ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಬೆಂಗಳೂರಿನಲ್ಲಿ ಕ್ವಾರಂಟೈನ್ ಆರಂಭಿಸಿದ ಆರ್‌ಸಿಬಿ-ವಿಡಿಯೋ

IPL 2021: RCB players started their quarantine in Bengaluru

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ದ್ವಿತೀಯ ಹಂತದ ಪಂದ್ಯಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸಿದ್ಧವಾಗುತ್ತಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ನಲ್ಲಿ ಸೆಪ್ಟೆಂಬರ್‌ 19ರಿಂದ ಅಕ್ಟೋಬರ್‌ 15ರ ವರೆಗೆ ನಡೆಯಲಿರುವ 14ನೇ ಆವೃತ್ತಿಯ ಐಪಿಎಲ್ ಎರಡನೇ ಹಂತದ ಟೂರ್ನಿಗಾಗಿ ಆರ್‌ಸಿಬಿ ಬೆಂಗಳೂರಿನಲ್ಲಿ ಕ್ವಾರಂಟೈನ್ ಆರಂಭಿಸಿದೆ. ಆಗಸ್ಟ್ 23ರ ಸೋಮವಾರ ಆರ್‌ಸಿಬಿ ಇದರ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿದೆ.

ನೀರಜ್ ಚೋಪ್ರಾ ಮುಂದೆ ಆರ್‌ಜೆ ಮಲಿಷ್ಕಾ ಡ್ಯಾನ್ಸ್: ಭಾರೀ ವಿವಾದ!ನೀರಜ್ ಚೋಪ್ರಾ ಮುಂದೆ ಆರ್‌ಜೆ ಮಲಿಷ್ಕಾ ಡ್ಯಾನ್ಸ್: ಭಾರೀ ವಿವಾದ!

14ನೇ ಆವೃತ್ತಿಯ ಐಪಿಎಲ್ ಆರಂಭಿಕ ಹಂತದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಿತ್ತು. ದ್ವಿತೀಯ ಹಂತದ ಪಂದ್ಯಗಳು ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಹೀಗಾಗಿ ಫ್ರಾಂಚೈಸಿ ಬಗ್ಗೆ ಅಭಿಮಾನಿಗಳ ಕುತೂಹಲ ಇನ್ನೂ ಹೆಚ್ಚಾಗಿದೆ. ಐಪಿಎಲ್ ದ್ವಿತೀಯ ಹಂತಕ್ಕೆ ಐಪಿಎಲ್‌ನ ಮುಖ್ಯ ಕೋಚ್ ಅಲ್ಲದೆ ಒಂದಿಷ್ಟು ಪ್ರಮುಖ ಆಟಗಾರರ ಸೇರ್ಪಡೆಯಾಗಿದೆ.

ಟ್ವಿಟರ್ ವಿಡಿಯೋ ಹಂಚಿಕೊಂಡ ಆರ್‌ಸಿಬಿ

ಆಗಸ್ಟ್ 23ರಂದು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಆರ್‌ಸಿಬಿ ಒಂದು ವಿಡಿಯೋ ಹಂಚಿಕೊಂಡಿದೆ. ಇದರಲ್ಲಿ ಆಟಗಾರರು ಮನೆಯಿಂದ ಹೊರಟು ಆರ್‌ಸಿಬಿ ಕ್ವಾರಂಟೈನ್ ಪಾಲಿಸಲಿದ್ದ ಹೋಟೆಲ್‌ಗೆ ಬರುವವರೆಗಿನ ವಿಡಿಯೋ ಹಾಕಲಾಗಿದೆ. ಆರ್‌ಸಿಬಿ ಪ್ರಮುಖ ಆಟಗಾರರು ಐಪಿಎಲ್ ಮತ್ತೆ ಶುರುವಾಗುವುದರ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ವೇಗಿ ನವದೀಪ್ ಸೈನಿ, ಆಲ್ ರೌಂಡರ್ ಹರ್ಷಲ್ ಪಟೇಲ್, ಶಹಬಾಝ್ ಅಹ್ಮದ್ ಮೊದಲಾದವರು ಮಾತನಾಡಿದ್ದಾರೆ. ನಾವು ಯುಎಇಗೆ ಸಜ್ಜಾಗುತ್ತಿದ್ದೇವೆ. ಐಪಿಎಲ್ ಮತ್ತೆ ಬರುತ್ತಿರುವುದು ಖುಷಿ ನೀಡಿದೆ. ಈ ಕ್ಷಣಕ್ಕಾಗಿಯೇ ನಾವು ಕಾಯುತ್ತಿದ್ದೆವು ಎಂದು ವಿಡಿಯೋದಲ್ಲಿ ಹೇಳಿದ್ದಾರೆ. 'ಬೆಂಗಳೂರಿನಲ್ಲಿ ಕ್ವಾರಂಟೈನ್ ಆರಂಭಿಸುವುದಕ್ಕೂ ಮುನ್ನ ಆರ್‌ಸಿಬಿಯ ಕೆಲವು ಸ್ಟಾರ್‌ಗಳನ್ನು ಕ್ಯಾಚ್ ಮಾಡಲಾಯ್ತು' ಎಂದು ಟ್ವೀಟ್‌ನಲ್ಲಿ ಆರ್‌ಸಿಬಿ ಬರೆದುಕೊಂಡಿದೆ.

