ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Gujarat Titans: ಐಪಿಎಲ್ 2022: ಅಹಮದಾಬಾದ್ ತಂಡದ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದ ಫ್ರಾಂಚೈಸಿ

IPL 2022: Ahmedabad IPL Franchise officially named as Gujarat Titans

ಇಂಡಿಯನ್ ಪ್ರಿಮಿಯರ್ ಲೀಗ್‌ನ 15ನೇ ಆವೃತ್ತಿಗೆ ಹೊಸರಾಗಿ ಸೇರ್ಪಡೆಯಾಗಿರುವ ಅಹಮದಾಬಾದ್ ಫ್ರಾಂಚೈಸಿ ತನ್ನ ತಂಡಕ್ಕೆ ಕಡೆಗೂ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಅಹಮದಾಬಾದ್ ಫ್ರಾಂಚೈಸಿ ತಂಡದ ಹೆಸರು "ಗುಜರಾತ್ ಟೈಟನ್ಸ್" ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಎರಡು ತಂಡಗಳು ಸೇರ್ಪಡೆಯಾಗಿದ್ದು ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿಗಳ ಸೇರ್ಪಡೆಯೊಂದಿಗೆ ಟೂರ್ನಿಯಲ್ಲಿ ಭಾಗಿಯಾಗುವ ಒಟ್ಟು ತಂಡಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಇದರಲ್ಲಿ ಲಕ್ನೋ ಫ್ರಾಂಚೈಸಿ ತನ್ನ ತಂಡದ ಹೆಸರನ್ನು ಈ ಹಿಂದೆಯೇ ಅಧಿಕೃತವಾಗಿ ಘೋಷಣೆ ಮಾಡಿತ್ತು. ಲಕ್ನೋ ಸೂಪರ್ ಜೈಂಟ್ಸ್ ಎಂದು ಪ್ರಾಂಚೈಸಿ ಘೋಷನೆ ಮಾಡಿತ್ತು. ಆದರೆ ಅಹಮದಾಬಾದ್ ಫ್ರಾಂಚೈಸಿ ಈಗ ಅಧಿಕೃತವಾಗಿ ತಂಡದ ಹೆಸರನ್ನು ಘೋಷಣೆ ಮಾಡಿದೆ.

ಐಪಿಎಲ್ ಮೆಗಾ ಹರಾಜು: ಎಲ್ಲಾ 10 ತಂಡಗಳ ಬಿಡ್ಡಿಂಗ್ ರಣತಂತ್ರದ ಕುತೂಹಲಕಾರಿ ಮಾಹಿತಿ!ಐಪಿಎಲ್ ಮೆಗಾ ಹರಾಜು: ಎಲ್ಲಾ 10 ತಂಡಗಳ ಬಿಡ್ಡಿಂಗ್ ರಣತಂತ್ರದ ಕುತೂಹಲಕಾರಿ ಮಾಹಿತಿ!

ಕಳೆದ ಸೋಮವಾರವೇ ಅಹದಾಬಾದ್ ಫ್ರಾಂಚೈಸಿಯ ಹೆಸರು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಅಹದಾಬಾದ್ ಟೈಟನ್ಸ್ ಎಂದು ತಂಡಕ್ಕೆ ಹೆಸರಿಸಲಾಗಿದೆ ಎಂದು ಸುದ್ದಿಯಾಗಿತ್ತು. ಆದರೆ ಫ್ರಾಂಚೈಸಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿರಲಿಲ್ಲ. ಆದರೆ ಬುಧವಾರ ಈ ಬಗ್ಗೆ ಅಧಿಕೃವಾಗಿ ಘೋಷನೆ ಮಾಡಿದ್ದು ಗುಜರಾತ್ ಟೈಟನ್ಸ್ ಎಂದು ಹೆಸರನ್ನು ಅಂತಿಮಗೊಳಿಸಲಾಗಿದೆ.

ಆರಂಭದಲ್ಲಿಯೇ ವಿವಾದಕ್ಕೆ ಒಳಗಾದ ಅಹಮದಾಬಾದ್ ಫ್ರಾಂಚೈಸಿ: ಈ ಬಾರಿಯ ಐಪಿಎಲ್ ಆವೃತ್ತಿಗೆ ಮುನ್ನ ಎರಡು ನೂತನ ತಂಡಗಳನ್ನು ಸೇರ್ಪಡೆಗೊಳಿಸಲು ನಿರ್ಧರಿಸಿದ ನಂತರ ಬಿಸಿಸಿಐ ಎರಡು ಹೊಸ ತಮಡಗಳಿಗೆ ಬಿಡ್ಡಿಂಗ್ ನಡೆಸಿತ್ತು. ಇದರಲ್ಲಿ ಸಂಜೀವ್ ಗೋಯೆಂಕಾ ಅವರ ಆರ್‌ಪಿಎಸ್‌ಜಿ ಗ್ರೂಪ್ 7090 ಕೋಟಿ ರೂಪಾಯಿ ಬಿಡ್ ಮಾಡಿ ಲಕ್ನೋ ತಂಡವನ್ನು ಖರೀದಿಸಿದ್ದರೆ, ಅಮೆರಿಕದ ಸಿವಿಸಿ ಕ್ಯಾಪಿಟಲ್ ಅಹಮದಾಬಾದ್ ಫ್ರಾಂಚೈಸಿಯನ್ನು 5,625 ಕೋಟಿಗೆ ಖರೀದಿಸಿತು.

