ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: 5 ವರ್ಷಗಳ ಬಳಿಕ ಗೋಲ್ಡನ್ ಡಕೌಟ್ ಆದ ವಿರಾಟ್ ಕೊಹ್ಲಿ

kl rahul 2

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿಯನ್ನು ಗೋಲ್ಡನ್ ಡಕ್‌ ಔಟ್ ಮಾಡಿದ ಲಿಸ್ಟ್‌ ಲಕ್ನೋ ಸೂಪರ್ ಜೈಂಟ್ಸ್ ತಂಡದ ದುಷ್ಮಂತ ಚಮೀರ ಸೇರ್ಪಡೆಯಾಗಿದ್ದು, ಈ ಸಾಧನೆ ಮಾಡಿದ ನಾಲ್ಕನೇ ಬೌಲರ್ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮಂಗಳವಾರ ಡಾ. ಡಿ.ವೈ ಪಾಟೀಲ್ ಸ್ಪೋರ್ಟ್ಸ್‌ ಅಕಾಡೆಮಿಯಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಸಿಂಹಳೀಯ ವೇಗಿ ಈ ಸಾಧನೆ ಮಾಡಿದ್ದಾರೆ. ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರಲು ಹೆಣಗಾಡುತ್ತಿರುವ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಚಮೀರ ಅವರ ಮೊದಲ ಎಸೆತದಲ್ಲಿ ದೀಪಕ್ ಹೂಡಾ ಅವರಿಗೆ ಕ್ಯಾಚ್‌ ನೀಡಿ ಪೆವಿಲಿಯನ್್ಗೆ ಮರಳ ಬೇಕಾಯಿತು.

ಮೊದಲ ಓವರ್‌ನ ಐದನೇ ಎಸೆತದಲ್ಲಿ ಚಮೀರಾ, ಆರಂಭಿಕ ಆಟಗಾರ ಅನುಜ್ ರಾವತ್ ಅವರ ವಿಕೆಟ್ ಪಡೆದರು. ನಂತರ 3 ನೇ ಸ್ಥಾನದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿಯನ್ನು ಬ್ಯಾಟಿಂಗ್ ಮಾಡಲು ಅವಕಾಶ ನೀಡದೇ ಮೊದಲ ಎಸೆತದಲ್ಲಿಯೇ ಪೆವಿಲಿಯನ್ ಕಡೆಗೆ ಕಳುಹಿಸಿದ್ರು. ಲಂಕಾದ ವೇಗಿ ಉತ್ತಮ ಲೆಂಥ್ ಬಾಲ್ ಮೂಲಕ ಆರ್‌ಸಿಬಿ ಓಪನರ್ ಅನುಜ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಚಮೀರ ಎಸೆದ ಮೊದಲ ಓವರ್‌ನ 5 ನೇ ಎಸೆತದಲ್ಲಿ ಲಕ್ನೋ ನಾಯಕ ಕೆಎಲ್ ರಾಹುಲ್ ಮುಂದಕ್ಕೆ ಡೈವ್ ಮಾಡಗಿ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಅನುಜ್ ಅವರನ್ನ ಪೆವಿಲಿಯನ್ ಕಡೆಗೆ ಕಳುಹಿಸಿದರು. ನಂತರದ ಎಸೆತವನ್ನು ವಿರಾಟ್ ಕೊಹ್ಲಿ ಬ್ಯಾಕ್‌ವರ್ಡ್ ಪಾಯಿಂಟ್ ತಳ್ಳುವ ಯತ್ನದಲ್ಲಿ ನೇರವಾಗಿ ದೀಪಕ್ ಹೂಡಾ ಸುಲಭವಾದ ಕ್ಯಾಚ್ ನೀಡಿದರು.

kl rahul 2

2008ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮೊದಲ ಬಾರಿಗೆ ಗೋಲ್ಡನ್ ಡಕ್ ಔಟ್ ಆದ್ರು. ಆಶೀಶ್ ನೆಹ್ರಾ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದ್ರು. ಇದರ ನಂತರ 2014 ರಲ್ಲಿ ಸಂದೀಪ್ ಶರ್ಮಾ ಮತ್ತು 2017 ರಲ್ಲಿ ನೇಥನ್ ಕುಲ್ಟರ್ ನೈಲ್ ಗೋಲ್ಡನ್ ಡಕ್ ಔಟ್ ಮಾಡಿದರು. ಈ ