ಅಭ್ಯಾಸದ ವೇಳೆ ಕೈಲ್ ಜಾಮಿಸನ್ ಕೊಹ್ಲಿಗೆ ಬೌಲಿಂಗ್ ಮಾಡಲು ನಿರಾಕರಿಸಿದ ಕಾರಣ ತಿಳಿಸಿದ ಕ್ರಿಶ್ಚಿಯನ್

ಇತ್ತೀಚಿನ ಕೆಲ ಐಪಿಎಲ್ ಟೂರ್ನಿಗಳಿಗೆ ಹೋಲಿಸಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಟೂರ್ನಿಯ ಮೊದಲ 4 ಪಂದ್ಯಗಳಲ್ಲಿ ಸತತವಾಗಿ ಗೆಲುವನ್ನು ಸಾಧಿಸಿ ಮಿಂಚಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸದ್ಯಕ್ಕೆ 6 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಜಯ ಗಳಿಸುವುದರ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಹೀಗೆ ಉತ್ತಮ ಪ್ರದರ್ಶನ ತೋರುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೆಟ್‌ನಲ್ಲಿ ಅಭ್ಯಾಸ ಮಾಡುವ ವೇಳೆ ನಡೆದ ಒಂದು ತಮಾಷೆಯ ಘಟನೆಯನ್ನು ತಂಡದ ಆಟಗಾರ ಡೇನಿಯಲ್ ಕ್ರಿಶ್ಚಿಯನ್ ಹಂಚಿಕೊಂಡಿದ್ದಾರೆ.

ಕಣ್ಣಿಗೆ ಬಟ್ಟೆ ಕಟ್ಟಿದರೂ ಎಬಿಡಿ ಆಟ ಹೀಗೇ ಇರುತ್ತೆ ಎಂದ ಮಾಜಿ ಕ್ರಿಕೆಟಿಗ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಮೊದಲ ವಾರದ ನೆಟ್ ಅಭ್ಯಾಸದಲ್ಲಿ ತೊಡಗಿದ್ದಾಗ ವಿರಾಟ್ ಕೊಹ್ಲಿ ತನ್ನ ಸಹ ಆಟಗಾರನಾದ ಕೈಲ್ ಜಾಮಿಸನ್‌ಗೆ ಡ್ಯೂಕ್ ಬಾಲ್ ಬಳಸಿ ಬೌಲಿಂಗ್ ಮಾಡುವಂತೆ ಕೇಳಿದ್ದಾರೆ. ವಿರಾಟ್ ಕೊಹ್ಲಿಯ ಈ ಕೋರಿಕೆಯನ್ನು ತಿರಸ್ಕರಿಸಿದ ಕೈಲ್ ಜಾಮಿಸನ್ ಯಾವುದೇ ಕಾರಣಕ್ಕೂ ಡ್ಯೂಕ್ ಬಾಲ್ ಬಳಸಿ ಬೌಲಿಂಗ್ ಮಾಡುವುದಿಲ್ಲ ಎಂದು ಹೇಳಿದ್ದರು. ತದನಂತರ ವಿರಾಟ್ ಕೊಹ್ಲಿ ಮತ್ತು ಕೈಲ್ ಜಾಮಿಸನ್ ಇಬ್ಬರು ಸಹ ಪರಸ್ಪರ ಮುಖ ನೋಡಿಕೊಂಡು ನಗಲಾರಂಭಿಸಿದ್ದರು. ವಿರಾಟ್ ಕೊಹ್ಲಿ ಮತ್ತು ಕೈಲ್ ಜಾಮಿಸನ್ ನಡುವೆ ನಡೆದ ಈ ತಮಾಷೆಯ ಘಟನೆಯನ್ನು ಡೇನಿಯಲ್ ಕ್ರಿಶ್ಚಿಯನ್ ಹಂಚಿಕೊಂಡಿದ್ದಾರೆ.

ಕೈಲ್ ಜಾಮಿಸನ್‌ಗೆ ಡ್ಯೂಕ್ ಬಾಲ್ ಬಳಸಿ ಬೌಲಿಂಗ್ ಮಾಡುವಂತೆ ವಿರಾಟ್ ಕೊಹ್ಲಿ ಹೇಳಿದಾಗ ಜಾಮಿಸನ್ ಅದನ್ನು ತಿರಸ್ಕರಿಸಿದ ಕಾರಣ ಮುಂಬರುವ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ. ಹೌದು ಈ ವರ್ಷ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಡ್ಯೂಕ್ ಬಾಲ್ ಬಳಸಲಾಗುತ್ತದೆ.

ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಕೈಲ್ ಜಾಮಿಸನ್ ಇಬ್ಬರೂ ಭಾಗವಹಿಸುವುದರಿಂದ ಪ್ರಸ್ತುತ ಐಪಿಎಲ್ ನೆಟ್ ಅಭ್ಯಾಸದ ವೇಳೆ ಡ್ಯೂಕ್ ಬಾಲ್ ಬಳಸಿ ಬೌಲಿಂಗ್ ಮಾಡಿದರೆ ಕೊಹ್ಲಿಗೆ ತನ್ನ ಡ್ಯೂಕ್ ಬಾಲ್ ಎಸೆತದ ಪರಿಚಯ ಈಗಲೇ ಆಗುತ್ತದೆ, ಹೀಗಾಗಿ ಮುಂದಿನ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಕೊಹ್ಲಿ ಸುಲಭವಾಗಿ ಬ್ಯಾಟಿಂಗ್ ಮಾಡಬಲ್ಲರು ಎಂಬ ಮುಂದಾಲೋಚನೆಯಿಂದ ಕೈಲ್ ಜಾಮಿಸನ್ ಡ್ಯೂಕ್ ಬಾಲ್ ಬಳಸಿ ಬೌಲಿಂಗ್ ಮಾಡಲು ಒಪ್ಪಿಗೆ ನೀಡಲಿಲ್ಲ.

For Quick Alerts
ALLOW NOTIFICATIONS
For Daily Alerts
Story first published: Thursday, April 29, 2021, 14:35 [IST]
Other articles published on Apr 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X