ಐಪಿಎಲ್ 2021: ಕೆಕೆಆರ್ ವಿರುದ್ಧ ಸಾವಿರ ರನ್‌ಗಳ ಸಾಧನೆ ಮಾಡಿದ ರೋಹಿತ್ ಶರ್ಮಾ

ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಅಬುದಾಬಿಯಲ್ಲಿ ಮುಖಾಮುಖಿಯಾಗಿದ್ದು ಎರಡು ತಂಡಗಳ ನಡುವೆ ಭರ್ಜರಿ ಹಣಾಹಣಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರೋಹಿತ್ ಶರ್ಮಾ 1000 ರನ್‌ಗಳನ್ನು ಪೂರೈಸಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಈವರೆಗೆ ಯಾರೂ ಮಾಡದ ಸಾಧನೆ ಮಾಡಿದ್ದಾರೆ ಮುಂಬೈ ಇಂಡಿಯನ್ಸ್ ತಂಡದ ನಾಯಕ.

ಹೌದು, ಐಪಿಎಲ್‌ನ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿರುವ ರೋಹಿತ್ ಶರ್ಮಾ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಪ್ರತಿ ಬಾರಿಯೂ ಕೆಕೆಆಋ್ ವಿರುದ್ಧ ಅಬ್ಬರಿಸುವ ಶರ್ಮಾ ಕೊಲ್ಕತ್ತಾ ನೈಟ್ ರೈಡರ್ಸ್ ಒಂದೇ ತಂಡದ ವಿರುದ್ಧ ಐಪಿಎಲ್‌ನಲ್ಲಿ 1000 ರನ್‌ಗಳನ್ನು ಬಾರಿಸಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ವಿಶೇಷ ದಾಖಲೆಯೊಂದನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಆಡಿದ 8 ಪಂದ್ಯಗಳಲ್ಲಿ 7 ಪಂದ್ಯ ಸೋತ ತಂಡಗಳ ಪಟ್ಟಿಐಪಿಎಲ್‌ನಲ್ಲಿ ಆಡಿದ 8 ಪಂದ್ಯಗಳಲ್ಲಿ 7 ಪಂದ್ಯ ಸೋತ ತಂಡಗಳ ಪಟ್ಟಿ

ಐಪಿಎಲ್‌ನ ಯುಎಇ ಚರಣದ ಮೊದಲ ಪಂದ್ಯದಲ್ಲಿ ಗಾಯದ ಕಾರಣದಿಂದಾಗಿ ಹೊರಗುಳಿದಿದ್ದ ರೋಹಿತ್ ಶರ್ಮಾ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆಡಲು ಇಳಿದಿದ್ದಾರೆ. ಟಾಸ್ ಸೋತು ಮುಂಬೈ ಇಂಡಿಯನ್ಸ್ ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲನ್ನು ಪಡೆಯಿತು. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ನಾಯಕ ರೋಹಿತ್ ಶರ್ಮಾ ಆರಂಭಿಕನಾಗಿ ಕ್ವಿಂಟನ್ ಡಿಕಾಕ್ ಜೊತೆಗೆ ಬ್ಯಾಟಿಂಗ್‌ಗೆ ಇಳಿದರು.

ಟಿ ನಟರಾಜನ್ ಕೋವಿಡ್‌ಗೆ ತುತ್ತಾಗಿದ್ದು ಆಟದ ಮೇಲೆ ಪರಿಣಾಮ ಬೀರಿಲ್ಲ'ಟಿ ನಟರಾಜನ್ ಕೋವಿಡ್‌ಗೆ ತುತ್ತಾಗಿದ್ದು ಆಟದ ಮೇಲೆ ಪರಿಣಾಮ ಬೀರಿಲ್ಲ'

ಮುಂಬೈ ಇಂಡಿಯನ್ಸ್‌ಗೆ ಕ್ವಿಂಟನ್ ಡಿಕಾಕ್ ಜೊತೆ ಸೇರಿ ಉತ್ತಮ ಆರಂಭ ನೀಡಿದ ರೋಹಿತ್ ಶರ್ಮಾ ಎರಡನೇ ಚರಣದಲ್ಲಿ ಉತ್ತಮ ಆರಂಭವನ್ನು ಪಡೆದಿದ್ದಾರೆ. 30 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 33 ರನ್‌ಗಳನ್ನು ಎದುರಿಸಿದರು. ಇದರಲ್ಲಿ 4 ಬೌಂಡರಿ ಸೇರಿತ್ತು. ಬಳಿಕ ನರೈನ್ ಎಸೆತದಲ್ಲಿ ಶುಬ್ಮನ್ ಗಿಲ್‌ಗೆ ಕ್ಯಾಚ್ ನೀಡಿದ ರೋಹಿತ್ ಶರ್ಮಾ ಪೆವಿಲಿಯನ್ ಸೇರಿದರು. ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಜೋಡಿ 78 ರನ್‌ಗಳ ಉತ್ತಮ ಆರಂಭವನ್ನು ನೀಡಿದರು.

ಕೋಲ್ಕತ್ತಾ ನೈಟ್ ರೈಡರ್ಸ್ ಆಡುವ ಬಳಗ: ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆಂಡ್ರೆ ರಸೆಲ್, ಲೂಕಿ ಫರ್ಗುಸನ್, ಸುನಿಲ್ ನರೈನ್, ವರುಣ್ ಚಕ್ರವರ್ತಿ, ಪ್ರಸಿದ್ಧ್ ಕೃಷ್ಣ

'ದಾಖಲೆ ಮಾಡಿಬಿಟ್ರೆ ಆಗಲ್ಲ, ಪಂದ್ಯದ ದಿನ ಚೆನ್ನಾಗಿ ಆಡಬೇಕು'; ದಾಖಲೆ ಎನ್ನುವವರಿಗೆ ಕುಟುಕಿದ ರೋಹಿತ್'ದಾಖಲೆ ಮಾಡಿಬಿಟ್ರೆ ಆಗಲ್ಲ, ಪಂದ್ಯದ ದಿನ ಚೆನ್ನಾಗಿ ಆಡಬೇಕು'; ದಾಖಲೆ ಎನ್ನುವವರಿಗೆ ಕುಟುಕಿದ ರೋಹಿತ್

Kohli ಹಾಗು Dhoni ಅಭಿಮಾನಿಗಳಿಗೆ ಇದು ವಿಶೇಷ ಪಂದ್ಯ | Oneindia Kannada

ಮುಂಬೈ ಇಂಡಿಯನ್ಸ್ ಆಡುವ ಬಳಗ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಸೌರಭ್ ತಿವಾರಿ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಆಡಮ್ ಮಿಲ್ನೆ, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೋಲ್ಟ್

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 20 - October 27 2021, 03:30 PM
ಇಂಗ್ಲೆಂಡ್
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 23, 2021, 21:04 [IST]
Other articles published on Sep 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X