ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

CSK vs RCB: ಪಂದ್ಯದ ವೇಳೆ ಕೊಹ್ಲಿಗೆ ಚೆಂಡಿನಿಂದ ಹೊಡೆದು ಕ್ಷಮೆಯಾಚಿಸಿದ ಸಿಎಸ್‌ಕೆ ಯುವ ಆಟಗಾರ

IPL 2022: CSK bowler Mukesh Choudhary hits Virat Kohli during the match and apologises immediately
Kohli ಹಾಗು Lomror ನಡುವೆ ನಡೆದಿದ್ದೇನು | Oneindia Kannada

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 49ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿದ್ದು 13 ರನ್‌ಗಳ ಗೆಲುವನ್ನು ಸಾಧಿಸಿ ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನು ಜೀವಂತವಾಗಿರಿಸಿಕೊಂಡಿದೆ.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಏರಿಕೆಯನ್ನು ಕಂಡಿದ್ದು, ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದರೆ, ಪಂದ್ಯದಲ್ಲಿ ಸೋತ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ಇನ್ನು ಇದೇ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಆಟಗಾರ ಚೆಂಡಿನಿಂದ ಹೊಡೆದ ಘಟನೆ ನಡೆದಿದೆ.

ಚೆನ್ನೈಗೆ ಮಣ್ಣುಮುಕ್ಕಿಸಿದ ಆರ್‌ಸಿಬಿ ಪ್ಲೇಆಫ್ ಪ್ರವೇಶಿಸಲು ಇನ್ನೂ ಇಷ್ಟು ಪಂದ್ಯಗಳಲ್ಲಿ ಗೆಲ್ಲಲೇಬೇಕು!ಚೆನ್ನೈಗೆ ಮಣ್ಣುಮುಕ್ಕಿಸಿದ ಆರ್‌ಸಿಬಿ ಪ್ಲೇಆಫ್ ಪ್ರವೇಶಿಸಲು ಇನ್ನೂ ಇಷ್ಟು ಪಂದ್ಯಗಳಲ್ಲಿ ಗೆಲ್ಲಲೇಬೇಕು!

ಹೌದು, ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ನಾಯಕ ಫಾಫ್ ಡು ಪ್ಲೆಸಿಸ್ ಜೊತೆ ಆರಂಭಿಕನಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಬೌಲರ್ ಮುಖೇಶ್ ಚೌಧರಿ ಎಸೆದ ಎಸೆತಕ್ಕೆ ಮುನ್ನುಗ್ಗಿ ಹೊಡೆತವನ್ನು ಬಾರಿಸಿದರು ಹಾಗೂ ಚೆಂಡು ಬೌಲರ್ ಮುಖೇಶ್ ಚೌಧರಿ ಕೈಸೇರಿತ್ತು. ಹೀಗೆ ಚೆಂಡು ಮುಖೇಶ್ ಚೌಧರಿ ಕೈ ಸೇರಿದ್ದನ್ನು ಗಮನಿಸಿದ ವಿರಾಟ್ ಕೊಹ್ಲಿ ತಕ್ಷಣವೇ ಹಿಂದಿರುಗಿ ಕ್ರೀಸ್ ಸೇರಲು ಯತ್ನಿಸಿದರು. ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯವರನ್ನು ರನ್ ಔಟ್ ಮಾಡಲು ಪ್ರಯತ್ನಿಸಿದ ಮುಖೇಶ್ ಚೌಧರಿ ಚೆಂಡನ್ನು ವಿಕೆಟ್‌ನತ್ತ ಜೋರಾಗಿ ಎಸೆದರು. ಆದರೆ ವಿಕೆಟ್ ಮುಂದೆಯೇ ಇದ್ದ ವಿರಾಟ್ ಕೊಹ್ಲಿಗೆ ಚೆಂಡು ವೇಗವಾಗಿ ಬಡಿಯಿತು ಮತ್ತು ತಕ್ಷಣವೇ ಇಚ್ಚೆತ್ತ ಮುಖೇಶ್ ಚೌಧರಿ ವಿರಾಟ್ ಕೊಹ್ಲಿಗೆ ಕ್ಷಮೆಯಾಚಿಸಿದರು. ಮುಖೇಶ್ ಚೌಧರಿ ವಿರಾಟ್ ಕೊಹ್ಲಿಗೆ ಚೆಂಡಿನಿಂದ ಹೊಡೆದ ವಿಡಿಯೋ ತುಣುಕು ಮುಂದೆ ಇದೆ ನೋಡಿ.

