ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB vs PBKS : ಈ ದಾಖಲೆಗಳ ಮೇಲಿದೆ ಕೊಹ್ಲಿ, ರಾಹುಲ್ ಕಣ್ಣು

IPL 2021 : RCB vs PBKS stats and record preview

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ 26ನೇ ಪಂದ್ಯ ಶುಕ್ರವಾರ ( ಏಪ್ರಿಲ್ 30 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಇದುವರೆಗೂ 6 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಜಯ ಗಳಿಸಿ ಕೇವಲ ಒಂದು ಪಂದ್ಯದಲ್ಲಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ಪಂದ್ಯಗಳನ್ನಾಡಿ 2 ಪಂದ್ಯಗಳಲ್ಲಿ ಜಯಗಳಿಸಿ 4 ಪಂದ್ಯಗಳಲ್ಲಿ ಸೋಲುಂಡಿರುವ ಪಂಜಾಬ್ ಕಿಂಗ್ಸ್ ತಂಡ ಎದುರಿಸಲಿದೆ.

ಈ ಪಂದ್ಯದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಎರಡೂ ತಂಡಗಳ ಆಟಗಾರರು ತಮ್ಮದೇ ಆದ ಹೊಸ ಮೈಲಿಗಲ್ಲನ್ನು ಸಾಧಿಸುವ ಸಾಧ್ಯತೆಯಿದೆ. ಈ ಪಂದ್ಯದ ಮೂಲಕ ಆಟಗಾರರು ಸಾಧಿಸಬಹುದಾದ ಆ ದಾಖಲೆಗಳ ಪಟ್ಟಿ ಮತ್ತು ಈಗಾಗಲೇ ಸಾಧಿಸಿರುವ ಕೆಲ ವಿಶಿಷ್ಟ ದಾಖಲೆಗಳ ಪಟ್ಟಿ ಮುಂದೆ ಇದೇನು ಓದಿ.

113 ರನ್ : ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್‌ಗೆ 3000 ಐಪಿಎಲ್ ರನ್ ಪೂರೈಸಲು 113 ರನ್‌ಗಳ ಅಗತ್ಯತೆಯಿದೆ.

106 ರನ್ : ಟಿ ಟ್ವೆಂಟಿ ಪಂದ್ಯಗಳಲ್ಲಿ 10,000 ರನ್ ಪೂರೈಸಲು ವಿರಾಟ್ ಕೊಹ್ಲಿಗೆ 106 ರನ್‌ಗಳ ಅಗತ್ಯತೆಯಿದೆ. ಈ ಮೂಲಕ ವಿರಾಟ್ ಕೊಹ್ಲಿ 10,000 ಟಿ ಟ್ವೆಂಟಿ ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

4 ವಿಕೆಟ್‍ಗಳು : ಪಂಜಾಬ್ ಕಿಂಗ್ಸ್ ತಂಡದ ಪರ 50 ವಿಕೆಟ್‍ಗಳನ್ನು ಪಡೆಯಲು ಮೊಹಮ್ಮದ್ ಶಮಿ ಅವರಿಗೆ 4 ವಿಕೆಟ್‍ಗಳ ಅಗತ್ಯತೆಯಿದೆ. ಈ ಮೂಲಕ ಪಿಯೂಷ್ ಚಾವ್ಲಾ, ಸಂದೀಪ್ ಶರ್ಮಾ ಮತ್ತು ಅಕ್ಷರ್ ಪಟೇಲ್ ನಂತರ ಪಂಜಾಬ್ ಕಿಂಗ್ಸ್ ಪರ 50 ವಿಕೆಟ್ ಪಡೆದ ಬೌಲರ್ ಎಂದು ಮೊಹಮ್ಮದ್ ಶಮಿ ಕರೆಸಿಕೊಳ್ಳಲಿದ್ದಾರೆ.

74.20 ಸರಾಸರಿ : ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 74.20 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ದಾಖಲೆಯನ್ನು ಹೊಂದಿದ್ದಾರೆ. ಇದು ಪ್ರಸ್ತುತ ಐಪಿಎಲ್ ತಂಡವೊಂದರ ವಿರುದ್ಧ ಬ್ಯಾಟ್ಸ್‌ಮನ್‌ ಹೊಂದಿರುವ ಅತಿಹೆಚ್ಚಿನ ಬ್ಯಾಟಿಂಗ್ ಸರಾಸರಿಯಾಗಿದೆ.

42 ಸಿಕ್ಸರ್ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಬಿ ಡಿವಿಲಿಯರ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ ಇದುವರೆಗೂ 42 ಸಿಕ್ಸರ್ ಬಾರಿಸಿದ್ದು, ಐಪಿಎಲ್ ಇತಿಹಾಸದಲ್ಲಿ ಎಬಿ ಡಿವಿಲಿಯರ್ಸ್ ತಂಡವೊಂದರ ವಿರುದ್ಧ ಬಾರಿಸಿರುವ ಅತಿಹೆಚ್ಚಿನ ಸಿಕ್ಸರ್ ಇದಾಗಿದೆ.

Story first published: Friday, April 30, 2021, 13:04 [IST]
Other articles published on Apr 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X