ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಲಕ್ನೋ ಸೂಪರ್ ಜೈಂಟ್ಸ್ ಯೋಜನೆ ಬುಡಮೇಲು ಮಾಡಿದ ಬಾಂಗ್ಲಾ ಕ್ರಿಕೆಟ್ ಮಂಡಳಿ

IPL 2022: BCB says Won’t give NOC to Taskin Ahmed to join LSG as replacement for Mark Wood

ಈ ಬಾರಿಯ ಐಪಿಎಲ್‌ನಲ್ಲಿ ಮಾರ್ಕ್‌ವುಡ್ ಸ್ಥಾನಕ್ಕೆ ಬದಲಿ ಆಟಗಾರನಾಗಿ ಬಾಂಗ್ಲಾದೇಶದ ವೇಗಿಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಲಕ್ನೋ ಸೂಪರ್ ಜೈಂಟ್ಸ್ ತಂಡ ಯೋಜನೆ ರೂಪಿಸಿತ್ತು. ಬಾಂಗ್ಲಾದೇಶ ಕ್ರಿಕೆಟ್ ತಂಡದ ವೇಗದ ಬೌಲರ್ ಟಸ್ಕಿನ್ ಅಹ್ಮದ್ ಅವರನ್ನು ಸೇರ್ಪಡೆಗೊಳಿಸಲು ಅವರೊಂದಿಗೆ ಮಾತುಕತೆ ಕೂಡ ನಡೆಸಿತ್ತು. ಆದರೆ ಲಕ್ನೋ ಫ್ರಾಂಚೈಸಿಯ ಯೋಜನೆಯನ್ನು ಅಲ್ಲಿನ ಮಂಡಳಿ ಬುಡಮೇಲುಗೊಳಿಸಿದೆ.

ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟಸ್ಕನ್ ಅಹ್ಮದ್ ಅವರಿಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಿರಾಕ್ಷೇಪಣ ಪತ್ರವನ್ನು(NOC) ನೀಡುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ ಬಾಂಗ್ಆ ವೇಗಿಯನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನದಲ್ಲಿ ಲಕ್ನೋ ಮೂಲದ ಫ್ರಾಂಚೈಸಿಗೆ ಹಿನ್ನಡೆಯಾಗಿದೆ.

ತಂಡಗಳು ಸ್ಮರಿಸಲು ಇಷ್ಟ ಪಡದಿರುವ ಕೆಟ್ಟ ದಾಖಲೆ: ಬೇಡದ ದಾಖಲೆಯಲ್ಲೂ ಆರ್‌ಸಿಬಿಯೇ ಮುಂದು!ತಂಡಗಳು ಸ್ಮರಿಸಲು ಇಷ್ಟ ಪಡದಿರುವ ಕೆಟ್ಟ ದಾಖಲೆ: ಬೇಡದ ದಾಖಲೆಯಲ್ಲೂ ಆರ್‌ಸಿಬಿಯೇ ಮುಂದು!

ಈ ವಿಚಾರವಾಗಿ ಕ್ರಿಕ್ ಬಜ್ ಬಾಂಗ್ಲಾದೇಶದ ಕ್ರಿಕೆಟ್ ಕಾರ್ಯಾಚರನೆಗಳ ಮುಖ್ಯಸ್ಥ ಜಲಾಲ್ ಯೂನುಸ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ. ಈ ಹೇಳಿಕೆಯಲ್ಲಿ ಜಲಾಲ್ ಯೂನುಸ್ "ನಾವು ಪ್ರಸ್ತುತ ಬಹಳ ಮುಖ್ಯವಾದ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದೇವೆ. ಈ ಸಂದರ್ಭದಲ್ಲಿ ಆತ ಐಪಿಎಲ್‌ನಲ್ಲಿ ಭಾಗವಹಿಸುವುದು ಆತನಿಗೂ ಒಳ್ಳೆಯದು ಎಂದು ನಮಗೆ ಅನಿಸುತ್ತಿಲ್ಲ" ಎಂದು ಅವರು ಹೇಳಿದ್ದಾರೆ.

