ಡೆಲ್ಲಿ ಕ್ಯಾಪಿಟಲ್ಸ್ ಮಾಡಿದ ದೊಡ್ಡ ಎಡವಟ್ಟನ್ನು ಹೇಳಿದ ಕೋಚ್ ರಿಕಿ ಪಾಂಟಿಂಗ್

ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಈಗ ಕೈ ಹಿಸುಕಿಕೊಳ್ಳುತ್ತಿದೆ. ಸೋಲಿನ ಪರಾಮರ್ಶೆಯನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಪ್ರತಿಕ್ರಿಯಿಸಿದ್ದು ಸೋಲಿಗೆ ಕಾರಣವಾಗಿರಬಹುದಾದ ಮಹತ್ವದ ಅಂಶವೊಂದನ್ನು ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೀಡಿದ್ದ 148 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ರಾಜಸ್ಥಾನ್ ತಂಡವನ್ನು ಒಂದು ಹಂತದಲ್ಲಿ 42 ರನ್‌ಗಳಿಗೆ 5 ವಿಕೆಟ್ ಉರುಳುವಂತೆ ಪಂದ್ಯದ ಮೇಲೆ ಹಿಡಿತ ಸಾಧಿಸುವಂತೆ ಮಾಡಿತ್ತು. ಆದರೆ ನಂತರ ದಕ್ಷಿಣ ಆಫ್ರಿಕಾದ ಆಟಗಾರಾದ ಡೇವಿಡ್ ಮಿಲ್ಲರ್ ಹಾಗೂ ಕ್ರಿಸ್ ಮಾರಿಸ್ ಅದ್ಭುತ ಆಟದ ಮೂಲಕ ಪಂದ್ಯವನ್ನು ರಾಜಸ್ಥಾನದತ್ತ ವಾಲುವಂತೆ ಮಾಡಿದರು.

ಐಪಿಎಲ್: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಹೈಲೈಟ್ಸ್‌ಐಪಿಎಲ್: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಹೈಲೈಟ್ಸ್‌

ಸೋಲಿಗೆ ಕಾರಣ

ಸೋಲಿಗೆ ಕಾರಣ

ಪಂದ್ಯದ ಮುಕ್ತಾಯದ ನಂತರ ಸೋಲಿನ ಬಗ್ಗೆ ಮಾತನಾಡಿದ ರಿಕಿ ಪಾಂಟಿಂಗ್ ಹಿನ್ನಡೆಗೆ ಕಾರಣವಾದ ಒಂದು ಅಂಶವನ್ನು ಒತ್ತಿ ಹೇಳಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಅನುಭವಿ ಆರ್ ಅಶ್ವಿನ್ ಅವರನ್ನು ಸಂಪೂರ್ಣವಾಗಿ ಬಳಸಿಕೊಳ್ಳದಿರುವುದು ಕಾರಣವಾಗಿರಬಹುದು ಎಂದಿದ್ದಾರೆ.

ಫಲಿತಾಂಶ ಬದಲಿಸಬಹುದಿತ್ತು

ಫಲಿತಾಂಶ ಬದಲಿಸಬಹುದಿತ್ತು

ಆರ್ ಅಶ್ವಿನ್ ರಾಜಸ್ಥಾನ್ ವಿರುದ್ಧದ ಬೌಲಿಂಗ್ ಸಂದರ್ಭದಲ್ಲಿ ಕೇವಲ 3 ಓವರ್‌ಗಳನ್ನು ಮಾತ್ರವೇ ಎಸೆದಿದ್ದರು. ಇದರಲ್ಲಿ ಅಶ್ವಿನ್ ಕೇವಲ 14 ರನ್‌ ಮಾತ್ರವೇ ನೀಡಿದ್ದರು. ಇದರಲ್ಲಿ ಅಶ್ವಿನ್ ಒಂದೇ ಒಂದು ಬೌಂಡರಿಯನ್ನು ಕೂಡ ನೀಡಿರಲಿಲ್ಲ. ಆರ್ ಅಶ್ವಿನ್ ನಾಲ್ಕು ಓವರ್‌ಗಳ ತಮ್ಮ ಕೋಟಾವನ್ನು ಪೂರ್ಣಗೊಳಿಸಿದ್ದರೆ ಪಂದ್ಯದ ಫಲಿತಾಂಶ ಬದಲಾಗುವ ಸಾಧ್ಯತೆಯಿತ್ತು ಎಂಬ ಅಭಿಪ್ರಾಯವನ್ನು ಪಾಂಟಿಂಗ್ ವ್ಯಕ್ತಡಿಸಿದ್ದಾರೆ.

