ಐಪಿಎಲ್‌ನಲ್ಲಿ ಕ್ರಿಸ್ ಶ್ರೀಕಾಂತ್‌ಗೆ ಪಾಕ್ ಮಾಜಿ ವೇಗಿ ವಾಕರ್ ಯೂನಿಸ್ ನೆನಪಾಗಲು ಕಾರಣ ಈ ಯುವ ವೇಗಿ!

ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಯುವ ವೇಗಿ ಪ್ರೇಕ್ಷಕರ ಗಮನ ಸೆಳೆದರು. ತನ್ನ ಬೌಲಿಂಗ್‌ನ ವೇಗದಿಂದ ಹೊಸ ಭರವಸೆಯನ್ನು ಮೂಡಿಸಿ ಮೊದಲ ದಿನವೇ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದರು. ಆ ಯುವ ಆಟಗಾರ ಬೇರೆ ಯಾರೂ ಅಲ್ಲ ಸನ್‌ರೈಸರ್ಸ್ ಹೈದರಾಬಾದ್ ತಂಡದ 21೦ರ ಹರೆಯದ ವೇಗದ ಬೌಲರ್ ಉಮ್ರಾನ್ ಮಲಿಕ್. 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯವನ್ನು ಉಮ್ರಾನ್ ಮೊದಲ ಪಂದ್ಯದಲ್ಲಿಯೇ ಪ್ರದರ್ಶಿಸಿ ಎಲ್ಲರ ಚಿತ್ತ ನೆಡುವಂತೆ ಮಾಡಿದ್ದಾರೆ.

ಕೆಕೆಆರ್ ವಿರುದ್ಧ ಉಮ್ರಾನ್ ಮಲಿಕ್ ಬೌಲಿಂಗ್ ಪ್ರದರ್ಶನ ನೋಡಿದ ನಂತರ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ತನಗೆ ಪಾಕಿಸ್ತಾನದ ಶ್ರೇಷ್ಠ ಮಾಜಿ ವೇಗದ ಬೌಲರ್ ವಾಕರ್ ಯೂನಿಸ್ ನೆನಪಿಗೆ ಬಂದರು ಎಂದಿದ್ದಾರೆ. ಈ ಮೂಲಕ ಯುವ ವೇಗಿಯ ಬೌಲಿಂಗ್‌ನ ಬಗ್ಗೆ ನಿರೀಕ್ಷೆ ಹಾಗೂ ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ.

ಐಪಿಎಲ್: ಆಡಿದ ಮೊದಲ ಪಂದ್ಯದಲ್ಲಿಯೇ ದಾಖಲೆ ಬರೆದ ಸನ್ ರೈಸರ್ಸ್ ಹೈದರಾಬಾದ್‌ನ ಉಮ್ರಾನ್ ಮಲಿಕ್ಐಪಿಎಲ್: ಆಡಿದ ಮೊದಲ ಪಂದ್ಯದಲ್ಲಿಯೇ ದಾಖಲೆ ಬರೆದ ಸನ್ ರೈಸರ್ಸ್ ಹೈದರಾಬಾದ್‌ನ ಉಮ್ರಾನ್ ಮಲಿಕ್

