ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB vs RR: ಕ್ವಾಲಿಫೈಯರ್‌ನಲ್ಲಿ ಗೆಲ್ಲಲು ನಿಮ್ಮ ಡ್ರೀಮ್ ತಂಡದಿಂದ ಈ ಮೂವರನ್ನು ಹೊರಗಿಡಿ

IPL 2022: 3 players you should avoid in your dream team for RR vs RCB qualifier 2 game

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಈ ಬಾರಿಯ ಟೂರ್ನಿಯಲ್ಲಿ ಇತ್ತಂಡಗಳ ನಡುವೆ ನಡೆಯಲಿರುವ ಮೂರನೇ ಮುಖಾಮುಖಿ ಪಂದ್ಯ ಇದಾಗಿದ್ದು, ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡು ಗುಜರಾತ್ ಟೈಟನ್ಸ್ ವಿರುದ್ಧ ಸೆಣಸಾಟ ನಡೆಸಿದರೆ, ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ. ಇನ್ನು ಇತ್ತಂಡಗಳ ನಡುವೆ ಲೀಗ್ ಹಂತದಲ್ಲಿ ನಡೆದಿದ್ದ ಎರಡು ಪಂದ್ಯಗಳ ಪೈಕಿ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಯ ಸಾಧಿಸಿದ್ದರೆ, ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಗೆಲುವು ಕಂಡಿತ್ತು. ಹೀಗೆ ಎರಡೂ ತಂಡಗಳೂ ಟೂರ್ನಿಯಲ್ಲಿ ಸಮಬಲ ಸಾಧಿಸಿದ್ದರೆ, ಒಟ್ಟಾರೆ ಮುಖಾಮುಖಿಯಲ್ಲಿ ರಾಜಸ್ಥಾನ್ ರಾಯಲ್ಸ್ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪಷ್ಟ ಮೇಲುಗೈ ಸಾಧಿಸಿದೆ.

RCB vs RR: ಸಂಜು ಸ್ಯಾಮ್ಸನ್ ಆಟ ಆರ್‌ಸಿಬಿಯ ಈ ಬೌಲರ್ ಮುಂದೆ ನಡೆಯಲ್ಲ; 16 ರನ್‌ಗೆ 2 ಬಾರಿ ಔಟ್!RCB vs RR: ಸಂಜು ಸ್ಯಾಮ್ಸನ್ ಆಟ ಆರ್‌ಸಿಬಿಯ ಈ ಬೌಲರ್ ಮುಂದೆ ನಡೆಯಲ್ಲ; 16 ರನ್‌ಗೆ 2 ಬಾರಿ ಔಟ್!

ಇನ್ನು ಪ್ಲೇಆಫ್ ಸುತ್ತಿನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕಣಕ್ಕಿಳಿದಿದ್ದ ರಾಜಸ್ಥಾನ್ ರಾಯಲ್ಸ್ ಸೋಲನ್ನು ಅನುಭವಿಸಿದ್ದು, ಇದೀಗ ಪ್ಲೇಆಫ್ ಪ್ರವೇಶಿಸಲು ಮತ್ತೊಂದು ಅವಕಾಶವನ್ನು ಪಡೆದುಕೊಂಡಿದ್ದು, ಎರಡನೇ ಕ್ವಾಲಿಫೈಯರ್ ಆಡಲಿದೆ. ಲೀಗ್ ಹಂತ ಮುಕ್ತಾಯದ ಸಮಯಕ್ಕೆ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನ ಪಡೆದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಪ್ರವೇಶ ಪಡೆದುಕೊಂಡು ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿದು ಭರ್ಜರಿ ಜಯ ಸಾಧಿಸಿತು.

RCB vs RR: ಈ ತಂಡ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ಫೈನಲ್ ತಲುಪಲಿದೆ ಎಂದ ಸಂಜಯ್ ಮಂಜ್ರೇಕರ್RCB vs RR: ಈ ತಂಡ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ಫೈನಲ್ ತಲುಪಲಿದೆ ಎಂದ ಸಂಜಯ್ ಮಂಜ್ರೇಕರ್

ಹೀಗೆ ಕಳೆದ ಪಂದ್ಯವನ್ನು ಸೋತಿರುವ ರಾಜಸ್ಥಾನ್ ರಾಯಲ್ಸ್ ಗೆಲುವಿನ ಅಲೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎದುರಿಸಲಿದ್ದು, ಕ್ರಿಕೆಟ್ ಪ್ರೇಮಿಗಳು ಇತ್ತಂಡಗಳ ನಡುವಿನ ಈ ಮುಖಾಮುಖಿಯಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಊಹೆಯಲ್ಲಿ ತೊಡಗಿಕೊಂಡಿದ್ದರೆ, ಇನ್ನೂ ಕೆಲ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಕ್ಕಾಗಿ ಡ್ರೀಮ್ ರಚಿಸುತ್ತಿದ್ದು, ಪಂದ್ಯದಲ್ಲಿ ಯಾವ ಆಟಗಾರ ಉತ್ತಮ ಪ್ರದರ್ಶನ ನೀಡಬಹುದು ಎಂಬುದನ್ನು ಆರಿಸುವಲ್ಲಿ ನಿರತರಾಗಿದ್ದಾರೆ. ಹೀಗೆ ಡ್ರೀಮ್ ಟೀಮ್ ರಚಿಸುತ್ತಿರುವ ಕ್ರಿಕೆಟ್ ಪ್ರೇಮಿಗಳು ಕಳಪೆ ಪ್ರದರ್ಶನ ನೀಡಬಹುದಾದ ಹಾಗೂ ಅವಕಾಶ ಸಿಗದೇ ಉಳಿಯಬಹುದಾದ ಈ ಮೂವರು ಆಟಗಾರರನ್ನು ಹೊರಗಿಡುವುದು ಉತ್ತಮ ಎನ್ನಬಹುದು.

