ಐಪಿಎಲ್‌ನಲ್ಲಿ ಈ 7 ಕ್ರಿಕೆಟರ್ಸ್ ಆಟ ತಪ್ಪದೇ ನೋಡಿ: ರಿಕಿ ಪಾಂಟಿಂಗ್

ನವದೆಹಲಿ: ಏಪ್ರಿಲ್ 9ರಿಂದ ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಗೊಳ್ಳಲಿದೆ. ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿವೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ 7.30 PMಗೆ ಆರಂಭಗೊಳ್ಳಲಿದೆ.

ಚೆನ್ನೈ ತಂಡಕ್ಕೆ ಜೋಶ್ ಹೇಜಲ್‌ವುಡ್‌ ಬದಲಿ ಆಟಗಾರ ಎಂಟ್ರಿ

14ನೇ ಐಪಿಎಲ್ ಆವೃತ್ತಿಯಲ್ಲಿ ಹಲವಾರು ತಂಡಗಳಲ್ಲಿ ಆಟಗಾರರ ಬದಲಾವಣೆಗಳಾಗಿವೆ. ಈ ಬಾರಿ ನಡೆದಿದ್ದ ಆಟಗಾರ ಮಿನಿ ಹರಾಜಿನ ವೇಳೆ ಆಟಗಾರರು ಫ್ರಾಂಚೈಸಿಯಿಂದ ಫ್ರಾಂಚೈಸಿಗೆ ಹಾರಿದ್ದರು. ಇನ್ನು ಕೆಲವರು ತಂಡಗಳಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದರು.

ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ನಾವು ನೋಡಲೇಬೇಕಾದ ಒಂದಿಷ್ಟು ಆಟಗಾರರಿದ್ದಾರೆ. ಅವರಲ್ಲಿ ಒಂದಿಷ್ಟು ಮಂದಿಯನ್ನು ಆಸ್ಟ್ರೇಲಿಯಾದ ಮಾಜಿ ನಾಯಕ, ಸದ್ಯ ಡೆಲ್ಲಿ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ಆಗಿರುವ ರಿಕಿ ಪಾಂಟಿಂಗ್‌ ಹೆಸರಿಸಿದ್ದಾರೆ.

ಐಪಿಎಲ್ : ಕಳೆದ ಬಾರಿ ಅತಿ ಹೆಚ್ಚು ಅರ್ಧ ಶತಕ ಬಾರಿಸಿದವರ ಪಟ್ಟಿ

2021ರ ಐಪಿಎಲ್‌ನಲ್ಲಿ ವೀಕ್ಷಿಸಲೇಬೇಕಾದ ಆಟಗಾರರು (ರಿಕಿ ಪಾಂಟಿಂಗ್ ಆಯ್ಕೆ)
* ಹಾರ್ದಿಕ್ ಪಾಂಡ್ಯ, ಆಲ್ ರೌಂಡರ್, ಮುಂಬೈ ಇಂಡಿಯನ್ಸ್
* ಟಿ ನಟರಾಜನ್, ಬೌಲರ್, ಸನ್ ರೈಸರ್ಸ್ ಹೈದರಾಬಾದ್
* ರಾಹುಲ್ ತೆವಾಟಿಯಾ, ಆಲ್ ರೌಂಡರ್, ರಾಜಸ್ಥಾನ್ ರಾಯಲ್ಸ್
* ನಿಕೋಲಸ್ ಪೂರನ್, ಬ್ಯಾಟ್ಸ್‌ಮನ್‌, ಪಂಜಾಬ್ ಕಿಂಗ್ಸ್
* ಸುರೇಶ್ ರೈನಾ, ಆಲ್ ರೌಂಡರ್, ಚೆನ್ನೈ ಸೂಪರ್ ಕಿಂಗ್ಸ್
* ದೇವದತ್ ಪಡಿಕ್ಕಲ್, ಬ್ಯಾಟ್ಸ್‌ಮನ್‌, ರಾಯಲ್ ಚಾಲೆಂಜರ್ಸ್ ಬೆಂಗಳೂರು
* ವರುಣ್ ಚಕ್ರವರ್ತಿ, ಬೌಲರ್, ಕೋಲ್ಕತ್ತಾ ನೈಟ್ ರೈಡರ್ಸ್

For Quick Alerts
ALLOW NOTIFICATIONS
For Daily Alerts
Story first published: Friday, April 9, 2021, 16:32 [IST]
Other articles published on Apr 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X