ಆರ್‌ಸಿಬಿಯ ಈ ಸ್ಟಾರ್ ಬ್ಯಾಟ್ಸ್‌ಮನ್‌ಗೆ ಕೃನಾಲ್ ಪಾಂಡ್ಯ ಎದುರಿಸುವ ಧೈರ್ಯ ಇಲ್ಲ ಎಂದ ಮಾಜಿ ಕ್ರಿಕೆಟಿಗ!

ಯುಎಇಯಲ್ಲಿ ಮುಂದುವರಿಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 39ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಿದವು. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು 54 ರನ್‌ಗಳ ಅಂತರದಿಂದ ಸೋಲಿಸಿ ಭರ್ಜರಿ ಗೆಲುವನ್ನು ಸಾಧಿಸಿದೆ.

ಆ ಇಬ್ಬರು ಆಟಗಾರರಿಂದ ಸೂರ್ಯಕುಮಾರ್ ಯಾದವ್‌ಗೆ ಸರಿಯಾದ ಅವಕಾಶ ಸಿಗಲಿಲ್ಲ; ಗಂಭೀರ್ ಬೇಸರಆ ಇಬ್ಬರು ಆಟಗಾರರಿಂದ ಸೂರ್ಯಕುಮಾರ್ ಯಾದವ್‌ಗೆ ಸರಿಯಾದ ಅವಕಾಶ ಸಿಗಲಿಲ್ಲ; ಗಂಭೀರ್ ಬೇಸರ

ಇನ್ನು ಈ ಪಂದ್ಯ ಆರಂಭವಾಗುವ ಮುನ್ನ ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಮತ್ತು ಕುತೂಹಲವನ್ನು ಹುಟ್ಟುಹಾಕಿತ್ತು. ಹೌದು, ತಾತ್ಕಾಲಿಕವಾಗಿ ಸ್ಥಗಿತಗೊಂಡು ಯುಎಇಯಲ್ಲಿ ಮುಂದುವರಿಯುತ್ತಿರುವ ಈ ಬಾರಿಯ ಐಪಿಎಲ್ ಟೂರ್ನಿಯ ದ್ವಿತೀಯ ಚರಣದಲ್ಲಿ ಈ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಎರಡೂ ತಂಡಗಳು ತಲಾ 2 ಪಂದ್ಯಗಳನ್ನಾಡಿ, ಎರಡೂ ಪಂದ್ಯಗಳಲ್ಲಿ ಸೋಲುವುದರ ಮೂಲಕ ಹಿನ್ನಡೆಯನ್ನು ಅನುಭವಿಸಿದ್ದವು. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಈ ಪಂದ್ಯ ಎರಡೂ ತಂಡಗಳಿಗೂ ಸಹ ಬಹುಮುಖ್ಯವಾದ ಪಂದ್ಯವಾಗಿತ್ತು. ಹೀಗೆ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದಂತಹ ಈ ಪಂದ್ಯದಲ್ಲಿ ಒಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವನ್ನು ಸಾಧಿಸಿದ್ದರೆ, ಮತ್ತೊಂದೆಡೆ ವಿರಾಟ್ ಕೊಹ್ಲಿ ಸತತ ಎರಡನೇ ಅರ್ಧ ಶತಕವನ್ನು ಬಾರಿಸಿದ್ದಾರೆ.

ಬ್ರಾವೊಗೆ ಧೋನಿ ನೀಡಿದ ಆ ಮಾಸ್ಟರ್‌ಮೈಂಡ್ ಉಪಾಯದಿಂದ ಬಿತ್ತು ನೆಲಕಚ್ಚಿ ನಿಂತಿದ್ದ ಕೊಹ್ಲಿ ವಿಕೆಟ್!ಬ್ರಾವೊಗೆ ಧೋನಿ ನೀಡಿದ ಆ ಮಾಸ್ಟರ್‌ಮೈಂಡ್ ಉಪಾಯದಿಂದ ಬಿತ್ತು ನೆಲಕಚ್ಚಿ ನಿಂತಿದ್ದ ಕೊಹ್ಲಿ ವಿಕೆಟ್!