ಇನ್ನು ಚೆಂಡು ಬಿದ್ದ ನಂತರ ವಿರಾಟ್ ಕೊಹ್ಲಿ ಇದು ಉದ್ದೇಶಪೂರ್ವಕವಾಗಿ ಹೊಡೆದದ್ದಲ್ಲ ಎಂಬುದನ್ನು ಅರಿತು ನಗುತ್ತಲೇ ಮುಖೇಶ್ ಚೌಧರಿಯನ್ನು ನೋಡಿದರು. ಇನ್ನು ವಿರಾಟ್ ಕೊಹ್ಲಿಯ ಈ ನಡೆ ಸದ್ಯ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದು ಓರ್ವ ಯುವ ಕ್ರಿಕೆಟಿಗ ಅರಿಯದೇ ತಪ್ಪು ಮಾಡಿದಾಗ ಅನುಭವಿ ಕ್ರಿಕೆಟಿಗ ಈ ರೀತಿ ನಡೆದುಕೊಳ್ಳಬೇಕೆ ವಿನಃ ಕೋಪಗೊಳ್ಳಬಾರದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹೇಳಿಕೊಳ್ಳುವಂತ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 33 ಎಸೆತಗಳನ್ನು ಎದುರಿಸಿ 30 ರನ್ ಕಲೆಹಾಕಿದ್ದು ಟಿ ಟ್ವೆಂಟಿ ಕ್ರಿಕೆಟ್‌ಗೆ ಬೇಕಾದ ಸ್ಪೋಟಕ ಆಟ ಆಡುವಲ್ಲಿ ವಿಫಲರಾಗಿ ಮೊಯಿನ್ ಅಲಿಗೆ ವಿಕೆಟ್ ಒಪ್ಪಿಸಿದರು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖೇಶ್ ಚೌಧರಿ 3 ಓವರ್ ಬೌಲಿಂಗ್ ಮಾಡಿ 30 ರನ್ ನೀಡಿ ಯಾವುದೇ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ.

ಮುಖೇಶ್ ಚೌಧರಿ ಕಿರು ಪರಿಚಯ:

ಈ ಬಾರಿಯ ಆವೃತ್ತಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಪದಾರ್ಪಣೆ ಮಾಡಿದ ಮುಖೇಶ್ ಚೌಧರಿ ಇಲ್ಲಿಯವರೆಗೂ ಒಟ್ಟು 9 ಪಂದ್ಯಗಳನ್ನಾಡಿ 13 ವಿಕೆಟ್ ಪಡೆದಿದ್ದಾರೆ. ರಾಜಸ್ಥಾನದ ಬಿಲ್ವಾರಾದ ಪರ್ದೋದಸ್‌ನಲ್ಲಿ ಜನಿಸಿದ ಮುಖೇಶ್ ಚೌಧರಿ ಮಹಾರಾಷ್ಟ್ರ ತಂಡದ ಆಟಗಾರನಾಗಿ ಕಣಕ್ಕಿಳಿದಿರುವ ಅನುಭವವನ್ನು ಹೊಂದಿದ್ದು, ಇದೇ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಪದಾರ್ಪಣೆ ಮಾಡಿದ್ದಾರೆ.

Story first published: Thursday, May 5, 2022, 11:47 [IST]
Other articles published on May 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X