ಇದರಲ್ಲಿ ಲಕ್ನೋ ಪ್ರಾಂಚೈಸಿ ಬಗ್ಗೆ ಯಾವುದೇ ಗೊಂದಲಗಳಾಗದಿದ್ದರೂ ಅಹಮದಾಬಾದ್ ಫ್ರಾಂಚೈಸಿಯನ್ನು ಖರೀದಿಸಿರುವ ಸಿವಿಸಿ ಕ್ಯಾಪಿಟಲ್ಸ್ ಈ ಮೊದಲು ಬೆಟ್ಟಿಂಗ್ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಸಂಗತಿಗಳು ಬೆಳಕಿಗೆ ಬಂತು. ಈ ವಿಚಾರ ತಿಳಿದ ನಂತರ ಸಾಕಷ್ಟು ದೊಡ್ಡ ವಿವಾದವೇ ಉಂಟಾಯಿತು. ಈ ವಿಚಾರ ಒತ್ತಡಕ್ಕೆ ಒಳಗಾದ ಬಿಸಿಸಿಐ ಒಪ್ಪಂದ ಪತ್ರವನ್ನು ನೀಡಿರಲಿಲ್ಲ. ಆದರೆ ಅಂತಿಮವಾಗಿ ಪರಿಶೀಲನೆ ನಡೆಸಿದ ಬಳಿಕ ಬಿಸಿಸಿಐನಿಂದ ಅನುಮತಿ ನೀಡಿದೆ. ವರದಿಯ ಪ್ರಕಾರ, ಬಿಸಿಸಿಐನ ತನಿಖಾ ಸಮಿತಿಯು ಸಿವಿಸಿ ಕ್ಯಾಪಿಟಲ್‌ನ ಹೂಡಿಕೆಯ ಬಗ್ಗೆ ತನಿಖೆ ನಡೆಸಿದ ಬಳಿಕ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ.

ಅವರು ಕರೆದಾಗ ಆರ್‌ಸಿಬಿ ಬಿಟ್ಟು ಬೇರೆ ತಂಡ ಸೇರಲು ಸಿದ್ಧನಾಗಿದ್ದೆ ಆದರೆ ಈ ಕಾರಣದಿಂದ ಆಗಲಿಲ್ಲ ಎಂದ ಕೊಹ್ಲಿಅವರು ಕರೆದಾಗ ಆರ್‌ಸಿಬಿ ಬಿಟ್ಟು ಬೇರೆ ತಂಡ ಸೇರಲು ಸಿದ್ಧನಾಗಿದ್ದೆ ಆದರೆ ಈ ಕಾರಣದಿಂದ ಆಗಲಿಲ್ಲ ಎಂದ ಕೊಹ್ಲಿ

Rohit Sharma ಅವರ ಹೊಸ ಪ್ರಯೋಗ ವರ್ಕೌಟ್ ಆಗುತ್ತಾ? | Oneindia Kannada

ಹಾರ್ದಿಕ್ ಪಾಂಡ್ಯ ನಾಯಕ: ಮೆಗಾ ಹರಾಜಿಗೂ ಮುನ್ನವೇ ಅಹಮದಾಬಾದ್ ಫ್ರಾಂಚೈಸಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರನ್ನ ನಾಯಕ ಎಂದು ಘೋಷಣೆ ಮಾಡಿದೆ. ಬಿಸಿಸಿಐ ಎರಡು ಹೊಸ ತಮಡಗಳಿಗೆ ನೀಡಿದ್ದ ನೀಡಿದ ವಿಶೇಷ ಅಧಿಕಾರವನ್ನು ಬಳಸಿ ಅಹಮದಾಬಾದ್ ಫ್ರಾಂಚೈಸಿ 15 ಕೋಟಿ ರೂಪಾಯಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿಕೊಂಡಿದ್ದು ಮಿಸ್ಟರಿ ಸ್ಪಿನ್ನರ್ ರಶೀದ್ ಖಾನ್ ಹಾಗೂ ಕೆಕೆಆರ್ ಪರ ಆಡುತ್ತಿದ್ದ ಶುಭ್ಮನ್ ಗಿಲ್ ಅವರನ್ನು ಕೂಡ ತಂಡಕ್ಕೆ ಹರಾಜಿಗೂ ಮುನ್ನವೇ ಸೇರ್ಪಡೆಗೊಳಿಸಿದೆ. ಇದರಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ನಾಯಕನನ್ನಾಗಿ ಘೋಷಣೆ ಮಾಡಿದೆ. ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಮತ್ತು ದಕ್ಷಿಣ ಆಫ್ರಿಕಾದ ಗ್ಯಾರಿ ಕಸ್ಟ್ರನ್ ಅಹಮದಾಬಾದ್ ತಂಡದ ಕೋಚ್‌ಗಳಾಗಿದ್ದರೆ, ವಿಕ್ರಂ ಸೋಲಂಕಿ ತಂಡದ ನಿರ್ದೇಶಕರನ್ನಾಗಿ ನೇಮಕಗೊಂಡಿದ್ದಾರೆ.

Story first published: Wednesday, February 9, 2022, 14:58 [IST]
Other articles published on Feb 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X