ಐಪಿಎಲ್ 2021: ವಿಶೇಷ ದಾಖಲೆ ಬರೆಯಲು ಕೊಹ್ಲಿಗೆ 66 ರನ್ ಬೇಕು

ಶಾರ್ಜಾ: ಟೀಮ್ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಸನಿಹದಲ್ಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಕಿಂಗ್ಸ್ ಕೊಹ್ಲಿ ಅಪರೂಪದ ದಾಖಲೆ ಬರೆಯುವುದರಲ್ಲಿದ್ದಾರೆ. ಶುಕ್ರವಾರ (ಸೆಪ್ಟೆಂಬರ್ 24) ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ 35ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಈ ದಾಖಲೆ ನಿರ್ಮಿಸಲು ಕೊಹ್ಲಿಗೆ ಅವಕಾಶವಿದೆ.

ಹೈದರಾಬಾದ್ vs ಡೆಲ್ಲಿ ಪಂದ್ಯದ ವೇಳೆಯ ತಮಾಷೆಯ ಮೀಮ್ಸ್ ನೋಡಿ!ಹೈದರಾಬಾದ್ vs ಡೆಲ್ಲಿ ಪಂದ್ಯದ ವೇಳೆಯ ತಮಾಷೆಯ ಮೀಮ್ಸ್ ನೋಡಿ!

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 66 ರನ್ ಬಾರಿಸಿದರೆ ಟಿ20 ಕ್ರಿಕೆಟ್‌ನಲ್ಲಿ 10000 ರನ್ ಪೂರೈಸಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 10000 ರನ್ ಪೂರೈಸಲು 66 ರನ್ ಬೇಕಿದೆ. ಮುಂದಿನ ಒಂದೆರಡು ಪಂದ್ಯಗಳಲ್ಲಿ ಕೊಹ್ಲಿ ಈ ದಾಖಲೆ ಪೂರೈಸುವ ನಿರೀಕ್ಷೆಯಿದೆ.

ಏಕದಿನದಲ್ಲಿ 10000+, ಟೆಸ್ಟ್‌ನಲ್ಲಿ 5000+ ರನ್

ಏಕದಿನದಲ್ಲಿ 10000+, ಟೆಸ್ಟ್‌ನಲ್ಲಿ 5000+ ರನ್

32ರ ಹರೆಯದ ವಿರಾಟ್ ಕೊಹ್ಲಿ ಏಕದಿನ, ಟೆಸ್ಟ್, ಟಿ20ಐ ಮೂರೂ ಮಾದರಿಗಳಲ್ಲಿ ಅದ್ಭುತ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ. ಸಿಎಸ್‌ಕೆ ವಿರುದ್ಧ ಕೊಹ್ಲಿ 66 ರನ್ ಗಳಿಸಿದರೆ, ಟಿ20ಯಲ್ಲಿ 10000 ರನ್ ದಾಖಲೆ ನಿರ್ಮಾಣವಾಗುವುದಷ್ಟೇ ಅಲ್ಲ, ಈ ದಾಖಲೆ ಬರೆದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ. ಕೊಹ್ಲಿ ಟೆಸ್ಟ್ ನಲ್ಲಿ 5000 ರನ್ ಮತ್ತು ಏಕದಿನದಲ್ಲಿ 10000+ ರನ್ ಗಳಿಸಿದ್ದಾರೆ. 96 ಟೆಸ್ಟ್ ಪಂದ್ಯಗಳಲ್ಲಿ 7765 ರನ್, 254 ಏಕದಿನ ಪಂದ್ಯಗಳಲ್ಲಿ 12169 ರನ್, 89 ಟಿ20ಐ ಪಂದ್ಯಗಳಲ್ಲಿ 3159 ರನ್, 200 ಐಪಿಎಲ್ ಪಂದ್ಯಗಳಲ್ಲಿ 6081 ರನ್ ಗಳಿಸಿದ್ದಾರೆ. ಹಿಂದಿನ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೊಹ್ಲಿ 200ನೇ ಐಪಿಎಲ್ ಪಂದ್ಯ ಆಡಿದ್ದರು. ಆದರೆ ಅಂದಿನ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್‌ಗಾಗಿ ಗಮನ ಸೆಳೆದಿರಲಿಲ್ಲ. ಆ ಪಂದ್ಯದಲ್ಲಿ ಆರ್‌ಸಿಬಿ 9 ವಿಕೆಟ್‌ ಸೋಲನುಭವಿಸಿತ್ತು.