ಹೌದು, ಇತ್ತೀಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಕಳಪೆ ಫಾರ್ಮ್‌ನಲ್ಲಿದ್ದು ಅರ್ಧ ಶತಕಗಳನ್ನು ಬಾರಿಸಲು ಕೂಡ ಕಷ್ಟ ಪಡುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ಈ ಟೀಕೆಗಳಿಗೆಲ್ಲ ಸದ್ಯ ತಮ್ಮ ಬ್ಯಾಟ್ ಮೂಲಕ ಉತ್ತರ ನೀಡಿರುವ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 53 ರನ್ ಗಳಿಸಿ ಅರ್ಧಶತಕವನ್ನು ಬಾರಿಸಿದ್ದರು, ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 51 ರನ್ ಬಾರಿಸಿದ ವಿರಾಟ್ ಕೊಹ್ಲಿ ಸತತ ಎರಡನೇ ಅರ್ಧ ಶತಕವನ್ನು ಬಾರಿಸುವುದರ ಮೂಲಕ ಉತ್ತಮ ಫಾರ್ಮ್‌ಗೆ ಮರಳಿದ್ದಾರೆ. ಆದರೆ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಮಾತ್ರ ವಿರಾಟ್ ಕೊಹ್ಲಿ ಬಾರಿಸಿರುವ ಈ ಅರ್ಧಶತಕದ ಕುರಿತು ಕೊಂಕು ಮಾತನಾಡುವುದನ್ನು ಬಿಟ್ಟಿಲ್ಲ. ವಿರಾಟ್ ಕೊಹ್ಲಿ ಪ್ರದರ್ಶನದ ಕುರಿತು ಟೀಕೆಗಳನ್ನು ವ್ಯಕ್ತಪಡಿಸಿರುವ ಸಂಜಯ್ ಮಂಜ್ರೇಕರ್ ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ಮುಂಬೈನ ಇಬ್ಬರು ಬೌಲರ್‌ಗಳನ್ನು ಎದುರಿಸುವ ಧೈರ್ಯ ಕೊಹ್ಲಿಗಿಲ್ಲ

ಮುಂಬೈನ ಇಬ್ಬರು ಬೌಲರ್‌ಗಳನ್ನು ಎದುರಿಸುವ ಧೈರ್ಯ ಕೊಹ್ಲಿಗಿಲ್ಲ

ಸತತ 2 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ ಪ್ರದರ್ಶನದ ಕುರಿತು ಕೊಂಕು ನುಡಿದಿರುವ ಸಂಜಯ್ ಮಂಜ್ರೇಕರ್ 'ಬಹುಶಃ ವಿರಾಟ್ ಕೊಹ್ಲಿಗೆ ಸ್ಪಿನ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ ದೊಡ್ಡ ಹೊಡೆತಗಳನ್ನು ಬಾರಿಸುವ ವಿಶ್ವಾಸವಿಲ್ಲ ಎನಿಸುತ್ತದೆ. ವೇಗಿಗಳಿಗೆ ದೊಡ್ಡ ಸಿಕ್ಸರ್ ಸಿಡಿಸಿದ ವಿರಾಟ್ ಕೊಹ್ಲಿ ಮುಂಬೈ ಇಂಡಿಯನ್ಸ್ ತಂಡದ ಸ್ಪಿನ್ ಬೌಲರ್‌ಗಳಾದ ರಾಹುಲ್ ಚಾಹರ್ ಮತ್ತು ಕೃನಾಲ್ ಪಾಂಡ್ಯರಿಗೆ ಒಂದೇ ಓವರ್‌ನಲ್ಲಿ ಎರಡಕ್ಕಿಂತ ಹೆಚ್ಚು ದೊಡ್ಡ ದೊಡ್ಡ ಸಿಕ್ಸರ್‌ಗಳನ್ನು ಬಾರಿಸುವ ಧೈರ್ಯ ಮಾಡಲಿಲ್ಲ, ಬದಲಾಗಿ ಸಿಂಗಲ್ ತೆಗೆದುಕೊಂಡು ಆಟವನ್ನಾಡಿದರು' ಎಂದು ವಿರಾಟ್ ಕೊಹ್ಲಿಯ ಕಾಲೆಳೆದಿದ್ದಾರೆ.

