PBKS vs SRH : ಪಂಜಾಬ್ vs ಹೈದರಾಬಾದ್, ಸಂಭಾವ್ಯ ಪ್ಲೇಯಿಂಗ್‌ XI, ಹವಾಮಾನ-ಪಿಚ್ ವರದಿ

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಲಿವೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ ಏಪ್ರಿಲ್ 21ರಂದು 3.30 PMಗೆ ಆರಂಭಗೊಳ್ಳಲಿದೆ. ಈ ಪಂದ್ಯದಲ್ಲಿ ಗೆಲುವು ಎರಡೂ ತಂಡಗಳಿಗೂ ಅನಿವಾರ್ಯವಾಗಿದೆ. ಅದರಲ್ಲೂ ಸನ್ ರೈಸರ್ಸ್ ಹೈದರಾಬಾದ್ ಗೆಲ್ಲಲೇಬೇಕಾದ ಇಕ್ಕಟ್ಟಿನಲ್ಲಿದೆ.

ಐಪಿಎಲ್: ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮಾಗೆ 12 ಲಕ್ಷ ರೂ. ದಂಡ

ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಎರಡೂ ತಂಡಗಳೂ ಈವರೆಗೆ ತಲಾ 3 ಪಂದ್ಯಗಳನ್ನಾಡಿವೆ. ಇದರಲ್ಲಿ ಪಂಜಾಬ್ 1ರಲ್ಲಿ ಗೆದ್ದಿದ್ದರೆ, ಡೇವಿಡ್ ವಾರ್ನರ್ ಪಡೆ ಒಂದರಲ್ಲೂ ಗೆಲುವು ಕಂಡಿಲ್ಲ. ಇಂದಿನ ಪಂದ್ಯಕ್ಕೂ ಮುನ್ನ ಪ್ರಮುಖ ಮಾಹಿತಿಗಳು ಇಲ್ಲಿವೆ.

ಹವಾಮಾನ ವರದಿ

ಹವಾಮಾನ ವರದಿ

ಪಂಜಾಬ್ ಕಿಂಗ್ಸ್‌ ಮತ್ತು ಸನ್ ರೈಡರ್ಸ್ ಹೈದರಾಬಾದ್ ಪಂದ್ಯ ನಡೆಯುವ ದಿನ ಚೆನ್ನೈನಲ್ಲಿ 34 ಡಿಗ್ರೀ ಸೆಲ್ಶಿಯಸ್ ತಾಪಮಾನ ಇರಲಿದೆ. ಅಂದರೆ ಈ ದಿನ ಆಟಗಾರರಿಗೆ ವಿಪರೀತ ಶೆಕೆಯ ಅನುಭವ ಆಗಲಿದೆ, ಆಟದ ವೇಳೆ ತೇವಾಂಶದ ಪ್ರಮಾಣ ಹೆಚ್ಚಿರಲಿದೆ. ಇಬ್ಬನಿಯೂ ಆಟದ ಮೇಲೆ ಪರಿಣಾಮ ಬೀರಲಿದೆ. ಟಾಸ್ ಗೆಲ್ಲುವ ತಂಡ ಬೌಲಿಂಗ್‌ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು.

ಪಿಚ್ ವರದಿ

ಪಿಚ್ ವರದಿ

ಹಿಂದಿನ ಪಂದ್ಯಗಳಲ್ಲಿ ನಾವು ಗಮನಿಸಿದಂತೆ ಚೆನ್ನೈ ಪಿಚ್ ಬೌಲರ್‌ಗಳ ಫ್ರೆಂಡ್ಲಿ ಪಿಚ್. ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ಇದೊಂಥರಾ ಸ್ಲೋ ಪಿಚ್. ದೊಡ್ಡ ಟೋಟಲ್ ಕಲೆ ಹಾಕೋದು ಇಲ್ಲಿ ಕಷ್ಟ. ಆದರೆ ಈ ಮೊದಲಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 204 ಕಲೆ ಹಾಕಿತ್ತು. ಈ ಪಿಚ್‌ನಲ್ಲಿ 160-170 ರನ್ ಗಳಿಸಿದರೆ ಅದು ಉತ್ತಮ ಮೊತ್ತವಾಗಲಿದೆ.

ಪಂಜಾಬ್ ಕಿಂಗ್ಸ್‌ ತಂಡ

ಪಂಜಾಬ್ ಕಿಂಗ್ಸ್‌ ತಂಡ

ಕೆ.ಎಲ್. ರಾಹುಲ್ (ಸಿ), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಶಾರುಖ್ ಖಾನ್, ಜಾಯೆ ರಿಚರ್ಡ್ಸನ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ರಿಲೆ ಮೆರೆಡಿತ್, ಅರ್ಷ್‌ದೀಪ್ ಸಿಂಗ್.

ಸನ್ ರೈಸರ್ಸ್ ಹೈದರಾಬಾದ್ ತಂಡ

ಸನ್ ರೈಸರ್ಸ್ ಹೈದರಾಬಾದ್ ತಂಡ

ಡೇವಿಡ್ ವಾರ್ನರ್ (ಸಿ), ಜಾನಿ ಬೈರ್‌ಸ್ಟೋವ್, ಮನೀಶ್ ಪಾಂಡೆ, ವಿರಾಟ್ ಸಿಂಗ್, ವಿಜಯ್ ಶಂಕರ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಮುಜೀಬ್ ಉರ್ ರಹಮಾನ್, ಖಲೀಲ್ ಅಹ್ಮದ್

For Quick Alerts
ALLOW NOTIFICATIONS
For Daily Alerts
Story first published: Wednesday, April 21, 2021, 10:53 [IST]
Other articles published on Apr 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X