ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021 : ಬೆಂಗಳೂರು vs ರಾಜಸ್ಥಾನ್ : ಮಹತ್ವದ ಮೈಲಿಗಲ್ಲುಗಳತ್ತ ಎಬಿಡಿ, ಕೊಹ್ಲಿ, ಮ್ಯಾಕ್ಸ್‌ವೆಲ್ ಚಿತ್ತ

IPL 2021 : players records and milestones could be achieved in RCB vs RR match

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 16ನೇ ಪಂದ್ಯ ಗುರುವಾರ ( ಏಪ್ರಿಲ್ 22 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ನಡೆಯಲಿದೆ. ಈ ಬಾರಿಯ ಟೂರ್ನಿಯಲ್ಲಿ 3 ಪಂದ್ಯಗಳನ್ನಾಡಿ ಮೂರರಲ್ಲಿಯೂ ಜಯಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು, 3 ಪಂದ್ಯಗಳನ್ನಾಡಿ ಒಂದರಲ್ಲಿ ಗೆದ್ದು ಎರಡು ಪಂದ್ಯಗಳಲ್ಲಿ ಸೋಲುಂಡಿರುವ ರಾಜಸ್ಥಾನ್ ರಾಯಲ್ಸ್ ಎದುರಿಸಲಿದ್ದು ಗೆಲುವಿಗಾಗಿ ತೀವ್ರ ಪೈಪೋಟಿ ಏರ್ಪಡಲಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಕಾದಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರರಾದ ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಪ್ರಮುಖ ಮೈಲಿಗಲ್ಲುಗಳನ್ನು ನಿರ್ಮಿಸಲು ಸಜ್ಜಾಗಿದ್ದಾರೆ. ಈ ಆಟಗಾರರು ಈ ಪಂದ್ಯದಲ್ಲಿ ನಿರ್ಮಿಸಬಹುದಾದಂತಹ ಆ ಮಹತ್ವದ ಮೈಲಿಗಲ್ಲುಗಳ ವಿವರ ಇಲ್ಲಿದೆ ನೋಡಿ.

ಎಬಿ ಡಿವಿಲಿಯರ್ಸ್: ಎಬಿ ಡಿವಿಲಿಯರ್ಸ್ ಐಪಿಎಲ್ ಟೂರ್ನಿಯಲ್ಲಿ 5000 ರನ್ ಪೂರೈಸಲು 26 ರನ್‌ಗಳ ಅಗತ್ಯವಿದ್ದು, ಇಂದಿನ ಪಂದ್ಯದಲ್ಲಿ 26 ರನ್ ಬಾರಿಸಿದರೆ ಡೇವಿಡ್ ವಾರ್ನರ್ ನಂತರ 5000 ಐಪಿಎಲ್ ರನ್ ಪೂರೈಸಿದ ವಿದೇಶಿ ಆಟಗಾರ ಎಂಬ ಕೀರ್ತಿಗೆ ಎಬಿಡಿ ಪಾತ್ರರಾಗಲಿದ್ದಾರೆ.

ವಿರಾಟ್ ಕೊಹ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 6000 ಐಪಿಎಲ್ ರನ್ ಪೂರೈಸಲು 51 ರನ್‌ಗಳ ಅಗತ್ಯವಿದ್ದು, ಇಂದಿನ ಪಂದ್ಯದಲ್ಲಿ 51 ರನ್ ಬಾರಿಸಿದರೆ 6000 ಐಪಿಎಲ್ ರನ್ ಪೂರೈಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಲಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ 200 ಐಪಿಎಲ್ ಸಿಕ್ಸರ್ ಪೂರೈಸಲು 1 ಸಿಕ್ಸ್‌ನ ಅಗತ್ಯವಿದೆ.

ಇದಿಷ್ಟೇ ಅಲ್ಲದೆ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಇತಿಹಾಸದಲ್ಲಿ ತನ್ನ 200ನೇ ಪಂದ್ಯವನ್ನಾಡಲಿದ್ದು ಮುಂಬೈ ಇಂಡಿಯನ್ಸ್ (207 ಪಂದ್ಯಗಳು) ನಂತರ 200 ಐಪಿಎಲ್ ಪಂದ್ಯಗಳನ್ನಾಡಿದ ತಂಡ ಎನಿಸಿಕೊಳ್ಳಲಿದೆ.

Story first published: Thursday, April 22, 2021, 9:53 [IST]
Other articles published on Apr 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X