ಇಂಡೀಸ್
Predict Now

For Quick Alerts
ALLOW NOTIFICATIONS
For Daily Alerts
Story first published: Saturday, October 2, 2021, 9:05 [IST]
Other articles published on Oct 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X