ಮಿಂಚಿನ ವೇಗದ ಥ್ರೋ ಮೂಲಕ ವಿಲಿಯಮ್ಸನ್ ಔಟ್ ಮಾಡಿದ ಹಸನ್: ವಿಡಿಯೋ

ದುಬೈ: ಕೋಲ್ಕತ್ತಾ ನೈಟ್ ರೈಡರ್ಸ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಮಿಂಚಿನ ವೇಗದ ಥ್ರೋ ಮೂಲಕ ಸನ್ ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ರನ್‌ ಔಟ್ ಮಾಡಿದ್ದಾರೆ. ಭಾನುವಾರದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಪಂದ್ಯದಲ್ಲಿ ಈ ದೃಶ್ಯ ಕಾಣ ಸಿಕ್ಕಿದೆ.

ಐಪಿಎಲ್ 2021: ನಾಯಕನನ್ನು ಬದಲಾಯಿಸಿ; ಕೆಕೆಆರ್ ತಂಡದಲ್ಲಿ ಮೇಜರ್ ಸರ್ಜರಿಗೆ ಚೋಪ್ರ ಸಲಹೆಐಪಿಎಲ್ 2021: ನಾಯಕನನ್ನು ಬದಲಾಯಿಸಿ; ಕೆಕೆಆರ್ ತಂಡದಲ್ಲಿ ಮೇಜರ್ ಸರ್ಜರಿಗೆ ಚೋಪ್ರ ಸಲಹೆ

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 49ನೇ ಪಂದ್ಯದಲ್ಲಿ 6.5ನೇ ಓವರ್‌ನಲ್ಲಿ ಕೇನ್ ವಿಲಿಯಮ್ಸನ್ ಔಟ್ ಆಗಿದ್ದಾರೆ. ಆಗ ವಿಲಿಯಮ್ಸನ್ 26 ರನ್ ಗಳಿಸಿದ್ದರು. ಬಾಂಗ್ಲಾದೇಶ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರ ಅದ್ಭುತ ಫೀಲ್ಡಿಂಗ್‌ ಕೌಶಲದಿಂದ ವಿಲಿಯಮ್ಸನ್ ನಿರಾಸೆ ಅನುಭವಿಸುವಂತಾಗಿದೆ.

ಘಟನೆ ನಡೆದಿದ್ದು ಪಂದ್ಯದ ಏಳನೇ ಓವರ್‌ನಲ್ಲಿ. ಕೇನ್ ವಿಲಿಯಮ್ಸನ್ ಅವರು ಲೆಗ್ ಸೈಡ್ ಕಡೆಗೆ ಚೆಂಡು ಕಳುಹಿಸಿದರು. ಬಳಿಕ ಸಿಂಗಲ್‌ ರನ್‌ಗಾಗಿ ಓಡಿದರು. ಆ ವೇಳೆ ಚೆಂಡು ಪಡೆದುಕೊಂಡ ಶಕೀಬ್ ಅಲ್ ಹಸನ್ ಬೌಲರ್ಸ್ ಎಂಡ್ ಕಡೆಗೆ ಮಿಂಚಿನ ವೇಗದಲ್ಲಿ ಚೆಂಡು ಎಸೆದರು. ಕೇನ್ ಗೆರೆ ದಾಟುವಷ್ಟರಲ್ಲಿ ಚೆಂಡು ಬೇಲ್ಸ್ ಉರುಳಿಸಿತ್ತು. ಶಕೀಬ್ ಅದ್ಭುತ ಫೀಲ್ಡಿಂಗ್‌ನಿಂದಾಗಿ ವಿಲಿಯಮ್ಸನ್ 26 ರನ್‌ಗೆ ನಿರ್ಮಿಸುವಂತಾಯ್ತು.

ಐಪಿಎಲ್ 2021: ಯುಜುವೇಂದ್ರ ಚಾಹಲ್ ಹೆಸರಿಗೆ ವಿಶೇಷ ದಾಖಲೆಐಪಿಎಲ್ 2021: ಯುಜುವೇಂದ್ರ ಚಾಹಲ್ ಹೆಸರಿಗೆ ವಿಶೇಷ ದಾಖಲೆ

ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಸನ್ ರೈಸರ್ಸ್ ಹೈದರಾಬಾದ್, ಜೇಸನ್ ರಾಯ್ 10, ವೃದ್ಧಿಮಾನ್ ಸಹಾ 0, ಕೇನ್ ವಿಲಿಯಮ್ಸನ್ 26, ಪ್ರಿಯಂ ಗರ್ಗ್ 21, ಅಭಿಷೇಕ್ ಶರ್ಮಾ 6, ಅಬ್ದುಲ್ ಸಮದ್ 25, ಜೇಸನ್ ಹೋಲ್ಡರ್ 2, ರಶೀದ್ ಖಾನ್ 8, ಭುವನೇಶ್ವರ್ ಕುಮಾರ್ 7, ಸಿದ್ದಾರ್ಥ್ ಕೌಲ್ 7 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 115 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ವೆಂಕಟೇಶ್ ಐಯ್ಯರ್ 8, ರಾಹುಲ್ ತ್ರಿಪಾಠಿ 7, ಶುಬ್ಮನ್ ಗಿಲ್ 57, ನಿತೀಶ್ ರಾಣಾ 25, ದಿನೇಶ್ ಕಾರ್ತಿಕ್ ಅಜೇಯ 18, ನಾಯಕ ಇಯಾನ್ ಮಾರ್ಗನ್ ಅಜೇಯ 2 ರನ್‌ನೊಂದಿಗೆ 19.4ನೇ ಓವರ್‌ಗೆ 4 ವಿಕೆಟ್ ಕಳೆದು 119 ರನ್ ಗಳಿಸಿತು.

ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಟಿಮ್ ಸೌಥೀ 2, ಶಿವಂ ಮಾವಿ 2, ವರುಣ್ ಚಕ್ರವರ್ತಿ 2 ಮತ್ತು ಶಕೀಬ್ ಅಲ್ ಹಸನ್ 1 ವಿಕೆಟ್‌ ಪಡೆದರೆ, ಕೋಲ್ಕತ್ತಾ ಇನ್ನಿಂಗ್ಸ್‌ನಲ್ಲಿ ಎಸ್‌ಆರ್‌ಎಚ್‌ನ ಜೇಸನ್ ಹೋಲ್ಡರ್ 2, ರಶೀದ್ ಖಾನ್ 1, ಸಿದ್ಧಾರ್ಥ್ ಕೌಲ್ 1 ವಿಕೆಟ್‌ನಿಂದ ಗಮನ ಸೆಳೆದರು.

ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI
ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮಾರ್ಗನ್ (ಸಿ), ಶಕೀಬ್ ಅಲ್ ಹಸನ್, ದಿನೇಶ್ ಕಾರ್ತಿಕ್ (ವಿಕೆ), ಸುನಿಲ್ ನರೈನ್, ಶಿವಂ ಮಾವಿ, ಟಿಮ್ ಸೌಥಿ, ವರುಣ್ ಚಕ್ರವರ್ತಿ.
ಬೆಂಚ್: ಟಿಮ್ ಸೀಫರ್ಟ್, ವೈಭವ್ ಅರೋರಾ, ಕಮಲೇಶ್ ನಗರ್ಕೋಟಿ, ರಿಂಕು ಸಿಂಗ್, ಲಾಕಿ ಫರ್ಗುಸನ್, ಪ್ರಸಿದ್ಧ್ ಕೃಷ್ಣ, ಆಂಡ್ರೆ ರಸೆಲ್, ಸಂದೀಪ್ ವಾರಿಯರ್, ಶೆಲ್ಡನ್ ಜಾಕ್ಸನ್, ಗುರ್ಕೀರತ್ ಸಿಂಗ್ ಮನ್, ಪವನ್ ನೇಗಿ, ಕರುಣ್ ನಾಯರ್, ಬೆನ್ ಕಟಿಂಗ್, ಹರ್ಭಜನ್ ಸಿಂಗ್.

David Warner ಸಾಧಾರಣ ಪ್ರೇಕ್ಷಕನಂತೆ ಪಂದ್ಯ ವೀಕ್ಷಿಸಿದರು | Oneindia Kannada

ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI
ಜೇಸನ್ ರಾಯ್, ವೃದ್ಧಿಮಾನ್ ಸಹಾ (w), ಕೇನ್ ವಿಲಿಯಮ್ಸನ್ (c), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಸಿದ್ದಾರ್ಥ್ ಕೌಲ್.
ಬೆಂಚ್: ಸಂದೀಪ್ ಶರ್ಮಾ, ಶ್ರೀವತ್ ಗೋಸ್ವಾಮಿ, ಮನೀಶ್ ಪಾಂಡೆ, ಕೇದಾರ್ ಜಾಧವ್, ಮೊಹಮ್ಮದ್ ನಬಿ, ಶಹಬಾಜ್ ನದೀಮ್, ವಿರಾಟ್ ಸಿಂಗ್, ತುಳಸಿ ಥಂಪಿ, ಜಗದೀಶ ಸುಚಿತ್, ಖಲೀಲ್ ಅಹಮದ್, ಡೇವಿಡ್ ವಾರ್ನರ್, ಮುಜೀಬ್ ಉರ್ ರೆಹಮಾನ್.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, October 3, 2021, 23:55 [IST]
Other articles published on Oct 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X