ಐಪಿಎಲ್ 2022: ಆರ್‌ಆರ್ ಫ್ರಾಂಚೈಸಿ ಜೊತೆ ಮುನಿಸಿಕೊಂಡ ನಾಯಕ ಸಂಜು ಸ್ಯಾಮ್ಸನ್?

ಐಪಿಎಲ್ 2021ರ ಆವೃತ್ತಿ ಮುಕ್ತಾಯವಾಗಿದ್ದು ಈಗ ಮುಂದಿನ ಆವೃತ್ತಿಗೆ ಮಹಾ ಹರಾಜು ಪ್ರಕ್ರಿಯೆಗಳತ್ತ ಫ್ರಾಂಚೈಸಿಗಳು ಚಿತ್ತಹರಿಸಿದೆ. ಎರಡು ಹೊಸ ತಂಡಗಳು ಕೂಡ ಸೇರ್ಪಡೆಯಾಗುತ್ತಿರುವ ಕಾರಣದಿಂದಾಗಿ ಈ ಬಾರಿಯ ಮಹಾ ಹರಾಜು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮಧ್ಯೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಹಾಗೂ ಅದರ ಹಾಲಿ ನಾಯಕ ಸಂಜು ಸ್ಯಾಮ್ಸನ್ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಬರುತ್ತಿವೆ. ಇನ್‌ಸೈಡ್ ಸ್ಪೋರ್ಟ್ ಈ ಬಗ್ಗೆ ವರದಿ ಮಾಡಿದ್ದು ಸಂಜು ಸ್ಯಾಮ್ಸನ್ ಮುಂದಿನ ಆವೃತ್ತಿಗೆ ರಾಜಸ್ಥಾನ್ ರಾಯಲ್ಸ್ ತೊರೆಯುವ ಸಾಧ್ಯತೆಯಿದೆ ಎಂದಿದೆ.

ಸ್ವತಃ ಸಂಜು ಸ್ಯಾಮ್ಸನ್ ಮುಂದಿನ ಐಪಿಎಲ್ ಆವೃತ್ತಿಗೆ ರಾಜಸ್ಥಾನ್ ರಾಯಲ್ಸ್ ತಂಡದ ಜೊತೆಗೆ ಮುಂದುವರಿಯದಿರಲು ಬಯಸಿದ್ದಾರೆ ಎನ್ನಲಾಗಿದೆ. ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವವನ್ನು ಐಪಿಎಲ್ 2021ರ ಆವೃತ್ತಿಯಲ್ಲಿ ವಹಿಸಿಕೊಂಡಿದ್ದರು. ತಂಡ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದರೂ ಸಂಜು ಸ್ಯಾಮ್ಸನ್ ಬ್ಯಾಟಿಂಗ್‌ನಲ್ಲಿ ಮಿಂಚಿದ್ದು ತಂಡದ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿದ್ದಾರೆ. ಹಿಗಾಗಿ ಸಂಜು ತಂಡವನ್ನು ತೊರೆಯುವುದು ಹಿನ್ನಡೆಯಾಗುವುದು ಖಚಿತ.

ಟಿ20 ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ: ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶಟಿ20 ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ: ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ

ಮೂಲಗಳ ಮಾಹಿತಿಯ ಪ್ರಕಾರ ಸಂಜು ಸ್ಯಾಮ್ಸನ್ ಕೆಲ ಕಾರಣಗಳಿಂದಾಗಿ ಫ್ರಾಂಚೈಸಿ ಮೇಲೆ ಬೇಸರಗೊಂಡಿದ್ದಾರೆ. ಹೀಗಾಗಿ ಅಧಿಕೃತ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಫ್ರಾಂಚೈಸಿಯನ್ನು ಈಗಾಗಲೇ ಸಂಜು ಅನ್‌ಫಾಲೋ ಮಾಡಿದ್ದಾರೆ. ಇನ್ನು ಈ ಬಗ್ಗೆ ಫ್ರಾಂಚೈಸಿ ಹಾಗೂ ಸ್ವತಃ ಸಂಜು ಸ್ಯಾಮ್ಸನ್ ಬಳಿ 'ಇನ್‌ಸೈಡ್ ಸ್ಪೋರ್ಟ್' ಪ್ರತಿಕ್ರಿಯೆ ಕೇಳಿದಾಗ ಈ ಬಗ್ಗೆ ಪ್ರತಿಕ್ರಿಯಿಸಲು ಇಬ್ಬರು ಕೂಡ ನಿರಾಕರಿಸಿದ್ದಾರೆ ಎಂದು ವರದಿ ಮಾಡಿದೆ.

