ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಚೆನ್ನೈ ಸೂಪರ್ ಕಿಂಗ್ಸ್ ಕಮ್‌ಬ್ಯಾಕ್ ಮೇಲೆ ಭರವಸೆ ವ್ಯಕ್ತಪಡಿಸಿದ ಕ್ರಿಕೆಟ್ ದಿಗ್ಗಜ

IPL 2022: Former cricketer Sunil Gavaskar said CSK can still turn it around

ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದರೂ ಕಳಪೆ ಪ್ರದರ್ಶನ ನೀಡಿ ಸಂಕಷ್ಟದಲ್ಲಿದೆ. ಸತತ ಸೋಲಿನ ಕಾರಣದಿಂದಾಗಿ ನಾಯಕನಾಗಿದ್ದ ರವೀಂದ್ರ ಜಡೇಜಾ ಎಂಎಸ್ ಧೋನಿಗೆ ನಾಯಕತ್ವ ಮರಳಿಸಿದ್ದಾರೆ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಗೆಲುವು ಸಾಧಿಸಲು ಯಶಸ್ವಿಯಾಗಿದ್ದು ಬುಧವಾರ ಆರ್‌ಸಿಬಿ ವಿರುದ್ಧ ಸೆಣೆಸಾಡಲು ಸಜ್ಜಾಗಿದೆ.

ಈವರೆಗೆ ಆಡಿರುವ 9 ಪ೦ದ್ಯಗಳ ಪೈಕಿ ಕೇವಲ 3 ಗೆಲುವು ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟೂರ್ನಿಯಿಂದ ಹೊರಬೀಳುವ ಹಂತದಲ್ಲಿದೆ. ಮುಂದಿನ ಹಂತಕ್ಕೇರಬೇಕಾದರೆ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಜೊತೆಗೆ ಅದೃಷ್ಟ ಕೂಡ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸಾಥ್ ನೀಡಬೇಕಿದೆ. ಹಾಗಿದ್ದರೂ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಭಾರೀ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಸಿಎಸ್‌ಕೆ ತಂಡ ಈ ಹಂತದಿಂದಲೂ ಮೇಲೆದ್ದು ಬರುವ ಕ್ಷಮತೆಯನ್ನು ಹೊಂದಿದೆ ಎಂದಿದ್ದಾರೆ ಸುನಿಲ್ ಗವಾಸ್ಕರ್.

IPL 2022: ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆದು, ಫ್ಲೈಯಿಂಗ್ ಕಿಸ್ ಕೊಟ್ಟ ರಿಷಿ ಧವನ್IPL 2022: ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆದು, ಫ್ಲೈಯಿಂಗ್ ಕಿಸ್ ಕೊಟ್ಟ ರಿಷಿ ಧವನ್

"ಸಿಎಸ್‌ಕೆ ತಂಡ ಹಿನ್ನಡೆಯನ್ನು ಅನುಭವಿಸುತ್ತಿದ್ದರೂ ಅವರಿಗೆ ಕಮ್‌ಬ್ಯಾಕ್ ಹೇಗೆ ಮಾಡಬೇಕೆಂಬುದು ಚೆನ್ನಾಗಿ ತಿಳಿದಿದೆ. ಈ ಕಮ್‌ಬ್ಯಾಕ್‌ಅನ್ನು ಆದಷ್ಟು ಶೀಘ್ರವಾಗಿ ಅವರು ಮಾಡಬೇಕಿದೆ" ಎಂದು ಸುನಿಲ್ ಗವಾಸ್ಕರ್ ಸ್ಟಾರ್‌ಸ್ಪೋರ್ಟ್ಸ್‌ನ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ.

ಇನ್ನು ಸಿಎಸ್‌ಕೆ ಕಮ್‌ಬ್ಯಾಕ್ ಮಾಡುವ ಸಾಧ್ಯತೆಯ ಬಗ್ಗೆ ಮಾತನಾಡುತ್ತಾ ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡದ ಕಮ್‌ಬ್ಯಾಕ್‌ಅನ್ನು ಗವಾಸ್ಕರ್ ಉದಾಹರಿಸಿದ್ದಾರೆ. "ಕಳೆದ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಯಾವ ರೀತಿ ಕಮ್‌ಬ್ಯಾಕ್ ಮಾಡಿರು ಎಂಬುದನ್ನು ನಾವು ನೋಡಿದ್ದೇವೆ. ಟೂರ್ನಿ ಭಾರತದಲ್ಲಿ ನಡೆದಿದ್ದಾಗ ಕೆಕೆಆರ್ ಸಂಪೂರ್ಣವಾಗಿ ಮಂಕಾಗಿತ್ತು. ಆದರೆ ಯುಎಇನಲ್ಲಿ ಎಲ್ಲಾ ಪಂದ್ಯಗಳನ್ನು ಗೆಲ್ಲುತ್ತಾ ಸಾಗಿದ ಕೆಕೆಆರ್ ಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು" ಎಂದಿದ್ದಾರೆ ಸುನಿಲ್ ಗವಾಸ್ಕರ್.

ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದ ಚಾಂಪಿಯನ್ ಶಿಪ್ ಗೆದ್ದ ಜೈನ್ ವಿಶ್ವವಿದ್ಯಾಲಯಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದ ಚಾಂಪಿಯನ್ ಶಿಪ್ ಗೆದ್ದ ಜೈನ್ ವಿಶ್ವವಿದ್ಯಾಲಯ

ಈ ಬಾರಿಯ ಟೂರ್ನಿಯ ಆರಂಭಕ್ಕೆ ಕೆಲವೇ ದಿನಗಳಿರುವಾದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಎಂಎಸ್ ಧೋನಿ ತೊರೆದು ರವೀಂದ್ರ ಜಡೇಜಾಗೆ ಒಪ್ಪಿಸಿದ್ದರು. ಆದರೆ ಜಡೇಜಾ ನಾಯಕತ್ವದಲ್ಲಿ ಸಿಎಸ್‌ಕೆ ಸತತ ವೈಫಲ್ಯವನ್ನು ಅನುಭವಿಸಿತು. ಅಲ್ಲದೆ ಸ್ವತಃ ರವೀಂದ್ರ ಜಡೇಜಾ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಎಲ್ಲಾ ವಿಭಾಗದಲ್ಲಿಯೂ ವಿಫಲವಾದರು. ಹೀಗಾಗಿ ಜಡೇಜಾ ನಾಯಕತ್ವವನ್ನು ಮತ್ತೆ ಎಂಎಸ್ ಧೋನಿಗೆ ಮರಳಿಸಿದ್ದಾರೆ.

Dhoni ಹಾಗು Faf ನಡುವೆ ಟಾಸ್‌ನಲ್ಲಿ ನಡೆದಿದ್ದೇನು | Oneindia Kannada

ಇನ್ನು ಧೋನಿ ನಾಯಕತ್ವದ ಬಗ್ಗೆ ಸುನಿಲ್ ಗವಾಸ್ಕರ್ ಮಾತ್ರವಲ್ಲದೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಮತ್ತೆ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸವಿದೆ ಎಂದಿದ್ದಾರೆ ವಿರೇಂದ್ರ ಸೆಹ್ವಾಗ್.

Story first published: Wednesday, May 4, 2022, 17:25 [IST]
Other articles published on May 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X