ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022 Final: ಡೇವಿಡ್ ವಾರ್ನರ್ ಹೆಸರಲ್ಲಿದ್ದ ಅಮೋಘ ದಾಖಲೆ ಮುರಿದ ಜೋಸ್ ಬಟ್ಲರ್

Jos butler

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 2022ರ ಫೈನಲ್ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ಪ್ರೈಮ್ ಬ್ಯಾಟ್ಸ್‌ಮನ್ ಜಾಸ್ ಬಟ್ಲರ್ ಐಪಿಎಲ್‌ನಲ್ಲಿ 2016ರಲ್ಲಿ ದಾಖಲಾಗಿದ್ದ ಅತ್ಯಮೋಘ ದಾಖಲೆಯನ್ನ ಮುರಿದಿದ್ದಾರೆ. ಡೇವಿಡ್ ವಾರ್ನರ್‌ರ ಬಹುಮುಖ್ಯವಾದ ದಾಖಲೆಯನ್ನ ಮುರಿದಿದ್ದಾರೆ.

ಫೈನಲ್ ಪಂದ್ಯದಲ್ಲಿ ಟಾಸ್‌ ಗೆದ್ದ ಬಳಿಕ ಸಂಜು ಸ್ಯಾಮ್ಸನ್ ತೆಗೆದುಕೊಂಡ ಟ ನಿರ್ಧಾರ ಅಭಿಮಾನಿಗಳಿಗೆ ಶಾಕ್ ನೀಡಿತು. ಈ ಸಂದರ್ಭದಲ್ಲಿ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿದ್ದು, ನಾವು ಮೊದಲು ಬೌಲಿಂಗ್ ಮಾಡುತ್ತೇವೆ ಎಂದುಕೊಂಡಿದ್ದೇವೆ ಎಂದು ನಕ್ಕರು.

ರಾಜಸ್ತಾನ ತಂಡದ ಆರಂಭಿಕರಾದ ಜೈಸ್ವಾಲ್ ಮತ್ತು ಬಟ್ಲರ್ ಇನ್ನಿಂಗ್ಸ್‌ ಆರಂಭಿಸಿದರು ಜೈಸ್ವಾಲ್ ಆಕ್ರಮಣಕಾರಿ ಆಟವಾಡಿ ರನ್ ಪೇರಿಸಿದರೂ 22 ರನ್ ಗಳಿಸಿ ಔಟಾದರು. ಸ್ಯಾಮ್ಸನ್ 14 ರನ್ಗಳಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದ್ರು. ಇದರ ಬೆನ್ನಲ್ಲೇ ದೇವದತ್ ಪಡಿಕ್ಕಲ್ ರಶೀದ್‌ ಖಾನ್‌ಗೆ 2 ರನ್ ಗಳಿಸಿ ಔಟಾದರು. ಆದಾಗ್ಯೂ, ಇನ್ನೊಂದು ತುದಿಯಲ್ಲಿ, ಬಟ್ಲರ್ ಜವಾಬ್ದಾರಿಯುತ ಆಟವನ್ನು ಆಡುವ ಮೂಲಕ ರನ್‌ಗಳನ್ನು ಸೇರಿಸಿದರು.

ಇನ್ನೊಂದು ತುದಿಯಲ್ಲಿ ವಿಕೆಟ್‌ಗಳು ಬಿದ್ದಿದ್ದರಿಂದ ಬಟ್ಲರ್‌ಗೆ ತಮ್ಮ ಅಬ್ಬರದ ಆಟವಾಡಲು ಸಾಧ್ಯವಾಗಲಿಲ್ಲ. ಬಟ್ಲರ್ 35 ಎಸೆತಗಳಲ್ಲಿ 39 ರನ್ ಗಳಿಸಿ ಹಾರ್ದಿಕ್ ಪಾಂಡ್ಯ ಔಟಾದರು. ಈ ಇನ್ನಿಂಗ್ಸ್‌ನೊಂದಿಗೆ, ಬಟ್ಲರ್ ಐಪಿಎಲ್ ಇತಿಹಾಸದಲ್ಲಿ ಒಂದು ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಾರ್ನರ್‌ರನ್ನು ಹಿಂದಿಕ್ಕಿದರು.

IPL ಫೈನಲ್ ಪಂದ್ಯದಲ್ಲಿ Hardik Pandya ಗೆ ಶರಣಾದ Sanju Samson ಪಡೆ |#cricket | Oneindia Kannada

ಬಟ್ಲರ್ ಒಂದು ಋತುವಿನಲ್ಲಿ 850 ರನ್ ಗಳಿಸಿದ ಎರಡನೇ ಆಟಗಾರರಾದರು ಜೊತೆಗೆ ಕೊಹ್ಲಿ ನಂತರದ ಸ್ಥಾನ ಪಡೆದಿದ್ದಾರೆ. ಬಟ್ಟರ್ 17 ಪಂದ್ಯಗಳಿಂದ 863 ರನ್ ಕಲೆಹಾಕಿದ್ದು,ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ. 4 ಶತಕಗಳು ಮತ್ತು 7 ಅರ್ಧಶತಕಗಳನ್ನು ಹೊಡೆದು, 152 ರ ಸ್ಟ್ರೈಕ್ ರೇಟ್‌ನಲ್ಲಿ 81 ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ಬಟ್ಲರ್ 5ನೇ ಶತಕ ಬಾರಿಸುವ ಮೂಲಕ ದಾಖಲೆ ಮುರಿಯುವ ಅವಕಾಶವನ್ನು ಕಳೆದುಕೊಂಡರು.

Story first published: Monday, May 30, 2022, 9:53 [IST]
Other articles published on May 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X