ಐಪಿಎಲ್ ದ್ವಿತೀಯ ಹಂತಕ್ಕೆ ಆರ್‌ಸಿಬಿಯಲ್ಲಿ ಬದಲಾವಣೆ

ಐಪಿಎಲ್ ದ್ವಿತೀಯ ಹಂತಕ್ಕೆ ಆರ್‌ಸಿಬಿಯಲ್ಲಿ ಬದಲಾವಣೆ

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್‌ 19ರಿಂದ ನಡೆಯಲಿರುವ ಐಪಿಎಲ್ 2021ರ ದ್ವಿತೀಯ ಹಂತದ ಪಂದ್ಯಗಳ ವೇಳೆ ಆರ್‌ಸಿಬಿ ತಂಡದಲ್ಲಿ ಪ್ರಮುಖ ಬದಲಾವಣೆಗಳು ಕಾಣ ಸಿಗಲಿವೆ. ಒಂದು ತಂಡದ ಮುಖ್ಯ ಕೋಚ್ ಆಗಿ ಸೈಮನ್ ಕಟಿಚ್ ಬದಲು ಮೈಕ್ ಹೆಸನ್ ಆರಿಸಲ್ಪಟ್ಟಿದ್ದಾರೆ. ಅಲ್ಲದೆ ಒಂದಿಷ್ಟು ಪ್ರಮುಖ ಆಟಗಾರರೂ ಬದಲಾಗಿದ್ದಾರೆ. ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಆರ್‌ಸಿಬಿಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಡಂ ಜಂಪಾ ಬದಲು ಶ್ರೀಲಂಕಾದ ಸ್ಪಿನ್ನರ್, ಆಲ್ ರೌಂಡರ್ ವನಿಂದು ಹಸರಂಗ ಆಡಲಿದ್ದಾರೆ. ಆಸೀಸ್ ಮತ್ತೊಬ್ಬ ಬೌಲರ್ ಕೇನ್ ರಿಚರ್ಡ್ಸನ್ ಬದಲು ಶ್ರೀಲಂಕಾದ ದುಶ್ಮಂತ ಚಮೀರ ಆಡಲಿದ್ದಾರೆ. ಇನ್ನು ನ್ಯೂಜಿಲೆಂಡ್‌ನ ವಿಕೆಟ್ ಕೀಪರ್ ಫಿನ್ ಅಲೆನ್ ಬದಲಿಗೆ ಸಿಂಗಾಪುರದ ಕ್ರಿಕೆಟರ್ ಟಿಮ್ ಡೇವಿಡ್ ಕಣಕ್ಕಿಳಿಯಲಿದ್ದಾರೆ. ಆರ್‌ಸಿಬಿ ಈ ವರ್ಷ ಉತ್ತಮ ಫಾರ್ಮ್‌ನಲ್ಲಿದ್ದು, ಬದಲಾವಣೆಗೆ ತಕ್ಕಂತೆ ಉತ್ತಮ ಪ್ರದರ್ಶನವೂ ನೀಡಿದರೆ ಚೊಚ್ಚಲ ಬಾರಿಗೆ ಕಪ್‌ ಗೆಲ್ಲಲು ಅವಕಾಶಗಳಿವೆ. ಐಪಿಎಲ್‌ ದ್ವಿತೀಯ ಹಂತದ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಆರ್‌ಸಿಬಿ ಮೊದಲ ಪಂದ್ಯವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲು ಸ್ವೀಕರಿಸಲಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಳಾಪಟ್ಟಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಳಾಪಟ್ಟಿ

* ಸೆಪ್ಟೆಂಬರ್ 20: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತಾ ನೈಟ್ ರೈಡರ್ಸ್, ರಾತ್ರಿ 7.30
* ಸೆಪ್ಟೆಂಬರ್ 24: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್, ರಾತ್ರಿ 7.30
* ಸೆಪ್ಟೆಂಬರ್ 26: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್, ರಾತ್ರಿ 7.30 ಕ್ಕೆ
* ಸೆಪ್ಟೆಂಬರ್ 29: ರಾಜಸ್ಥಾನ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸಂಜೆ 7.30 ಕ್ಕೆ
* ಅಕ್ಟೋಬರ್ 3: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, ಮಧ್ಯಾಹ್ನ 3.30 ಕ್ಕೆ
* ಅಕ್ಟೋಬರ್ 6: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್, ಸಂಜೆ 7.30 ಕ್ಕೆ
* ಅಕ್ಟೋಬರ್ 8: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್, ಸಂಜೆ 7.30 ಕ್ಕೆ

Story first published: Monday, August 23, 2021, 12:22 [IST]
Other articles published on Aug 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X