ಮುಂದುವರಿಯಲಿರುವ ಐಪಿಎಲ್‌ನ ಈ ನಿಯಮದಲ್ಲಿ ಭಾರಿ ಬದಲಾವಣೆ ಮಾಡಿದ ಬಿಸಿಸಿಐ

ಕಳೆದ ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಭಾರತದಲ್ಲಿ ಆರಂಭವಾಗಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ 29 ಪಂದ್ಯಗಳು ಯಾವುದೇ ಅಡಚಣೆಗಳಿಲ್ಲದೆ ಸರಾಗವಾಗಿ ನಡೆದಿದ್ದವು. ಆದರೆ ನಂತರದ ದಿನಗಳಲ್ಲಿ ವಿವಿಧ ತಂಡಗಳ ಕೆಲ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಟೋಕಿಯೋ ಒಲಿಂಪಿಕ್ಸ್‌: ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಸಿಕ್ಕ ಹಣ ಮತ್ತು ಬಹುಮಾನಗಳೆಷ್ಟು ಗೊತ್ತಾ?ಟೋಕಿಯೋ ಒಲಿಂಪಿಕ್ಸ್‌: ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಸಿಕ್ಕ ಹಣ ಮತ್ತು ಬಹುಮಾನಗಳೆಷ್ಟು ಗೊತ್ತಾ?

ಹೀಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉಳಿದ 31 ಪಂದ್ಯಗಳನ್ನು ಯುಎಇನಲ್ಲಿ ನಡೆಸಲು ಯೋಜನೆಯನ್ನು ಹಾಕಿದ್ದ ಬಿಸಿಸಿಐ ಅದನ್ನು ಸೆಪ್ಟೆಂಬರ್ 19ರಿಂದ ಜಾರಿಗೆ ತರುತ್ತಿದೆ. ಹೌದು ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಉಳಿದ 31 ಪಂದ್ಯಗಳು ಯುಎಇಯಲ್ಲಿ ಸೆಪ್ಟೆಂಬರ್ 19ರಂದು ಆರಂಭವಾಗಲಿದ್ದು ಅಕ್ಟೋಬರ್ 15ಕ್ಕೆ ತೆರೆಬೀಳಲಿದೆ.

'ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ ಅಲ್ಲ!'; ಕೇಂದ್ರ ಸರ್ಕಾರಕ್ಕೆ ಹೆಚ್ಚಾಯ್ತು ಒತ್ತಡ!'ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ ಅಲ್ಲ!'; ಕೇಂದ್ರ ಸರ್ಕಾರಕ್ಕೆ ಹೆಚ್ಚಾಯ್ತು ಒತ್ತಡ!

ಹೀಗೆ ಪ್ರಸಕ್ತ ಸಾಲಿನ ಐಪಿಎಲ್ ಎರಡನೇ ಭಾಗದ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು ಈ ಕುರಿತಾಗಿ ಇದೀಗ ಬಿಸಿಸಿಐ ಕೆಲ ನಿಯಮಗಳಲ್ಲಿ ಭಾರೀ ಬದಲಾವಣೆಯನ್ನು ಮಾಡಿದೆ. ಹೌದು ಈ ಹಿಂದೆ ನಡೆಯುತ್ತಿದ್ದ ಪಂದ್ಯಗಳಲ್ಲಿ ಸ್ಟೇಡಿಯಂನಿಂದ ಹೊರಗಡೆ ಹೋಗುವ ಮತ್ತು ಪ್ರೇಕ್ಷಕರು ಕುಳಿತುಕೊಳ್ಳುತ್ತಿದ್ದ ಸ್ಥಳಕ್ಕೆ ಹೋಗಿ ಬೀಳುವ ಚೆಂಡನ್ನು ಸ್ವಚ್ಚಗೊಳಿಸಿ ಪುನಃ ಪಂದ್ಯಕ್ಕೆ ಅದೇ ಚೆಂಡನ್ನು ಬಳಸಲಾಗುತ್ತಿತ್ತು. ಆದರೆ ಈ ಕುರಿತಾಗಿ ಇದೀಗ ಬಿಸಿಸಿಐ ಬದಲಾವಣೆಯನ್ನು ಮಾಡಿದ್ದು ಈ ರೀತಿ ಸ್ಟೇಡಿಯಂನಿಂದ ಹೊರಗಡೆ ಹೋಗಿ ಬೀಳುವ ಮತ್ತು ಪ್ರೇಕ್ಷಕರು ಕುಳಿತುಕೊಳ್ಳುವ ಸ್ಥಳಗಳಿಗೆ ಹೋಗಿ ಬೀಳುವ ಚೆಂಡನ್ನು ಮತ್ತೆ ಪಂದ್ಯಗಳಲ್ಲಿ ಬಳಸುವಂತಿಲ್ಲ ಎಂಬ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಕೊರೊನಾ ತಡೆಯುವ ಮುಂಜಾಗ್ರತಾ ಕ್ರಮವಾಗಿ ಈ ಬದಲಾವಣೆ