ನಾವು ಟಸ್ಕಿನ್ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ಆತ ಸಂಪೂರ್ಣ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದಾರೆ. ಅವರು ಐಪಿಎಲ್ ಫ್ರಾಂಚೈಸಿಗೆ ತಾನು ಐಪಿಎಲ್‌ನಲ್ಇ ಭಾಗಿಯಾಗಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಅವರು ಲಭ್ಯವಾಗಲಿದ್ದು ಸರಣಿ ಪೂರ್ಣಗೊಂಡ ಬಳಿಕ ತವರಿಗೆ ವಾಪಾಸದಾಗಲಿದ್ದಾರೆ" ಎಂದಿದ್ದಾರೆ.

ಲಕ್ನೋ ಸೂಪರ್‌ಜೈಂಟ್ಸ್ ತಂಡದ ಪ್ರಮುಖ ವೇಗದ ಬೌಲರ್ ಮಾರ್ಕ್‌ ವುಡ್ ಗಾಯದ ಕಾರಣದಿಂದ ಸಂಪೂರ್ಣ ಟೂರ್ನಿಯಿಂದ ಹೊರಬಿದ್ದ ಕಾರಣ ಲಕ್ನೋ ಸೂಪರ್ ಜೈಂಟ್ಸ್ ತಂಡ ಮಾರ್ಕ್ ವುಡ್‌ಗೆ ಬದಲಿ ಆಟಗಾರನ ಹುಡುಕಾಟದಲ್ಲಿದೆ. ಈ ಸಂದರ್ಭದಲ್ಲಿ ಎಲ್‌ಎಸ್‌ಜಿ ಫ್ರಾಂಚೈಸಿ ಬಾಂಗ್ಲಾದೇಶದ ವೇಗದ ಬೌಲರ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿತ್ತು.

"ಆ ತಂಡದ ಕಾರಣ ಆತ ಹಾಗಾಗಿದ್ದ" : ಕೆಎಲ್ ರಾಹುಲ್ ಬಗ್ಗೆ ಆಕಾಶ್ ಚೋಪ್ರ ಹೇಳಿಕೆ

ಇಂಗ್ಲೆಂಡ್ ತಂಡದ ವೇಗದ ಬೌಲರ್‌ ಮಾರ್ಕ್ ವುಡ್ ಕಳೆದ ಫೆಬ್ರವರಿ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಸಾಕಷ್ಟು ಬೇಡಿಕೆಯನ್ನು ಹೊಂದಿದ್ದರು. ಅಂತಿಮವಾಗಿ ಮಾರ್ಕ್‌ ವುಡ್ ಅವರನ್ನು ಲಕ್ನೋ ಸೂಪರ್‌ಜೈಂಟ್ಸ್ ತಂಡ 7.5 ಕೋಟಿ ನೀಡಿ ಖರೀದಿಸಿತ್ತು. ಆದರೆ ಇಂಗ್ಲೆಂಡ್ ತಂಡದ ಪರವಾಗಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಮಾರ್ಕ್‌ ವುಡ್ ಮೊಣಕೈ ಗಾಯಕ್ಕೆ ತುತ್ತಾಗಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ಸಂಪೂರ್ಣ ಸ್ಕ್ವಾಡ್: ಕೆಎಲ್ ರಾಹುಲ್, ಮಾರ್ಕಸ್ ಸ್ಟೊಯಿನಿಸ್, ರವಿ ಬಿಷ್ಣೋಯ್, ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಮನೀಶ್ ಪಾಂಡೆ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಅವೇಶ್ ಖಾನ್, ಅಂಕಿತ್ ರಜಪೂತ್, ಕೆ ಗೌತಮ್, ದುಷ್ಮಂತ ಚಮೀರಾ, ಶಹಬಾಜ್ ನದೀಮ್, ಮನನ್ ವೋಹ್ರಾ, ಮೊಹ್ಸಿನ್ ಖಾನ್, ಆಯುಷ್ ಬಡೋನಿ, ಆಯುಷ್ ಬಡೋನಿ, ಶರ್ಮಾ, ಎವಿನ್ ಲೂಯಿಸ್, ಮಯಾಂಕ್ ಯಾದವ್, ಕೈಲ್ ಮೇಯರ್ಸ್.

Virat Kohli ತಮ್ಮ ಹೊಸ ನಾಯಕನ ಬಗ್ಗೆ ಹೇಳಿದ್ದೇನು ? | Oneindia Kannada

Story first published: Monday, March 21, 2022, 20:31 [IST]
Other articles published on Mar 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X