ಐಪಿಎಲ್ 2021, ಪ್ಲೇಆಫ್ ಟೈಮ್‌ಟೇಬಲ್: ನೀವು ತಿಳೀದಿರಲೇಬೇಕಾದ ಮಾಹಿತಿ

ಐಪಿಎಲ್ 14ನೇ ಆವೃತ್ತಿ ಈಗ ಕೊನೆಯ ಹಂತಕ್ಕೆ ತಲುಪಿದೆ. ಲೀಗ್ ಹಂತದ ಎಲ್ಲಾ 56 ಪಂದ್ಯಗಳು ಕೂಡ ಮುಕ್ತಾಯವಾಗಿದ್ದು 8 ತಂಡಗಳ ಪೈಕಿ ನಾಲ್ಕು ತಂಡಗಳೂ ಈಗ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದೆ. ಈ ನಾಲ್ಕು ತಂಡಗಳ ಪೈಕಿ ಫೈನಲ್‌ಗೇರುವ ಆ ಎರಡು ತಂಡಗಳು ಯಾವುದು ಎಂಬುದು ನಿರ್ಧರಿಸುವ ಹಂತ ಬಂದಿದೆ.

ಲೀಗ್ ಹಂತದ ಕೊನೆಯ ದಿನದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 65 ರನ್‌ಗಳ ಒಳಗೆ ಆಲೌಟ್ ಮಾಡುವ ಅಸಾಧ್ಯಯ ಗುರಿಯನ್ನು ಹೊಂದಿತ್ತು. ಇದರಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್ ಹಂತಕ್ಕೇರುವಲ್ಲಿ ವಿಫಲವಾಗಿದೆ. ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬಾರಿಯ ಐಪಿಎಲ್‌ನ ನಾಲ್ಕನೇ ತಂಡವಾಗಿ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಐಪಿಎಲ್‌ನಲ್ಲಿ ಅಗ್ರಸ್ಥಾನಕ್ಕೇರಿದ ಮೂರು ಅಗ್ರ ತಂಡಗಳಾಗಿದೆ.

ಐಪಿಎಲ್ 2021 ಪ್ಲೇ-ಆಫ್‌ಗೆ ಪ್ರವೇಶಿಸಿದ ತಂಡಗಳು

ಐಪಿಎಲ್ 2021 ಪ್ಲೇ-ಆಫ್‌ಗೆ ಪ್ರವೇಶಿಸಿದ ತಂಡಗಳು

1. ಡೆಲ್ಲಿ ಕ್ಯಾಪಿಟಲ್ಸ್: 20 ಅಂಕಗಳು (10 ಗೆಲುವುಗಳು, 4 ಸೋಲುಗಳು)

2. ಚೆನ್ನೈ ಸೂಪರ್ ಕಿಂಗ್ಸ್: 18 ಅಂಕಗಳು (9 ಗೆಲುವು, 5 ಸೋಲು)

3. ರಾಯಲ್ ಚಾಲೆಂಜರ್ಸ್ ಬೆಂಗಳೂರು: 18 ಅಂಕಗಳು (9 ಗೆಲುವು, 5 ಸೋಲು)

4. ಕೋಲ್ಕತಾ ನೈಟ್ ರೈಡರ್ಸ್: 14 ಅಂಕಗಳು (7 ಗೆಲುವು, 7 ಸೋಲು)

