RR vs SRH Preview : ರಾಜಸ್ಥಾನ್ - ಹೈದರಾಬಾದ್: ಸಂಭಾವ್ಯ ತಂಡ ಹವಾಮಾನ ಪಿಚ್ ರಿಪೋರ್ಟ್

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ರಸ್ತುತ ಅಂಕಪಟ್ಟಿಯಲ್ಲಿ ಕೊನೆಯ 2 ಸ್ಥಾನಗಳನ್ನು ಪಡೆದುಕೊಂಡಿರುವ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಭಾನುವಾರ (ಮೇ 2) ಹಣಾಹಣಿ ನಡೆಸಲಿವೆ. ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿ ಕೇವಲ 1 ಪಂದ್ಯದಲ್ಲಿ ಜಯಗಳಿಸಿ 5 ಪಂದ್ಯದಲ್ಲಿ ಸೋತಿರುವ ಹೈದರಾಬಾದ್ ತಂಡವು 6 ಪಂದ್ಯಗಳನ್ನಾಡಿ 2 ಪಂದ್ಯಗಳಲ್ಲಿ ಜಯಗಳಿಸಿ 4 ಪಂದ್ಯಗಳಲ್ಲಿ ಸೋಲುಂಡಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಎರಡೂ ತಂಡಗಳಿಗೂ ಸಹ ಬಹುಮುಖ್ಯವಾಗಿದೆ.

ಪಂದ್ಯದ ಆರಂಭ: ಪಂದ್ಯವು ಮಧ್ಯಾಹ್ನ 3.30ಕ್ಕೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಲಭ್ಯವಿರಲಿದ್ದು ಡಿಸ್ನಿ + ಹಾಟ್‌ಸ್ಟಾರ್ VIP ಚಂದಾದಾರರು ಸಹ ಪಂದ್ಯವನ್ನು ವೀಕ್ಷಿಸಬಹುದು.

ಹವಾಮಾನ ವರದಿ

ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯಕ್ಕೆ ಯಾವುದೇ ರೀತಿಯ ಮಳೆಯ ಅಡ್ಡಿ ಇರುವುದಿಲ್ಲ. ಮಧ್ಯಾಹ್ನ ಶುರುವಾಗುವ ಪಂದ್ಯವಾಗಿರುವುದರಿಂದ ಹೆಚ್ಚಿನ ಉಷ್ಣಾಂಶ ಇರಲಿದೆ. ಸುಮಾರು 38° ಸೆಲ್ಸಿಯಸ್ ಉಷ್ಣಾಂಶವಿರಲಿದೆ.

ಪಿಚ್ ರಿಪೋರ್ಟ್

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನ ಪಿಚ್ ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎಂದೇ ಹೇಳಬಹುದು. ಈ ಕ್ರೀಡಾಂಗಣದಲ್ಲಿ ನಡೆದಿರುವ ಪ್ರಸ್ತುತ ಐಪಿಎಲ್ ಟೂರ್ನಿಯ ಪಂದ್ಯಗಳಲ್ಲಿ ದೊಡ್ಡಮಟ್ಟದ ರನ್ ಹೊಳೆಯೇ ಹರಿದಿದೆ. ವೇಗಿಗಳಿಗೆ ಈ ಪಿಚ್ ತುಸು ಸಹಕಾರಿ ಆದರೆ ಸ್ಪಿನ್ ಬೌಲರ್‌ಗಳ ಜಾದೂ ಈ ಪಿಚ್‌ನಲ್ಲಿ ನಡೆಯುವುದಿಲ್ಲ. ಮೊದಲು ಬ್ಯಾಟಿಂಗ್ ಮಾಡುವ ತಂಡ 170ಕ್ಕಿಂತ ಅಧಿಕ ರನ್ ಗಳಿಸಿದರೆ ಮಾತ್ರ ಎದುರಾಳಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಬಹುದು.

ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ತಂಡ :

ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ/ವಿ.ಕೀ), ಡೇವಿಡ್ ಮಿಲ್ಲರ್, ಶಿವಂ ದುಬೆ, ರಾಹುಲ್ ತೆವಾಟಿಯಾ, ರಿಯಾನ್ ಪರಾಗ್, ಕ್ರಿಸ್ ಮೊರಿಸ್, ಜಯದೇವ್ ಉನಾದ್ಕತ್/ಶ್ರೇಯಸ್ ಗೋಪಾಲ್, ಮುಸ್ತಫಿಜರ್ ರೆಹಮಾನ್ ಹಾಗೂ ಚೇತನ್ ಸಕಾರಿಯಾ.

ಸನ್ ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ :

ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಭಾರೀ ಬದಲಾವಣೆ ಉಂಟಾಗಿದ್ದು ಡೇವಿಡ್ ವಾರ್ನರ್ ಬದಲು ಕೇನ್ ವಿಲಿಯಮ್ಸನ್ ಇಂದಿನ ಪಂದ್ಯದಿಂದ ನಾಯಕತ್ವವನ್ನು ನಿರ್ವಹಿಸಲಿದ್ದಾರೆ.

ಜಾನಿ ಬೈರ್‌ಸ್ಟೋವ್(ವಿ.ಕೀ), ಡೇವಿಡ್ ವಾರ್ನರ್, ವೃದ್ಧಿಮನ್ ಸಹಾ/ಪ್ರಿಯಮ್ ಗಾರ್ಗ್, ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್ (ನಾಯಕ), ವಿಜಯಶಂಕರ್, ಕೇದಾರ್ ಜಾಧವ್, ಮಹಮ್ಮದ್ ನಬಿ / ಜೇಸನ್ ಹೋಲ್ಡರ್, ರಶೀದ್ ಖಾನ್, ಶಹಬಾಝ್ ನದೀಮ್/ಜಗದೀಶ್ ಸುಚಿತ್, ಖಲೀಲ್ ಅಹ್ಮದ್, ಭುವನೇಶ್ವರ್ ಕುಮಾರ್ ಹಾಗೂ ಸಂದೀಪ್ ಶರ್ಮಾ/ಸಿದ್ಧಾರ್ಥ್ ಕೌಲ್

For Quick Alerts
ALLOW NOTIFICATIONS
For Daily Alerts
Story first published: Sunday, May 2, 2021, 9:52 [IST]
Other articles published on May 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X