ತಂಡದ ಜೊತೆ ಚರ್ಚಿಸುತ್ತೇನೆ

ತಂಡದ ಜೊತೆ ಚರ್ಚಿಸುತ್ತೇನೆ

ಆರ್ ಅಶ್ವಿನ್ ತಮ್ಮ 3ನೇ ಓವರ್‌ಅನ್ನು ಅಂತ್ಯಗೊಳಿಸಿದಾಗ ರಾಜಸ್ಥಾನ್ ರಾಯಲ್ಸ್‌ಗೆ 54 ಎಸೆತಗಳಲ್ಲಿ 92 ರನ್‌ಗಳ ಅವಶ್ಯಕತೆಯಿತ್ತು. "ಆತ ಸುಂದರವಾಗಿ ಬೌಲಿಂಗ್ ಮಾಡಿದ್ದರು. 3 ಓವರ್‌ಗಳಲ್ಲಿ ವಿಕೆಟ್ ಪಡೆಯದೆ 14 ರನ್ ನೀಡಿದ್ದರು. ಮೊದಲ ಪಂದ್ಯದಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ ಸಾಕಷ್ಟು ಶ್ರಮ ಪಟ್ಟು ಆಟಕ್ಕೆ ಹೊಂದಿಕೊಂಡಿದ್ದರು. ಇಂದಿನ ಪಂದ್ಯದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ಬಹುಶಃ ಈ ವಿಚಾರದಲ್ಲಿ ನಮ್ಮ ತಂಡ ತಪ್ಪೆಸಗಿದಂತಿದೆ. ಇದನ್ನು ತಂಡದ ಜೊತೆಗೆ ಮಾತನಾಡುವ ಅವಕಾಶ ದೊರೆತಾಗ ನಾನು ಚರ್ಚಿಸಲಿದ್ದೇನೆ" ಎಂದು ಪಾಂಟಿಂಗ್ ಹೇಳಿಕೊಂಡಿದ್ದಾರೆ.

ಮಾರಿಸ್‌ಗೆ ಸುಲಭದ ಎಸೆತಗಳು

ಮಾರಿಸ್‌ಗೆ ಸುಲಭದ ಎಸೆತಗಳು

ಇನ್ನು ಇದೇ ಸಂದರ್ಭದಲ್ಲಿ ಪಾಂಟಿಂಗ್ ಕ್ರಿಸ್ ಮಾರಿಸ್ ಅವರಿಗೆ ಸುಲಭದ ಎಸೆತಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಲಾಯಿತು ಎಂದಿದ್ದಾರೆ. ದೊಡ್ಡ ಹೊಡೆತಗಳನ್ನು ಬಾರಿಸಬಲ್ಲ ಸಾಮರ್ಥ್ಯ ಹೊಂದಿರುವ ಮಾರಿಸ್‌ಗೆ ನಮ್ಮ ಯೋಜನೆಯ ಪ್ರಕಾರ ಬೌಲಿಂಗ್ ದಾಳಿ ನಡೆಸಲಿಲ್ಲ ಎಂದಿದ್ದಾರೆ ಪಾಂಟಿಂಗ್. ಕ್ರಿಸ್ ಮಾರಿಸ್ 18 ಎಸೆತಗಳನ್ನು ಎದುರಿಸಿ 4 ಸಿಕ್ಸರ್‌ಗಳ ಸಹಿತ 36 ರನ್‌ ಗಳಿಸಿ ತಂಡಕ್ಕೆ ಗೆಲುವನ್ನು ನೀಡಿದರು.

For Quick Alerts
ALLOW NOTIFICATIONS
For Daily Alerts
Story first published: Friday, April 16, 2021, 12:42 [IST]
Other articles published on Apr 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X