ಟ್ರೋಫಿ ಉಳಿಸಿಕೊಳ್ಳಲು ವಿಫಲವಾದ ಮುಂಬೈ

ಟ್ರೋಫಿ ಉಳಿಸಿಕೊಳ್ಳಲು ವಿಫಲವಾದ ಮುಂಬೈ

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ಈ ಹಿಂದಿನ ಆವೃತ್ತಿಯ ಚಾಂಪಿಯನ್ ತಂಡವಾಗಿರುವ ಮುಂಬೈ ಇಂಡಿಯನ್ಸ್ ಲೀಗ್ ಹಂತದಿಂದಲೇ ಹೊರಬೀಳುವ ಮೂಲಕ ಟ್ರೋಫಿಯನ್ನು ತನ್ನಲ್ಲೇ ಉಳೀಸಿಕೊಳ್ಳಲಿ ವಿಫಲವಾಗಿದೆ. 2019 ಹಾಗೂ 2020ರ ಐಪಿಎಲ್‌ನಲ್ಲಿ ಚಾಂಪಿಯನ್ ಎಸಿಸಿಕೊಳ್ಳುವ ಮೂಲಕ ಸತತ ಎರಡು ಆವೃತ್ತಿಗಳಲ್ಲಿ ಚಾಂಪಿಯನ್ ಆಗಿದ್ದ ಮುಂಬೈ ಇಂಡಿಯನ್ಸ್ ಮೂರನೇ ಬಾರಿಗೆ ಈ ಸಾಧನೆ ಮಾಡಲು ವಿಫಲವಾಗಿದ್ದು ದಾಖಲೆಯೊಂದು ಕೈತಪ್ಪಿದಂತಾಗಿದೆ.

ಐಪಿಎಲ್‌ನಲ್ಲಿ ಈವರೆಗೆ ಕೇವಲ ಎರಡು ತಂಡಗಳು ಮಾತ್ರವೇ ಸತತ ಎರಡು ಆವೃತ್ತಿಗಳಲ್ಲಿ ಟ್ರೋಫಿಯನ್ನು ಗೆದ್ದ ಸಾಧನೆ ಮಾಡಿದೆ. 2010& 2011ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಸಾಧನೆ ಮಾಡಿದ್ದರೆ 2019& 2020ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಈ ಸಾಧನೆ ಪುನರಾವರ್ತಿಸಿತ್ತು.

ಪ್ಲೇಆಪ್ ಹಣಾಹಣಿ ಮಾಹಿತಿ

ಪ್ಲೇಆಪ್ ಹಣಾಹಣಿ ಮಾಹಿತಿ

ಕ್ವಾಲಿಫೈಯರ್ 1: ಐಪಿಎಲ್‌ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆದುಕೊಮಡ ತಂಡಗಳು ಕ್ವಾಲಿಫೈಯರ್ 1ರಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯ ಇಂದು (ಅಕ್ಟೋಬರ್ 10) ನಡೆಯಲಿದೆ. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇದರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆಯಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ದೊರೆಯಲಿದೆ.

ಎಲಿಮಿನೇಟರ್: ಐಪಿಎಲ್ ಲೀಗ್ ಹಂತದ ಅಂಕಪಟ್ಟಿಯಲ್ಲಿ ಮೂರು ಹಾಗೂ ನಾಲ್ಕನೇ ಸ್ಥಾನವನ್ನು ಗಳಿಸಿದ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳು ಈ ಪಂದ್ಯದಲ್ಲಿ ಮುಖಾಮುಖೀಯಾಗಲಿದ್ದು ಅಕ್ಟೋಬರ್ 11 ಸೋಮವಾರದಂದು ಈ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಗೆದ್ದ ತಂಡ ಫೈನಲ್ ಪ್ರವೇಶಕ್ಕೆ ಮತ್ತೊಂದು ಪಂದ್ಯದಲ್ಲಿ ಸೆಣೆಸಾಡಬೇಕಿದೆ.

ಕ್ವಾಲಿಫೈಯರ್ 2: ಫೈನಲ್ ಹಂತಕ್ಕೇರುವ ಎರಡನೇ ತಂಡ ಯಾವುದು ಎಂಬುದನ್ನು ಕ್ವಾಲಿಫೈಯರ್ 2 ನಿರ್ಧಾರ ಮಾಡಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ಕ್ವಾಲಿಫೈಯರ್ 1ರಲ್ಲಿ ಸೋತ ತಂಡದ ವಿರುದ್ಧ ಸೆಣೆಸಾಟವನ್ನು ನಡೆಸಬೇಕಿದೆ. ಇದರಲ್ಲಿ ಗೆದ್ದ ತಂಡ ಫೈನಲ್‌ಗೆ ಪ್ರವೇಶ ಪಡೆದರೆ ಸೋತ ತಂಡ ಟೂರ್ನಿಯ ಮೂರನೇ ಸ್ಥಾನವನ್ನು ಪಡೆದುಕೊಳ್ಳಲಿದೆ.