1. ಮಹಿಪಾಲ್ ಲೊಮ್ರರ್

1. ಮಹಿಪಾಲ್ ಲೊಮ್ರರ್

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತನ್ನ ಎರಡನೇ ಪಂದ್ಯವನ್ನಾಡಿದ ಮಹಿಪಾಲ್ ಲೊಮ್ರೊರ್ 27 ಎಸೆತಗಳಲ್ಲಿ 42 ರನ್ ಗಳಿಸಿ ಅಬ್ಬರಿಸಿದ್ದರು. ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಲೊಮ್ರೊರ್ ನಂತರದ ಪಂದ್ಯಗಳಲ್ಲಿ ಇದೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಅವಕಾಶ ಪಡೆಯದೇ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದರು. ಇನ್ನು ಕಳೆದ ನಾಲ್ಕು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಮಾತ್ರ ಬ್ಯಾಟಿಂಗ್ ಪಡೆದಿರುವ ಲೊಮ್ರೊರ್ 20 ರನ್‌ಗಳಿಗಿಂತ ಹೆಚ್ಚು ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ಈ ಪಂದ್ಯದಲ್ಲಿಯೂ ಸಹ ಲೊಮ್ರೊರ್‌ಗೆ ಹೆಚ್ಚು ಸಮಯ ಬ್ಯಾಟ್ ಬೀಸುವ ಅವಕಾಶ ಸಿಗದೇ ಇರಬಹುದಾಗಿದ್ದು, ಈತನನ್ನು ನಿಮ್ಮ ಡ್ರೀಮ್ ತಂಡದಿಂದ ಹೊರಗಿಡುವುದು ಉತ್ತಮ ಎನ್ನಬಹುದು.

2. ಶಹಬಾಜ್ ಅಹ್ಮದ್

2. ಶಹಬಾಜ್ ಅಹ್ಮದ್

ಶಹಬಾಜ್ ಅಹ್ಮದ್ ಪರಿಸ್ಥತಿ ಮಹಿಪಾಲ್ ಲೊಮ್ರೊರ್‌ಗಿಂತ ಹೆಚ್ಚೇನೂ ಭಿನ್ನವಾಗಿಲ್ಲ. ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಟ್ ಬೀಸುವ ಅವಕಾಶ ಪಡೆಯದ ಶಹಬಾಜ್ ಅಹ್ಮದ್ ವಿಕೆಟ್ ಪಡೆಯುವಲ್ಲಿಯೂ ಸಫಲರಾಗಿಲ್ಲ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ ಶಹಬಾಜ್ ಅಹ್ಮದ್ 35 ರನ್ ನೀಡಿ ಯಾವುದೇ ವಿಕೆಟ್ ಪಡೆಯದೇ ಮಂಕಾದರು. ಕೊನೆಯ 5 ಪಂದ್ಯಗಳ ಪೈಕಿ 2 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿರುವ ಶಹಬಾಜ್ ಅಹ್ಮದ್ ಅವರನ್ನು ಇಂದಿನ ಪಂದ್ಯದ ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಉತ್ತಮ.

3. ರಿಯಾನ್ ಪರಾಗ್

3. ರಿಯಾನ್ ಪರಾಗ್

2019ರ ಐಪಿಎಲ್‌ನಿಂದ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯುತ್ತಿರುವ ರಿಯನ್ ಪರಾಗ್ ಒಟ್ಟು 15 ಪಂದ್ಯಗಳನ್ನಾಡಿ 168 ರನ್ ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲೀಗ್ ಹಂತದ ಪಂದ್ಯದಲ್ಲಿ 31 ಎಸೆತಗಳಲ್ಲಿ 56 ರನ್ ಗಳಿಸಿದ್ದ ಪರಾಗ್ ಇದನ್ನು ಹೊರತುಪಡಿಸಿ ಉಳಿದ ಯಾವುದೇ ಪಂದ್ಯದಲ್ಲಿಯೂ ಸಹ 20 ರನ್ ಗಡಿ ದಾಟುವಲ್ಲಿ ಯಶಸ್ವಿಯಾಗಿಲ್ಲ. ಹಾಗೂ ಪರಾಗ್ ಟೂರ್ನಿಯಲ್ಲಿ ಒಂದೇ ವಿಕೆಟ್ ಪಡೆದಿದ್ದು, ಬೌಲಿಂಗ್‌ನಲ್ಲಿಯೂ ಸಹ ಮಂಕಾಗಿದ್ದಾರೆ. ಹೀಗಾಗಿ ಇಂದಿನ ಪಂದ್ಯದ ಡ್ರೀಮ್ ಟೀಮ್‌ನಿಂದ ಈತನನ್ನು ಹೊರಹಾಕುವುದೇ ಸೂಕ್ತ.

Story first published: Friday, May 27, 2022, 17:47 [IST]
Other articles published on May 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X