ಆರ್‌ಸಿಬಿಗೆ ಕಪ್‌ ಗೆಲ್ಲಲು ಸುವರ್ಣಾವಕಾಶ

ಆರ್‌ಸಿಬಿಗೆ ಕಪ್‌ ಗೆಲ್ಲಲು ಸುವರ್ಣಾವಕಾಶ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್‌ ಗೆಲ್ಲದ ತಂಡಗಳ ಸಾಲಿನಲ್ಲಿದೆ. ಆರ್‌ಸಿಬಿ ಬಿಟ್ಟು ಐಪಿಎಲ್‌ನಲ್ಲಿ ಟ್ರೋಫಿ ಗೆಲ್ಲದ ತಂಡಗಳೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್. ಈ ಬಾರಿ ಆರ್‌ಸಿಬಿಗೆ ಕಪ್‌ ಗೆಲ್ಲಲು ಅವಕಾಶವಿದೆ. ಐಪಿಎಲ್ ಆರಂಭಿಕ ಹಂತದಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಮೂರರೊಳಗೆ ಸ್ಥಾನ ಪಡೆದುಕೊಂಡಿತ್ತು. ಆಡಿರುವ 8 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದು 10 ಪಾಯಿಂಟ್ಸ್ ಕಲೆ ಹಾಕಿರುವ ಬೆಂಗಳೂರು ಈಗಲೂ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್‌ ತಂಡ 8ರಲ್ಲಿ 6 ಪಂದ್ಯಗಳನ್ನು ಗೆದ್ದು ದ್ವಿತೀಯ ಸ್ಥಾನದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ 9ರಲ್ಲಿ 7 ಗೆಲುವುಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನಾಲ್ಕನೇ ಸ್ಥಾನದಲ್ಲಿದೆ.

ಐಪಿಎಲ್‌ ದ್ವಿತೀಯ ಹಂತಕ್ಕೂ ಕೋವಿಡ್ ಭೀತಿ

ಐಪಿಎಲ್‌ ದ್ವಿತೀಯ ಹಂತಕ್ಕೂ ಕೋವಿಡ್ ಭೀತಿ

ಭಾರತದಲ್ಲಿ ಏಪ್ರಿಲ್ 9ರಂದು ಆರಂಭಗೊಂಡಿದ್ದ ಐಪಿಎಲ್ ಕೋವಿಡ್ 19 ಭೀತಿಯಿಂದಾಗಿ ಮೇ 4ರಂದು ನಿಲ್ಲಿಸಲ್ಪಟ್ಟಿತ್ತು. ಹಾಗೆ ನಿಲುಗಡೆಯಾಗಿದ್ದ ಐಪಿಎಲ್ ಸೆಪ್ಟೆಂಬರ್‌ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿದೆ. ಆರಂಭಿಕ ಹಂತದಲ್ಲಿ 29 ಪಂದ್ಯಗಳು ನಡೆದಿತ್ತು. ಇನ್ನುಳಿದ 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ದುಬೈನಲ್ಲಿ ನಡೆಯುತ್ತಿರುವ ಈ ದ್ವಿತೀಯ ಹಂತದ ಟೂರ್ನಿಗೂ ಕೋವಿಡ್ ಭೀತಿ ಎದುರಾಗಿದೆ. ಈಗಾಗಲೇ ಸನ್ ರೈಸರ್ಸ್ ಹೈದರಾಬಾದ್‌ನ ಟಿ ನಟರಾಜನ್‌ಗೆ ಕೋವಿಡ್ ಪಾಸಿಟಿವ್ ಬಂದಿದೆ. ಅವರ ಬದಲಿಗೆ ಎಸ್‌ಆರ್‌ಎಚ್ ಭಾರತದ ಅನ್‌ ಕ್ಯಾಪ್ಡ್ ಉಮ್ರನ್ ಮಲಿಕ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

For Quick Alerts
ALLOW NOTIFICATIONS
For Daily Alerts
Story first published: Friday, September 24, 2021, 18:19 [IST]
Other articles published on Sep 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X