ಐಪಿಎಲ್ 2021: 7 ದಿನಗಳ ಕ್ವಾರಂಟೈನ್ ಪೂರೈಸಿದ ಕಿರಾನ್ ಪೊಲಾರ್ಡ್, ತರಬೇತಿಗೆ ಸಜ್ಜು

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್ ಆವೃತ್ತಿಯನ್ನು ಆರ್‌ಸಿಬಿ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಆಡುವ ಮೂಲಕ ಆರಂಭಿಸಲಿದೆ. ಈ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ (ಏ.9) ನಡೆಯಲಿದೆ. ಈ ಪಂದ್ಯದಲ್ಲಿ ಭಾಗಿಯಾಗಲು ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಕಿರಾನ್ ಪೊಲಾರ್ಡ್ ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ.
ಕಿರಾನ್ ಪೊಲಾರ್ಡ್ ಅವರು ಮುಂಬೈ ಇಂಡಿಯನ್ಸ್ ಶಿಬಿರದಲ್ಲಿ ಕಾಣದಿರುವುದು ಅನುಮಾನಗಳಿಗೆ ಕಾರಣವಾಗಿತ್ತು. ತಡವಾಗಿ ತಂಡವನ್ನು ಸೇರಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿತ್ತು. ಆದರೆ ಈ ಬಗ್ಗೆ ಎಎನ್‌ಐಗೆ ಕಿರಾನ್ ಪೊಲಾರ್ಡ್ ಅವರ ಆಪ್ತ ಮೂಲಗಳು ಮಾಹಿತಿಯನ್ನು ನೀಡಿದ್ದು ಪೊಲಾರ್ಡ್ ಈಗಷ್ಟೇ ಕ್ವಾರಂಟೈನ್ ಅವಧಿಯನ್ನು ಪೂರೈಸಿದ್ದು ಚೆನ್ನೈನಲ್ಲಿ ಮುಂಬೈ ತಂಡವನ್ನು ಸೇರಿಕೊಂಡಿದ್ದಾರೆ ಎಂಬುದನ್ನು ಖಚಿತಪಡಿಸಿದೆ.
ಈ ಬಾರಿಯ ಐಪಿಎಲ್‌ಗೆ ಬಿಸಿಸಿಐ ಸಿದ್ಧಪಡಿಸಿದ ಎಸ್‌ಒಪಿ ಪ್ರಕಾರ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಪಾಲ್ಗೊಂಡಿದ್ದ ಆಟಗಾರರು ನೇರವಾಗಿ ಐಪಿಎಲ್ ಬಯೋಬಬಲ್‌ಗೆ ಸೇರಿಕೊಳ್ಳುವುದಾದರೆ ಅಂತಾ ಆಟಗಾರರಿಗೆ ಈ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿತ್ತು. ಉಳಿದಂತೆ ಪ್ರತಿಯೊಬ್ಬರು ಕೂಡ ಕಡ್ಡಾಯ 7 ದಿನಗಳ ಕ್ವಾರಂಟೈನ್ ಪೂರೈಸಬೇಕಿದೆ.
ಮುಂಬೈ ಇಂಡಿಯನ್ಸ್ ತಂಡಕ್ಕೆ ಮಂಗಳವಾರ ಕೊರೊನಾ ವೈರಸ್ ಆಘಾತವನ್ನು ನೀಡಿತ್ತು. ಫ್ರಾಂಚೈಸಿಯ ವಿಕೆಟ್ ಕೀಪರ್ ಸಲಹೆಗಾರ ಹಾಗೂ ಪ್ರತಿಭಾನ್ವೇಷಕ ಕಿರಣ್ ಮೋರೆ ಕೊರೊನಾ ವೈರಸ್‌ಗೆ ತುತ್ತಾಗಿರುವುದು ದೃಢಪಟ್ಟಿತ್ತು. ನಂತರ ತಂಡದ ಉಳಿದ ಎಲ್ಲಾ ಆಟಗಾರರ ಹಾಗೂ ಸಿಬ್ಬಂದಿಗಳ ಕೊರೊನಾ ಪರೀಕ್ಷೆಯನ್ನು ನಡೆಸಲಾಗಿದ್ದು ಅದೃಷ್ಟವಶಾತ್ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿಗಳ ವರದಿ ಕೂಡ ನೆಗೆಟಿವ್ ಬಂದಿದೆ.
ಮತ್ತೊಂದೆಡೆ ಆರ್‌ಸಿಬಿ ತಂಡ ಕೂಡ ನಿಟ್ಟುಸಿರು ಬಿಟ್ಟಿದ್ದು ಕೊರೊನಾ ವೈರಸ್‌ಗೆ ತುತ್ತಾಗಿದ್ದ ಯುವ ಆಟಗಾರ ದೇವದತ್ ಪಡಿಕ್ಕಲ್ ಕೊರೊನಾದಿಂದ ಮುಕ್ತರಾಗಿದ್ದಾರೆ. ಬುಧವಾರ ಅವರು ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದು ಉದ್ಘಾಟನಾ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications