ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ XI ಹೆಸರಿಸಿದ ಶಕೀಬ್: ಗೇಲ್, ಎಬಿಡಿಗೆ ಸ್ಥಾನವಿಲ್ಲ

14ನೇ ಆವೃತ್ತಿಯ ಐಪಿಎಲ್‌ನ ಎರಡನೇ ಚರಣದ ಪಂದ್ಯಗಳ ಆರಂಭಕ್ಕೆ ಈಗ ಕ್ಷಣಗಣನೆ ಆರಂಭವಾಗಿದೆ. ಎಲ್ಲಾ ತಂಡಗಳ ಆಟಗಾರರು ಕೂಡ ಈಗ ದುಬೈ ತಲುಪಿದ್ದು ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ಆಡುವ ಬಳಗವನ್ನು ಹೆಸರಿಸಿದ್ದಾರೆ. ಶಕೀಬ್ ಹೆಸರಿಸಿದ ಈ ತಂಡ ಸಾಕಷ್ಟು ಬಲಿಷ್ಠವಾಗಿದೆ. ಆದರೆ ಟಿ20 ಕ್ರಿಕೆಟ್‌ನ ಶ್ರೇಷ್ಠ ಆಟಗಾರರೆನಿಸಿಕೊಂಡಂತಾ ಕೆಲ ದಿಗ್ಗಜ ಕ್ರಿಕೆಟಿಗರೇ ಈ ತಂಡದಿಂದ ಹೊರಗುಳಿದಿದ್ದಾರೆ.

ಐಪಿಎಲ್ ಹಿನ್ನೆಲೆಯಲ್ಲಿ ಶಕೀಬ್ ಅಲ್ ಹಸನ್ 'ಸ್ಪೋರ್ಟ್ಸ್ ಕೀಡಾ' ಜೊತೆಗೆ ನಡೆಸಿದ ಸಂವಾದದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ತಮ್ಮ ಶ್ರೇಷ್ಠ ತಂಡವನ್ನು ಹೆಸರಿಸಿದ್ದಾರೆ. ಈ ತಂಡದಲ್ಲಿ ಮೂವರು ವಿದೇಶಿ ಆಟಗಾರರಿದ್ದು 8 ಮಂದಿ ಭಾರತೀಯ ಆಟಗಾರರಿರುವುದು ವಿಶೇಷ. ಮಲಿಂಗ ಹೊರರತುಪಡಿಸಿದರೆ ಪ್ರಸಕ್ತ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರುವ ಆಟಗಾರರೇ ಈ ತಂಡದಲ್ಲಿದ್ದಾರೆ.

ನಾವು ಐದನೇ ಟೆಸ್ಟ್‌ಗೆ ಮರು ವೇಳಾಪಟ್ಟಿ ತಯಾರಿಸಲಿದ್ದೇವೆ: ಗಂಗೂಲಿನಾವು ಐದನೇ ಟೆಸ್ಟ್‌ಗೆ ಮರು ವೇಳಾಪಟ್ಟಿ ತಯಾರಿಸಲಿದ್ದೇವೆ: ಗಂಗೂಲಿ

ಮುಂಬೈ ಇಂಡಿಯನ್ಸ್‌ನ ರೋಹಿತ್ ಶರ್ಮಾ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ಡೇವಿಡ್ ವಾರ್ನರ್‌ರನ್ನು ಆರಂಭಿಕರಾಗಿ ಶಕೀಬ್ ಆರಿಸಿದ್ದು. ವಿರಾಟ್ ಕೊಹ್ಲಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು), ಸುರೇಶ್ ರೈನಾ (ಚೆನ್ನೈ ಸೂಪರ್ ಕಿಂಗ್ಸ್), ಎಂಎಸ್ ಧೋನಿ (ಚೆನ್ನೈ ಸೂಪರ್ ಕಿಂಗ್ಸ್) ಮತ್ತು ಕೆಎಲ್ ರಾಹುಲ್ (ಪಂಜಾಬ್ ಕಿಂಗ್ಸ್) ಅವರನ್ನು ಈ ತಂಡದ ಮಧ್ಯಮ ಕ್ರಮಾಂಕದ ಆಟಗಾರರನ್ನಾಗಿ ಆಯ್ಕೆ ಮಾಡಿದ್ದಾರೆ ಶಕೀಬ್ ಅಲ್ ಹಸನ್. ಸಿಎಸ್‌ಕೆ ನಾಯಕ ಎಂಎಸ್ ಧೋನಿ ತಂಡದ ನಾಯಕ ಮತ್ತು ವಿಕೆಟ್ ಕೀಪರ್ ಎಂದು ಹೆಸರಿಸಿದ್ದಾರೆ ಶಕೀಬ್ ಅಲ್ ಹಸನ್.

ರಾಜಸ್ಥಾನ್ ರಾಯಲ್ಸ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ರವೀಂದ್ರ ಜಡೇಜಾ ಅವರನ್ನು ತಂಡದ ಆಲ್‌ರೌಂಡರ್‌ಗಳಾಗಿ ಹೆಸರಿಸಲಾಗಿದೆ. ಇನ್ನು ಸ್ಪೆಶಲಿಸ್ಟ್ ಸ್ಪಿನ್ನರ್‌ನನ್ನು ಶಕೀಬ್ ಈ ತಂಡಕ್ಕೆ ಸೇರಿಸಿಲ್ಲ. ಬದಲಿಗೆ ಮೂವರು ಪ್ರಮುಖ ವೇಗಿಗಳನ್ನು ಹೆಸರಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಲಸಿತ್ ಮಲಿಂಗಾ ಮತ್ತೋರ್ವ ವೇಗಿ ಜಸ್ಪ್ರೀತ್ ಬೂಮ್ರಾ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡದ ಭುವನೇಶ್ವರ್ ಕುಮಾರ್ ಈ ತಂಡದ ಮೂವರು ವೇಗಿಗಳಾಗಿದ್ದಾರೆ.

ಶಕೀಬ್ ಅಲ್ ಹಸನ್ ಹೆಸರಿಸಿರುವ ಈ ತಂಡದಲ್ಲಿ ಐದು ಟ್ರೋಫಿಗಳನ್ನು ಗೆಲ್ಲಿಸಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ವಿದೇಶಿ ಆಟಗಾರರ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿರುವ ಡೇವಿಡ್ ವಾರ್ನರ್ ಇದ್ದಾರೆ. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ 6000ಕ್ಕೂ ಅಧಿಕ ರನ್‌ಗಳಿಸಿರುವ ಏಕೈಕ ಆಟಗಾರ ಎನಿಸಿರುವ ವಿರಾಟ್ ಕೊಹ್ಲಿ, ಮೂರು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕ ಎಂಎಸ್ ಧೋನಿ ಪ್ರಮುಖ ಆಟಗಾರರಾಗಿದ್ದಾರೆ. ಇನ್ನು 14 ಎಸೆತಗಳಲ್ಲಿ ಅರ್ಧ ಶತದ ಗಳಿಸಿದ ದಾಖಲೆ ಹೊಂದಿರುವ ಕೆಎಲ್ ರಾಹುಲ್ ಹಾಗೂ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಲಸಿತ್ ಮಲಿಂಗಾ ಕೂಡ ಈ ತಂಡದಲ್ಲಿದ್ದಾರೆ.

RCB blue jersey: ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ನೀಲಿ ಜೆರ್ಸಿ ಧರಿಸಲಿದೆ ಆರ್‌ಸಿಬಿRCB blue jersey: ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ನೀಲಿ ಜೆರ್ಸಿ ಧರಿಸಲಿದೆ ಆರ್‌ಸಿಬಿ

ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್‌ಗೆ ಸ್ಥಾನವಿಲ್ಲ: ಇನ್ನು ಶಕೀಬ್ ಅಲ್ ಹಸನ್ ಹೆಸರಿಸಿದ ಈ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ಟಿ20 ಕ್ರಿಕೆಟ್‌ನ ಇಬ್ಬರು ದಿಗ್ಗಜ ಆಟಗಾರಿಗೆ ಸ್ಥಾನವನ್ನು ನೀಡಿಲ್ಲ. ವಿಶ್ವಾದ್ಯಂತ ಟಿ20 ಕ್ರಿಕೆಟ್‌ನಲ್ಲಿ ಸಾಕಷ್ಟು ದಾಖಲೆಗಳನ್ನು ಬರೆದು ಮಿಂಚಿರುವ ಕ್ರಿಸ್ ಗೇಲ್ ಹಾಗೂ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಶಕೀಬ್ ಅಲ್ ಹಸನ್ ಹೆಸರಿಸಿದ ಈ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿಲ್ಲ.

ಅಮೆರಿಕ ಧ್ವಜ ಬಳಸಿ ಬೀಳುತ್ತಿದ್ದ ಬೆಕ್ಕನ್ನ ರಕ್ಷಿಸಿದ ಫುಟ್ಬಾಲ್ ವೀಕ್ಷಕರು ! | Oneindia Kannada

ಶಕೀಬ್ ಅಲ್ ಹಸನ್ ಹೆಸರಿಸಿದ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ XI: ರೋಹಿತ್ ಶರ್ಮಾ, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್ ಕೀಪರ್), ಕೆಎಲ್ ರಾಹುಲ್, ಬೆನ್ ಸ್ಟೋಕ್ಸ್, ರವೀಂದ್ರ ಜಡೇಜಾ, ಲಸಿತ್ ಮಾಲಿಂಗ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, September 14, 2021, 13:36 [IST]
Other articles published on Sep 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X