ಕೊರೊನಾ ತಡೆಯುವ ಮುಂಜಾಗ್ರತಾ ಕ್ರಮವಾಗಿ ಈ ಬದಲಾವಣೆ

ಸ್ಟೇಡಿಯಂನಿಂದ ಹೊರಗಡೆ ಹೋಗಿ ಬೀಳುವ ಚೆಂಡನ್ನು ಮತ್ತೆ ತಂದು ಅದಕ್ಕೆ ಸ್ಯಾನಿಟೈಸರ್ ಹಾಕಿ ಸ್ವಚ್ಛಗೊಳಿಸಿದ ನಂತರ ಪುನಃ ಪಂದ್ಯಗಳಲ್ಲಿ ಬಳಸಲಾಗುತ್ತಿತ್ತು, ಹೀಗೆ ಮಾಡುವುದರಿಂದ ಕೊರೊನಾ ಸೋಂಕು ಹರಡುವ ಭಯ ಕೂಡ ಇತ್ತು. ಚೆಂಡು ಸ್ಟೇಡಿಯಂನಿಂದ ಹೊರಹೋಗಿ ಬಿದ್ದಾಗ ಹೊರಗಿನವರು ಯಾರಾದರೂ ಚೆಂಡನ್ನು ಮುಟ್ಟಿರುವ ಸಾಧ್ಯತೆಗಳಿತ್ತು, ಹೀಗೆ ಚೆಂಡನ್ನು ಮುಟ್ಟಿದವರಲ್ಲಿ ಕೊರೊನಾ ಸೋಂಕು ಇತ್ತಾ ಅಥವಾ ಇಲ್ಲವಾ ಎಂಬ ಗೊಂದಲದಲ್ಲಿಯೇ ಚೆಂಡನ್ನು ಸ್ವಚ್ಚಗೊಳಿಸಿ ಪುನಃ ಬಳಸಲಾಗುತ್ತಿತ್ತು. ಹೀಗಾಗಿ ಈ ಬಾರಿ ಆ ತರಹದ ಗೊಂದಲಗಳ ಜೊತೆ ಪಂದ್ಯ ನಡೆಸುವುದು ಬೇಡ ಮತ್ತು ಕೊರೊನಾ ತಡೆಯುವ ಮುಂಜಾಗ್ರತಾ ಕ್ರಮದಿಂದ ಬಿಸಿಸಿಐ ಸ್ಟೇಡಿಯಂನಿಂದ ಹೊರಹೋದ ಚೆಂಡನ್ನು ಬಳಸುವ ಬದಲು ಹೊಸ ಚೆಂಡನ್ನು ಬಳಸುವ ನಿಯಮವನ್ನು ಜಾರಿಗೆ ತಂದಿದೆ.

ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡುವ ಸಾಧ್ಯತೆ

ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡುವ ಸಾಧ್ಯತೆ

ಈ ಬಾರಿ ದುಬೈನಲ್ಲಿ ಮುಂದುವರಿಯಲಿರುವ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅನುವು ಮಾಡಿಕೊಡುವ ಸಾಧ್ಯತೆಯಿದೆ. ಹೀಗಾಗಿ ಪ್ರೇಕ್ಷಕರು ಮೈದಾನಕ್ಕೆ ಬಂದಾಗ ಅವರ ಬಳಿ ಬಂದು ಬೀಳುವ ಚೆಂಡುಗಳನ್ನು ಮುಟ್ಟುವುದು ಸಾಮಾನ್ಯವಾಗಿರುತ್ತದೆ. ಹೀಗೆ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದ ಪ್ರೇಕ್ಷಕರಲ್ಲಿ ಸೋಂಕಿತರು ಇರಬಹುದು, ಹೀಗೆ ಸೋಂಕಿತರಿದ್ದರೆ ಅಂಥವರು ಚೆಂಡನ್ನು ಮುಟ್ಟುವ ಸಾಧ್ಯತೆ ಹೆಚ್ಚು. ಈ ಕಾರಣದಿಂದ ಪ್ರೇಕ್ಷಕರ ಬಳಿ ಹೋಗಿ ಬೀಳುವ ಚೆಂಡನ್ನು ಸಹ ಮತ್ತೆ ಪಂದ್ಯಕ್ಕೆ ಬಳಸಬಾರದು ಎಂಬ ಬದಲಾವಣೆಯನ್ನು ಬಿಸಿಸಿಐ ಘೋಷಿಸಿದೆ.

ಚೆಂಡಿಗೆ ಎಂಜಲು ಸವರುವ ಹಾಗಿಲ್ಲ

ಚೆಂಡಿಗೆ ಎಂಜಲು ಸವರುವ ಹಾಗಿಲ್ಲ

ಇನ್ನು ಈ ಹಿಂದಿನ ಆವೃತ್ತಿಯಲ್ಲಿ ಇದ್ದ ಚೆಂಡಿಗೆ ಎಂಜಲು ಸವರುವ ಹಾಗಿಲ್ಲ ಎಂಬ ನಿಯಮ ಈ ಆವೃತ್ತಿಯಲ್ಲಿಯೂ ಮುಂದುವರಿಯಲಿದೆ. ಚೆಂಡು ಹೊಳೆಯಲಿ ಎಂಬ ಕಾರಣಕ್ಕೆ ಆಟಗಾರರು ಚೆಂಡಿಗೆ ಎಂಜಲು ಸವರುತ್ತಾರೆ. ಆದರೆ ಈ ಬಾರಿ ಕೂಡ ಆಟಗಾರರು ಚೆಂಡಿಗೆ ಎಂಜಲನ್ನು ಸವರುವಂತಿಲ್ಲ ಎಂದು ಬಿಸಿಸಿಐ ಹೇಳಿದೆ, ಒಂದುವೇಳೆ ಯಾರಾದರೂ ಚೆಂಡಿಗೆ ಎಂಜಲನ್ನು ಸವರಿದರೆ ಆ ಆಟಗಾರನ ತಂಡಕ್ಕೆ 5 ರನ್‌ಗಳ ಪೆನಾಲ್ಟಿಯನ್ನು ಹಾಕಲಾಗುವುದು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, August 9, 2021, 19:53 [IST]
Other articles published on Aug 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X