ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಪಂಜಾಬ್ vs ಚೆನ್ನೈ, ಮುಖಾಮುಖಿಯ ಅಂಕಿಅಂಶ

IPL 2021 Match 7: CSK v PBKS - Head-to-head stats, highest scorer, highest wicket-takers

ಐಪಿಎಲ್ 14ನೇ ಆವೃತ್ತಿಯ 8ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದರೆ ಪಂಜಾಬ್ ಕಿಂಗ್ಸ್ ರೋಚಕ ಗೆಲುವು ಸಾಧಿಸಿ ಮುನ್ನಡೆಯನ್ನು ಪಡೆದುಕೊಂಡಿದೆ. ಈ ಎರಡು ತಂಡಗಳು ಕೂಡ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕಾದಾಟವನ್ನು ನಡೆಸಲಿದೆ.

ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ಹಾಗೂ ಚೆನ್ನೈ ತಂಡಗಳು ಈವರೆಗೆ 24 ಸಂದರ್ಭಗಳಲ್ಲಿ ಮುಖಾಮುಖಿಯಾಗಿದೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 15 ಗೆಲುವು ಸಾಧಿಸಿ ಮುನ್ನಡೆಯಲ್ಲಿದ್ದರೆ ಪಂಜಾಬ್ ಕಿಂಗ್ಸ್ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಸ್ಪಷ್ಟ ಮೇಲುಗೈ ಸಾಧಿಸಿದೆ.

ಐಪಿಎಲ್: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಹೈಲೈಟ್ಸ್‌ಐಪಿಎಲ್: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಹೈಲೈಟ್ಸ್‌

ಇತ್ತೀಚಿನ ಪಂದ್ಯಗಳಲ್ಲಿಯೂ ಚೆನ್ನೈ ಮೇಲುಗೈ

ಇತ್ತೀಚಿನ ಪಂದ್ಯಗಳಲ್ಲಿಯೂ ಚೆನ್ನೈ ಮೇಲುಗೈ

ಇನ್ನು ಇತ್ತೀಚಿನ ಪಂದ್ಯಗಳ ಫಲಿತಾಂಶದಲ್ಲಿಯೂ ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ ಸ್ಪಷ್ಟ ಮೇಲುಗೈ ಸಾಧಿಸಿದೆ. ಅಂತಿಮ ಐದು ಪಂದ್ಯಗಳ ಕಾದಾಟದಲ್ಲಿ ಚೆನ್ನೈ ನಾಲ್ಕು ಪಂದ್ಯಗಳನ್ನು ಗೆದ್ದು ಬೀಗಿದೆ. ಕಳೆದ ಆವೃತ್ತಿಯ ಟೂರ್ನಿಯಲ್ಲಿ ಚೆನ್ನೈ ಸಂಪೂರ್ಣ ವಿಫಲವಾಗಿದ್ದರೂ ಪಂಜಾಬ್ ವಿರುದ್ಧ ಆಡಿದ ಎರಡು ಪಂದ್ಯಗಳಲ್ಲಿಯೂ ದೊಡ್ಡ ಅಂತರದ ಗೆಲುವು ಸಾಧಿಸಿದೆ.

ಕಳೆದ ಆವೃತ್ತಿಯ ಫಲಿತಾಂಶ

ಕಳೆದ ಆವೃತ್ತಿಯ ಫಲಿತಾಂಶ

ಕಳೆದ ಆವೃತ್ತಿಯ ಮೊದಲ ಮುಖಾಮುಖಿಯಲ್ಲಿ ಪಂಜಾಬ್ ನೀಡಿದ್ದ 179 ರನ್‌ಗಳ ಗುರಿಯನ್ನು ಚೆನ್ನೈ ಒಂದೇ ಒಂದು ವಿಕೆಟ್ ಕಳೆದುಕೊಳ್ಳದೆ 10 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ಎರಡನೇ ಪಂದ್ಯದಲ್ಲಿ ಪಂಜಾಬ್ 154 ರನ್‌ಗಳ ಗುರಿಯನ್ನು ಚೆನ್ನೈಗೆ ನೀಡಿತ್ತು. ಇದನ್ನು 1 ವಿಕೆಟ್ ಕಳೆದುಕೊಂಡು ಬೆನ್ನಟ್ಟುವಲ್ಲಿ ಚೆನ್ನೈ ಯಶಸ್ವಿಯಾಗಿತ್ತು.

ಸುರೇಶ್ ರೈನಾ ಟಾಪ್ ಸ್ಕೋರರ್

ಸುರೇಶ್ ರೈನಾ ಟಾಪ್ ಸ್ಕೋರರ್

ಚೆನ್ನೈ ಹಾಗೂ ಪಂಜಾಬ್ ತಂಡಗಳು ಮುಖಾಮುಖಿಯಾದ ಸಂದರ್ಭದಲ್ಲಿ ಸುರೇಶ್ ರೈನಾ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿದ್ದಾರೆ. ರೈನಾ 711 ರನ್‌ಗಳಿಸಿದ್ದರೆ ಎರಡನೇ ಸ್ಥಾನದಲ್ಲಿ 525 ರನ್‌ಗಳಿಸಿರುವ ಎಂಎಸ್ ಧೋನಿ ಇದ್ದಾರೆ.

Chris Morrisಗೆ ಅಷ್ಟೊಂದು ಕಾಸು ಕೊಟ್ಟಿದ್ದಕೂ ಸಾರ್ಥಕ | Oneindia Kannada
ಎರಡು ತಂಡಗಳ ಪರವಾಗಿ ಅಶ್ವಿನ್ ಪರಾಕ್ರಮ

ಎರಡು ತಂಡಗಳ ಪರವಾಗಿ ಅಶ್ವಿನ್ ಪರಾಕ್ರಮ

ಬೌಲರ್‌ಗಳ ಪೈಕಿ ಆರ್ ಅಶ್ವಿನ್ ಅತಿ ಹೆಚ್ಚು ಯಶಸ್ಸು ಪಡೆದಿದ್ದಾರೆ. 18 ವಿಕೆಟ್‌ಗಳನ್ನು ಈ ಎರಡು ತಂಡಗಳ ಮುಖಾಮುಖಿಯ ಸಂದರ್ಭದಲ್ಲಿ 18 ವಿಕೆಟ್ ಕಬಳಿಸಿದ್ದಾರೆ. ಚೆನ್ನೈ ಹಾಗೂ ಪಂಜಾಬ್ ಎರಡು ತಂಡಗಳ ಪರವಾಗಿ ಅವರು ಈ ಸಾಧನೆ ಮಾಡಿದ್ದು ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಡುತ್ತಿದ್ದಾರೆ. ಎರಡನೇ ಸ್ಥಾನದಲ್ಲಿ 14 ವಿಕೆಟ್ ಕಿತ್ತಿರುವ ಡ್ವೇಯ್ನ್ ಬ್ರಾವೋ ಇದ್ದಾರೆ.

Story first published: Friday, April 16, 2021, 12:41 [IST]
Other articles published on Apr 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X