ವೈಯಕ್ತಿಕ ಅರ್ಧಶತಕ ಬಾರಿಸಲು ಕೊಹ್ಲಿ ಆಟ

ವೈಯಕ್ತಿಕ ಅರ್ಧಶತಕ ಬಾರಿಸಲು ಕೊಹ್ಲಿ ಆಟ

ಇನ್ನೂ ಮುಂದುವರಿದು ಕೊಹ್ಲಿ ಪ್ರದರ್ಶನದ ಕುರಿತು ನಕಾರಾತ್ಮಕವಾಗಿ ಟೀಕಿಸಿರುವ ಸಂಜಯ್ ಮಂಜ್ರೇಕರ್ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಲು ಬ್ಯಾಟ್ ಬೀಸಿದರು ಎಂದು ಆರೋಪಿಸಿದ್ದಾರೆ. '40 ಎಸೆತಗಳಿಗೆ ಅರ್ಧ ಶತಕವನ್ನು ಬಾರಿಸಿದ ವಿರಾಟ್ ಕೊಹ್ಲಿ ಮೊದಲ 27 ಎಸೆತಗಳಲ್ಲಿ 40 ರನ್ ಬಾರಿಸಿದ್ದರು ಆದರೆ, ಉಳಿದ 10 ರನ್‌ಗಳನ್ನು ಬಾರಿಸಲು 13 ಎಸೆತಗಳನ್ನು ತೆಗೆದುಕೊಂಡರು. ಕಳೆದ ಚೆನ್ನೈ ವಿರುದ್ಧ ಸಿಡಿಸಿದ ಅರ್ಧಶತಕದಂತೆಯೇ ಈ ಬಾರಿಯ ಅರ್ಧಶತಕವನ್ನೂ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಕ್ಕಾಗಿ ಬಾರಿಸಿದರು' ಎಂದು ಸಂಜಯ್ ಮಂಜ್ರೇಕರ್ ವಿರಾಟ್ ಕೊಹ್ಲಿ ಪ್ರದರ್ಶನದ ವಿರುದ್ಧ ಕೊಂಕು ನುಡಿದಿದ್ದಾರೆ.

ಕೊನೆ ಕ್ಷಣದಲ್ಲಿ ಪಂದ್ಯಕ್ಕೆ ತಿರುವು ಕೊಟ್ಟ ಹರ್ಷಲ್ | Oneindia Kannada
ಕೊಹ್ಲಿ ಬಾರಿಸಿದ ಸಿಕ್ಸರ್ ಹೆಚ್ಚು ದೂರ ಹೋಗಿ ಬೀಳುತ್ತಿರಲಿಲ್ಲ

ಕೊಹ್ಲಿ ಬಾರಿಸಿದ ಸಿಕ್ಸರ್ ಹೆಚ್ಚು ದೂರ ಹೋಗಿ ಬೀಳುತ್ತಿರಲಿಲ್ಲ

ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಕ್ಕೋಸ್ಕರ ಅರ್ಧಶತಕಗಳನ್ನು ಸಿಡಿಸುತ್ತಿದ್ದಾರೆ ಎಂದು ಆರೋಪಿಸಿರುವ ಸಂಜಯ್ ಮಂಜ್ರೇಕರ್ ವಿರಾಟ್ ಕೊಹ್ಲಿ ಬಾರಿಸುತ್ತಿದ್ದ ಸಿಕ್ಸರ್‌ಗಳು ಹೆಚ್ಚು ದೂರ ಹೋಗಿ ಬೀಳುತ್ತಿರಲಿಲ್ಲ ಎಂದು ಕಾಲೆಳೆದಿದ್ದಾರೆ. ಕೊಹ್ಲಿ ಬಾರಿಸಿದ ಸಿಕ್ಸರ್‌ಗಳು ಬೌಂಡರಿ ಲೈನ್‌ನಿಂದ ಸ್ವಲ್ಪ ಅಡಿಗಳಷ್ಟು ಮುಂದೆ ಹೋಗಿ ಬೀಳುತ್ತಿದ್ದವಷ್ಟೇ ಎಂದು ಸಂಜಯ್ ಮಂಜ್ರೇಕರ್ ಟೀಕಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, September 27, 2021, 10:07 [IST]
Other articles published on Sep 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X