ಫೈನಲ್: ಈ ಬಾರಿಯ ಐಪಿಎಲ್‌ನ ಫೈನಲ್ ಪಂದ್ಯ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ. ಮುಂದಿನ ಶುಕ್ರವಾರ ಈ ಪಂದ್ಯ ನಡೆಯಲಿದ್ದು ಕ್ವಾಲಿಫೈಯರ್ 1 ಹಾಗೂ ಕ್ವಾಲಿಫೈಯರ್ 2ರಲ್ಲಿ ಗೆದ್ದ ತಂಡಗಳ ನಡುವೆ ಈ ಪಂದ್ಯ ನಡೆಯಲಿದೆ.

ಸಮಯ: ಫ್ಲೇ ಆಫ್ ಹಾಗೂ ಫೈನಲ್ ಹಂತದ ನಾಲ್ಕು ಪಂದ್ಯಗಳು ಕೂಡ ಸಂಜೆ 7:30ಕ್ಕೆ ಆರಂಭವಾಗಲಿದೆ.

ನೇರಪ್ರಸಾರ ಹಾಗೂ ಲೈವ್ ಸ್ಟ್ರೀಮಿಂಗ್: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ+ ಹಾಟ್ ಸ್ಟಾರ್ VIP

ಡೆಲಿ ಕ್ಯಾಪಿಟಲ್ಸ್ ಸ್ಕ್ವಾಡ್: ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಶಿಮ್ರಾನ್ ಹೆಟ್ಮೇರ್, ರಿಪಾಲ್ ಪಟೇಲ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಚ್ ನಾರ್ಕಿಯಾ, ವಿಷ್ಣು ವಿನೋದ್, ಕುಲ್ವಂತ್ ಖೆಜ್ರೋಲಿಯಾ, ಲಲಿತ್ ಯಾದವ್, ಪ್ರವೀಣ್ ದುಬೆ, ಬೆನ್ ಡ್ವಾರಶುಯಿಸ್, ಟಾಮ್ ಕರನ್, ಲುಕ್ಮನ್ ಮೇರಿವಾಲಾ, ಮಾರ್ಕಸ್ ಸ್ಟೊಯಿನಿಸ್, ಸ್ಯಾಮ್ ಬಿಲ್ಲಿಂಗ್ಸ್, ಸ್ಟೀವನ್ ಸ್ಮಿತ್, ಉಮೇಶ್ ಯಾದವ್, ಅಮಿತ್ ಮಿಶ್ರಾ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ

ಚೆನ್ನೈ ಸೂಪರ್ ಕಿಂಗ್ಸ್ ಸ್ಕ್ವಾಡ್: ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಜೋಶ್ ಹಜಲ್‌ವುಡ್, ಸುರೇಶ್ ರೈನಾ, ಇಮ್ರಾನ್ ತಾಹಿರ್, ಜೇಸನ್ ಬೆಹ್ರೆಂಡಾರ್ಫ್, ಕೃಷ್ಣಪ್ಪ ಗೌತಮ್, ಲುಂಗಿ ಎನ್‌ಗಿಡಿ, ಮಿಚೆಲ್ ಸಾಂಟ್ನರ್, ರವಿಶ್ರೀನಿವಾಸನ್, ಸಾಯಿ ಕಿಶೋರ್, ಹರಿ ನಿಶಾಂತ್, ಎನ್ ಜಗದೀಶನ್, ಕೆಎಂ ಆಸಿಫ್, ಹರಿಶಂಕರ್ ರೆಡ್ಡಿ, ಡೊಮಿನಿಕ್ ಡ್ರೇಕ್ಸ್, ಭಗತ್ ವರ್ಮ, ಕರ್ಣ್ ಶರ್ಮಾ, ಚೇತೇಶ್ವರ ಪೂಜಾರ

For Quick Alerts
ALLOW NOTIFICATIONS
For Daily Alerts
Story first published: Sunday, October 10, 2021, 9:06 [IST]
Other articles published on Oct 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X