"ಸಂಜು ಸ್ಯಾಮ್ಸನ್ ಯಾವ ಕಾರಣಕ್ಕಾಗಿ ಅನ್‌ಫಾಲೋ ಮಾಡಿದ್ದಾರೆ ಎಂಬುದು ನಮಗೂ ತಿಳಿದಿಲ್ಲ. ನಾವು ಆತನ ಸುತ್ತವೇ ನಮ್ಮ ತಂಡದ ಭವಿಷ್ಯ ಕಟ್ಟಿದ್ದೆವು. ನಮ್ಮ ರಿಟೆನ್ಶನ್ ಪಟ್ಟಿಯೊಲ್ಲಿಯೂ ಅವರೇ ಅಗ್ರ ಸ್ಥಾನದಲ್ಲಿದ್ದಾರೆ. ಇದರ ಕಾರಣವನ್ನು ನಾವು ಕೂಡ ಕಂಡು ಹಿಡಿಯುವ ಪ್ರಯತ್ನದಲ್ಲಿದ್ದೇವೆ" ಎಂದು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಮೂಲಗಳು ಹೇಳಿರುವುದಾಗಿ ಇನ್‌ಸೈಡ್ ಸ್ಪೋರ್ಟ್ ವರದಿಯಲ್ಲಿ ಉಲ್ಲೇಖಿಸಿದೆ.

ರಾಜಸ್ಥಾನ್ ರಾಯಲ್ಸ್ ತಂಡ ಟೂರ್ನಿಯಲ್ಲಿ ಕಳೆ ಪ್ರದರ್ಶನ ನೀಡಿದರೂ ಸಂಜು ಸ್ಯಾಮ್ಸನ್ ನಿರಂತರವಾಗಿ ಫ್ರಾಂಚೈಸಿ ಪರವಾಗಿ ಅದ್ಭುತವಾದ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಆರ್‌ಆರ್ ಬಳಗವನ್ನು ಸೇರಿಕೊಂಡ ನಂತರ ಸಂಜು ಪ್ರತಿ ಆವೃತ್ತಿಯಲ್ಲಿಯೂ 300ಕ್ಕೂ ಅಧಿಕ ರನ್ ಗಳಿಸುತ್ತಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿಯೂ ರಾಜಸ್ಥಾನ್ ರಾಯಲ್ಸ್ ತಂಡ ಕಳಪೆ ಪ್ರದರ್ಶನ ನಿಡಿದ್ದರೂ ಸಂಜು ಸ್ಯಾಮ್ಸನ್ 484 ರನ್‌ಗಳನ್ನು ಗಳಿಸಿ ಮಿಂಚಿದ್ದರು.

ಕೋಚ್‌ ಸ್ಥಾನದಿಂದ ನಿರ್ಗಮಿಸಿದ ರವಿಶಾಸ್ತ್ರಿ: ಪ್ರಮುಖ ಸಾಧನೆಗಳು ಇಲ್ಲಿದೆಕೋಚ್‌ ಸ್ಥಾನದಿಂದ ನಿರ್ಗಮಿಸಿದ ರವಿಶಾಸ್ತ್ರಿ: ಪ್ರಮುಖ ಸಾಧನೆಗಳು ಇಲ್ಲಿದೆ

ಐಪಿಎಲ್ 2021ರ ಆವೃತ್ತಿಗೂ ಮುನ್ನ ನಾಯಕನಾಗಿದ್ದ ಸ್ಟೀವ್ ಸ್ಮಿತ್ ಅವರನ್ನು ತಮಡ ಬಿಡುಗಡೆಗೊಳಿಸಿದ ನಂತರ ನಾಯಕತ್ವದ ಜವಾಬ್ಧಾರಿಯನ್ನು ಸಂಜುಗೆ ವಹಿಸಲಾಗಿತ್ತು. ಸಂಜು ಸ್ಯಾಮ್ಸನ್ ಅಮೋಘ ಫಾರ್ಮ್‌ನಲ್ಲಿದ್ದರೂ ತಂಡದ ಪ್ರದರ್ಶನ ಮಾತ್ರ ಕಳಪೆಯಾಗಿಯೇ ಮುಂದಿವರಿದಿತ್ತು. 7ನೇ ಸ್ಥಾನವನ್ನು ಪಡೆದುಕೊಂಡು ಟೂರ್ನಿಯಿಂದ ಆರ್‌ಆರ್ ನಿರ್ಗಮಿಸಿತ್ತು.

Team India ಹೊಸ ರೂಪ ಪಡೆದುಕೊಂಡಿದೆ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Tuesday, November 9, 2021, 23:47 [IST]
Other articles published on Nov 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X