CSK vs RCB ಈ ಮೈಲಿಗಲ್ಲು, ದಾಖಲೆಗಳ ಮೇಲೆ ಧೋನಿ, ದಿನೇಶ್ ಕಾರ್ತಿಕ್ ಮತ್ತು ಕೊಹ್ಲಿ ಕಣ್ಣು

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆಯಲಿರುವ 49ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಲಿದ್ದು, ಇತ್ತಂಡಗಳೂ ಪ್ಲೇಆಫ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕೆಂದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಇನ್ನು ಇತ್ತಂಡಗಳ ನಡುವೆ ಇದೇ ಆವೃತ್ತಿಯಲ್ಲಿ ನಡೆದಿದ್ದ ಪ್ರಥಮ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ ಶಿವಮ್ ದುಬೆ ಮತ್ತು ರಾಬಿನ್ ಉತ್ತಪ್ಪ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹಾಗೂ ಆ ಪಂದ್ಯದಲ್ಲಿ ಎರಡೂ ತಂಡಗಳೂ ಸಹ ರನ್ ಹೊಳೆಯನ್ನೇ ಹರಿಸಿದ್ದವು. ಅದೇ ರೀತಿ ಈ ಪಂದ್ಯದಲ್ಲಿಯೂ ಸಹ ಬೃಹತ್ ರನ್ ಹೊಳೆ ಹರಿಯುವ ಸಾಧ್ಯತೆಗಳಿದ್ದು, ಇದರ ಜೊತೆಗೆ ಇತ್ತಂಡಗಳ ಕೆಲ ಆಟಗಾರರು ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ವೈಯಕ್ತಿಕ ದಾಖಲೆಗಳನ್ನು ನಿರ್ಮಿಸುವ ಹಾಗೂ ಮೈಲಿಗಲ್ಲನ್ನು ನೆಡುವತ್ತ ಕಣ್ಣಿಟ್ಟಿದ್ದಾರೆ. ಹೀಗೆ ಈ ಪಂದ್ಯದಲ್ಲಿ ನಿರ್ಮಾಣವಾಗಬಹುದಾದ ದಾಖಲೆಗಳ ಪಟ್ಟಿ ಈ ಕೆಳಕಂಡಂತಿದೆ.
* ಟಿ ಟ್ವೆಂಟಿ ಕ್ರಿಕೆಟ್‌ನಲ್ಲಿ ಇಲ್ಲಿಯವರೆಗೂ ಒಟ್ಟು 199 ಕ್ಯಾಚ್‌ಗಳನ್ನು ಹಿಡಿದಿರುವ ದಿನೇಶ್ ಕಾರ್ತಿಕ್, 200 ಕ್ಯಾಚ್‌ಗಳ ಮೈಲಿಗಲ್ಲನ್ನು ಪೂರೈಸಲು ಈ ಪಂದ್ಯದಲ್ಲಿ ಇನ್ನೊಂದು ಕ್ಯಾಚ್ ಹಿಡಿಯಬೇಕಾದ ಅನಿವಾರ್ಯತೆಯಿದೆ. ಹಾಗೂ ದಿನೇಶ್ ಕಾರ್ತಿಕ್ 200 ಟಿ ಟ್ವೆಂಟಿ ಕ್ಯಾಚ್‌ಗಳನ್ನು ಹಿಡಿದ ಭಾರತದ ಎರಡನೇ ವಿಕೆಟ್ ಕೀಪರ್ ಎಂಬ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
* 2499 ಐಪಿಎಲ್ ರನ್‌ಗಳನ್ನು ಬಾರಿಸಿರುವ ರವೀಂದ್ರ ಜಡೇಜಾ ಈ ಪಂದ್ಯದಲ್ಲಿ ಇನ್ನೊಂದು ರನ್ ಬಾರಿಸಿದರೆ 2500 ರನ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ. ಈ ಮೂಲಕ ರವೀಂದ್ರ ಜಡೇಜಾ 2500+ ಐಪಿಎಲ್ ರನ್ ಹಾಗೂ 100+ ಐಪಿಎಲ್ ವಿಕೆಟ್ ಪಡೆದ ಮೊದಲ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ.
* ಈ ಪಂದ್ಯದಲ್ಲಿ ಅಂಬಾಟಿ ರಾಯುಡು 4 ಬೌಂಡರಿಗಳನ್ನು ಬಾರಿಸಿದರೆ 350 ಐಪಿಎಲ್ ಬೌಂಡರಿ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
* ಈ ಪಂದ್ಯದಲ್ಲಿ ಮೊಯಿನ್ ಅಲಿ 4 ಸಿಕ್ಸರ್ ಸಿಡಿಸಿದರೆ 50 ಐಪಿಎಲ್ ಸಿಕ್ಸರ್ ಬಾರಿಸಿದ ಆಟಗಾರ ಎಂಬ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
* ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೂ ಒಟ್ಟು 4995 ಎಸೆತಗಳನ್ನು ಎದುರಿಸಿರುವ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 5 ಎಸೆತಗಳಿಗೆ ಬ್ಯಾಟ್ ಬೀಸಿದರೆ 5000 ಐಪಿಎಲ್ ಎಸೆತಗಳನ್ನು ಎದುರಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ.
* ಎಂಎಸ್ ಧೋನಿ ಈ ಪಂದ್ಯದ ಮೂಲಕ 200 ಐಪಿಎಲ್ ಪಂದ್ಯಗಳನ್ನು ಪೂರೈಸಲಿದ್ದು, ವಿರಾಟ್ ಕೊಹ್ಲಿ ನಂತರ 200 ಐಪಿಎಲ್ ಪಂದ್ಯದಲ್ಲಿ ಕಣಕ್ಕಿಳಿದ ಎರಡನೇ ಆಟಗಾರ ಎಂಬ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
* ವಿರಾಟ್ ಕೊಹ್ಲಿ 6469 ಐಪಿಎಲ್ ರನ್ ಬಾರಿಸಿದ್ದು ಈ ಪಂದ್ಯದಲ್ಲಿ 31 ರನ್ ಬಾರಿಸಿದರೆ 6500 ಐಪಿಎಲ್ ರನ್ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications