ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ ಈಗ 3D ಅಲ್ಲ 4D ಆಟಗಾರ: ಭಾರತೀಯ ಕ್ರಿಕೆಟಿಗನ ಬಗ್ಗೆ ಹೊಗಳಿಕೆಯ ಸುರಿಮಳೆಗೈದ ಕಿರಣ್ ಮೋರೆ

IPL 2022: Former cricketer Kiran More said Hardik Pandya id 4D cricketer now

ಈ ಬಾರಿಯ ಐಪಿಎಲ್ ಮುಕ್ತಾಯವಾದ ಬಳಿಕ ಟೂರ್ನಿಯಲ್ಲಿ ನೀಡಿದ ಅದ್ಭುತ ಪ್ರದರ್ಶನದ ಕಾರಣಕ್ಕೆ ಹಲವು ಆಟಗಾರರ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಮಾಜಿ ಕ್ರಿಕೆಟಿಗರು ಕ್ರಿಕೆಟ್ ವಿಶ್ಲೇಷಕರು ತಮ್ಮದೇ ಕಾರಣಗಳನ್ನು ನೀಡಿ ಆಟಗಾರರ ಪ್ರದರ್ಶನವನ್ನು ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದಾರೆ. ಇದೀಗ ಮಾಜಿ ವಿಕೆಟ್ ಕೀಪರ್ ಹಾಗೂ ಮಾಜಿ ಆಯ್ಕೆಗಾರಲ್ಲಿ ಒಬ್ಬರಾಗಿರುವ ಕಿರಣ್ ಮೋರೆ ಐಪಿಎಲ್‌ನಲ್ಲಿ ಓರ್ವ ಆಟಗಾರನ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದು ಆತ ನಾಲ್ಕು ಆಯಾಮದ ಆಟಗಾರ ಎಂದು ಬಣ್ಣಿಸಿದ್ದಾರೆ.

ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬಗ್ಗೆಯೇ ಕಿರಣ್ ಮೋರೆ ಇಂಥಾ ವಿಶೇಷ ಮಾತುಗಳನ್ನಾಡಿರುವುದು. ನಾಯಕನಾಗಿ ಹಾಗೂ ಆಟಗಾರನಾಗಿ ಹಾರ್ದಿಕ್ ಪಾಂಡ್ಯ ನೀಡಿದ ಅದ್ಭುತ ಪ್ರದರ್ಶನಕ್ಕೆ ಮರುಳಾಗಿರುವ ಕಿರಣ್ ಮೋರೆ ಪ್ರಶಂಸೆಯ ಸುರಿಮಳೆಗೈಯ್ದಿದ್ದಾರೆ.

ಹಾರ್ದಿಕ್ ಪಾಂಡ್ಯರನ್ನು ಎಂಎಸ್ ಧೋನಿಯ ಜೂನಿಯರ್ ಆವೃತ್ತಿ ಎಂದ ಟೈಟನ್ಸ್ ಬೌಲರ್ಹಾರ್ದಿಕ್ ಪಾಂಡ್ಯರನ್ನು ಎಂಎಸ್ ಧೋನಿಯ ಜೂನಿಯರ್ ಆವೃತ್ತಿ ಎಂದ ಟೈಟನ್ಸ್ ಬೌಲರ್

ಪಾಂಡ್ಯ ಬಗ್ಗೆ ಮೋರೆ ಮೆಚ್ಚುಗೆ

ಪಾಂಡ್ಯ ಬಗ್ಗೆ ಮೋರೆ ಮೆಚ್ಚುಗೆ

ಐಪಿಎಲ್ 2022ರ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಪ್ರದರ್ಶನದ ಬಗ್ಗೆ ಮಾತನಾಡಿರುವ ಕಿರಣ್ ಮೋರೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈಗ ಹಾರ್ದಿಕ್ ಪಾಂಡ್ಯ 3D ಕ್ರಿಕೆಟರ್ ಸ್ಥಾನದಿಂದ 4D ಸ್ಥಾನಕ್ಕೆ ಬೆಳವಣಿಗೆ ಕಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಸ್‌ಜಿ ಪಾಡ್‌ಕಾಸ್ಟ್‌ ಜೊತೆಗೆ ಮಾತನಾಡಿದ ಸಂದರ್ಭದಲ್ಲಿ 59ರ ಹರೆಯದ ಕಿರಣ್ ಮೋರೆ ಈ ಮಾತುಗಳನ್ನಾಡಿದ್ದಾರೆ.

ಪಾಂಡ್ಯ ಆರಂಭಿಕ ದಿನಗಳನ್ನು ನೆನೆದ ಕಿರಣ್ ಮೋರೆ

ಪಾಂಡ್ಯ ಆರಂಭಿಕ ದಿನಗಳನ್ನು ನೆನೆದ ಕಿರಣ್ ಮೋರೆ

ಈ ಸಂದರ್ಭದಲ್ಲಿ ಕಿರಣ್ ಮೋರೆ ಪಾಂಡ್ಯ ಸೋದರರ ಬಾಲ್ಯದ ಕ್ರಿಕೆಟ್ ಬದುಕಿನ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. "ಆತನಿಗೆ ಕ್ರಿಕೆಟ್ ಆಡುವ ಹುಮ್ಮಸ್ಸಿತ್ತು. ಹಾರ್ದಿಕ್ ಸೋದರ ಕೃನಾಲ್ ಪಾಂಡ್ಯ ನನ್ನ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡಿದ್ದ. ಆ ಸಂದರ್ಭದಲ್ಲಿ ಹಾರ್ದಿಕ್ ಮೈದಾನದ ಸುತ್ತಲೂ ಓಡಾಡುತ್ತಾ ಇದ್ದ. ನೆಟ್ಸ್‌ನ ಹಿಂದೆ ಓಡುತ್ತಾ, ಕ್ಯಾಚ್ ಹಿಡಿಯುತ್ತಾ ಇರುತ್ತಿದ್ದ. ಆ ಸಂದರ್ಭದಲ್ಲಿ ನಾನು ಆತನನ್ನು ಕೂಡ ನೆಟ್ಸ್‌ಗೆ ಕರೆದುಕೊಂಡು ಬಾ ಎಂದಿದ್ದೆ. ಅಂದು ಆತನಲ್ಲಿನ ಕ್ರಿಕೆಟ್ ಬಗೆಗಿನ ಹಸಿವನ್ನು ಕಂಡಿದ್ದೆ" ಎಂದಿದ್ದಾರೆ ಕಿರಣ್ ಮೋರೆ.

ಆತ ಈಗ 4D ಆಟಗಾರ

ಆತ ಈಗ 4D ಆಟಗಾರ

"ನನ್ನ ಪಾಲಿಗೆ ಹಾರ್ದಿಕ್ ಇನ್ನೂ ಸಣ್ಣ ಹುಡುಗ. ಆತನಿಂದ ಇನ್ನೂ ಅದ್ಭುತ ಪ್ರದರ್ಶನವನ್ನು ನಾನು ನಿರೀಕ್ಷಿಸುತ್ತಿದ್ದೇನೆ. ಈಗ ಆತನನ್ನು ನಾನು ನಾಲ್ಕು ಆಯಾಮದ ಆಟಗಾರ ಎಂದು ಹೇಳಲು ಬಯಸುತ್ತೇನೆ. ಇದಕ್ಕೂ ಮುನ್ನ ಆತ ಬೌಲಿಂಗ್, ಬ್ಯಾಟಿಂಗ್ ಹಾಗೂ ಫಿಲ್ಡಿಂಗ್ ಮಾಡುವ ಮೂಲಕ ಮೂರು ಆಯಾಮದ ಆಟಗಾರನಾಗಿದ್ದ. ಈಗ ಆತ ನಾಯಕತ್ವದ ಜವಾಬ್ಧಾರಿಯನ್ನು ಕೂಡ ವಹಿಸಿಕೊಂಡಿದ್ದಾನೆ" ಎಂದಿದ್ದಾರೆ ಕಿರಣ್ ಮೋರೆ.

Siraj ಐಪಿಎಲ್ ಬಳಿಕ Rohit Sharma ಬಗ್ಗೆ ಹೇಳಿದ್ದೇನು | Oneindia Kannada
ನಾಯಕನಾಗಿ, ಆಟಗಾರನಾಗಿ ಮಿಂಚಿದ ಹಾರ್ದಿಕ್

ನಾಯಕನಾಗಿ, ಆಟಗಾರನಾಗಿ ಮಿಂಚಿದ ಹಾರ್ದಿಕ್

ಈ ಬಾರಿಯ ಐಪಿಎಲ್‌ನಲ್ಲಿ ಚೊಚ್ಚಲ ಬಾರಿಗೆ ಐಪಿಎಲ್ ತಂಡದ ನಾಯಕತ್ವ ವಹಿಸಿಕೊಂಡ ಹಾರ್ದಿಕ್ ಪಾಂಡ್ಯ ತಮ್ಮ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. 15 ಪಂದ್ಯಗಳನ್ನಾಡಿರುವ ಹಾರ್ದಿಕ್ ಪಾಂಡ್ಯ 487 ರನ್‌ಗಳನ್ನು ಗಳಿಸಿ ಮಿಂಚಿದ್ದಾರೆ. 44.27ರ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿರುವ ಹಾರ್ದಿಕ್ ಪಾಂಡ್ಯ ನಾಲ್ಕು ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ ಒಟ್ಟು 9 ವಿಕೆಟ್ ಸಂಪಾದಿಸಿರುವ ಹಾರ್ದಿಕ್ ಫೈನಲ್ ಪಂದ್ಯದಲ್ಲಿ 3 ವಿಕೆಟ್ ಸಂಪಾದಿಸಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.

Story first published: Friday, June 3, 2022, 18:02 [IST]
Other articles published on Jun 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X