ಸನ್‌ರೈಸರ್ಸ್ ಹೈದರಾಬಾದ್ ಉಮ್ರಾನ್ ಮಲಿಕ್ ಅವರನ್ನು ತಂಡಕ್ಕೆ ಸೇರ್ಪಡೆಗೊಳೀಸುವ ಮೂಲಕ ಅದ್ಭುತವಾದ ಆಯ್ಕೆಯನ್ನು ಮಾಡಿದೆ. ಆತನೋರ್ವ ಉತ್ತಮ ಆಟಗಾರ, ಆತನನ್ನು ಅದ್ಭುತ ವೇಹಿಯನ್ನಾಗಿ ರೂಪಿಸಲು ಸಾಧ್ಯವಿದೆ. ಈತನ ಬೌಲಿಂಗ್‌ಗೆ ನಿತೀಶ್ ರಾಣಾ ಪರದಾಡಿದರು. ಕೆಕೆಆರ್ ಬ್ಯಾಟಿಂಗ್‌ನ ಕೆಲ ಹುಳುಕುಗಳು ಈವೇಳೆ ಬಹಿರಂಗವಾಗಿದೆ" ಎಂದು ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅವರಿಬ್ಬರು ಪಂದ್ಯವನ್ನು ಪವರ್‌ಪ್ಲೇನಲ್ಲಿಯೇ ಮುಗಿಸಿದ್ದರು: ಸಂಜು ಸ್ಯಾಮ್ಸನ್ ಪ್ರತಿಕ್ರಿಯೆಅವರಿಬ್ಬರು ಪಂದ್ಯವನ್ನು ಪವರ್‌ಪ್ಲೇನಲ್ಲಿಯೇ ಮುಗಿಸಿದ್ದರು: ಸಂಜು ಸ್ಯಾಮ್ಸನ್ ಪ್ರತಿಕ್ರಿಯೆ

"ಆತ ಈಗ ಕೇವಲ ಒಂದು ಟಿ20 ಪಂದ್ಯವನ್ನು ಮಾತ್ರವೇ ಆಡಿದ ಅನುಭವ ಹೊಂದಿದ್ದಾರೆ. ಕ್ರಿಕೆಟ್ ಕಾಮೆಂಟರಿ ವೇಳೆ ಯಾರೋ ಅದ್ಭುತವಾದ ಅಂಶವನ್ನು ಪ್ರಸ್ತಾಪಿಸಿದರು. ವೇಗಿ ಜಸ್ಪ್ರೀತ್ ಬೂಮ್ರಾ ಕೂಡ ಇದೇ ರೀತಿ ಆಯ್ಕೆಯಾಗಿದ್ದರು ಎಂದು. ಈಗ ಅವರು ಎಲ್ಲಿದ್ದಾರೆ ಎಂಬುದನ್ನು ನೋಡಿ. ಏನನ್ನೂ ಹೇಳಲು ಸಾಧ್ಯವಿಲ್ಲ. ಈ ಯುವ ವೇಗಿಯ ಓಟ, ಶೈಲಿ ಎಲ್ಲವೂ ವಾಕರ್ ಯೂನಿಸ್ ಅವರ ಬೌಲಿಂಗ್ ಶೈಲಿಗೆ ಸ್ವಲ್ಪ ಹೋಲಿಕೆಯಾಗುತ್ತಿದೆ. ಆತನಲ್ಲಿ ಅದ್ಭುತವಾದ ಲಯದ ರನ್‌ಅಪ್ ಇದೆ. ಆತ ಅದ್ಭುತವಾದ ವೇಗದೊಂದಿಗೆ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ನಿತೀಶ್ ರಾಣ ಕ್ರೀಸ್‌ನಲ್ಲಿ ನೃತ್ಯ ಮಾಡುವಂತೆ ಮಾಡಿದ ರೀತಿ ಅದ್ಭುತವಾಗಿದೆ" ಎಂದಿದ್ದಾರೆ ಕ್ರಿಸ್ ಶ್ರೀಕಾಂತ್.

ಫ್ಲಾಪ್ ಆಗಿರುವ ರೈನಾ ಬದಲು ರಾಬಿನ್ ಉತ್ತಪ್ಪಗೆ ಯಾಕೆ ಅವಕಾಶ ನೀಡುತ್ತಿಲ್ಲ?; ಮಾಜಿ ಕ್ರಿಕೆಟಿಗನ ಪ್ರಶ್ನೆಫ್ಲಾಪ್ ಆಗಿರುವ ರೈನಾ ಬದಲು ರಾಬಿನ್ ಉತ್ತಪ್ಪಗೆ ಯಾಕೆ ಅವಕಾಶ ನೀಡುತ್ತಿಲ್ಲ?; ಮಾಜಿ ಕ್ರಿಕೆಟಿಗನ ಪ್ರಶ್ನೆ

ಉಮ್ರಾನ್ ಮಲಿಕ್ ಇಲ್ಲಿಯವರೆಗೆ ಕೇವಲ ಎರಡು ಟಿ20 ಪಂದ್ಯಗಳನ್ನು ಮಾತ್ರವೇ ಆಡಿದ್ದಾರೆ ಮತ್ತು ಒಂದು ಲಿಸ್ಟ್ ಎ ಪಂದ್ಯವನ್ನು ಆಡಿದ ಅನುಭವ ಹೊಂದಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಸಯ್ಯದ್ ಮುಶ್ತಾಕ್ ಅಲಿ ಟೂರ್ನಿಯಲ್ಲಿ ಜಮ್ಮು ಕಾಶ್ಮೀರ ತಂಡದ ಪರವಾಗಿ ಆಡಿದ್ದರು ಉಮ್ರಾನ್. ಆಲೂರ್‌ನಲ್ಲಿ ನಡೆದ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಮೂರು ವಿಕೆಟ್ ಕೀಳುವ ಮೂಲಕ ಮಿಂಚಿದ್ದರು.

'ಧೋನಿ ಸಿಎಸ್‌ಕೆ ಪರ ಏನೂ ಮಾಡಿಲ್ಲ, ಆದರೂ ತಂಡ ಪ್ಲೇಆಫ್ ತಲುಪಿದೆ' ಎಂದ ಮಾಜಿ ಕ್ರಿಕೆಟಿಗ'ಧೋನಿ ಸಿಎಸ್‌ಕೆ ಪರ ಏನೂ ಮಾಡಿಲ್ಲ, ಆದರೂ ತಂಡ ಪ್ಲೇಆಫ್ ತಲುಪಿದೆ' ಎಂದ ಮಾಜಿ ಕ್ರಿಕೆಟಿಗ

ಪಂಜಾಬ್ ಗೆ ಟಾಂಗ್ ಕೊಟ್ಟ RCB ಪಡೆ | Oneindia Kannada

ಈ ಬಾರಿಯ ಐಪಿಎಲ್‌ನ ಎರಡನೇ ಚರಣದ ಆರಂಭದಲ್ಲಿಯೇ ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗಿ ಟಿ ನಟರಾಜನ್‌ಗೆ ಕೊರೊನಾವೈರಸ್ ತಗುಲಿದ ಕಾರಣ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಉಮ್ರಾನ್ ಮಲಿಕ್ ಅವರನ್ನು ತಾತ್ಕಾಲಿಕ ಬದಲಿ ಆಟಗಾರನನ್ನಾಗಿ ಸೇರ್ಪಡೆಗೊಳಿಸಿತ್ತು. ಆದರೆ ಸನ್ ರೈಸರ್ಸ್ ಹೈದರಾಬಾದ್ ತಂಡ ಭಾನುವಾರ ( ಅಕ್ಟೋಬರ್ 3 ) ದುಬೈ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಉಮ್ರಾನ್ ಮಲಿಕ್‌ಗೆ ಅವಕಾಶ ನಿಡುವ ಮೂಲಕ ಅಚ್ಚರಿ ಮೂಡಿಸಿತ್ತು. ಹೀಗೆ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಕಣಕ್ಕಿಳಿದ ಯುವ ವೇಗಿ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಗೆ ಪದಾರ್ಪಣೆ ಮಾಡಿದರು. ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡ ಉಮ್ರಾನ್ ಮಲಿಕ್ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿವೇಗದ ಎಸೆತವನ್ನು ಎಸೆದ ಭಾರತೀಯ ಬೌಲರ್ ಎಂಬ ಸಾಧನೆಯನ್ನು ಮಾಡಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 19 - October 26 2021, 07:30 PM
ಪಾಕಿಸ್ತಾನ
ನ್ಯೂಜಿಲೆಂಡ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, October 4, 2021, 20:11 [IST]
Other articles published on Oct 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X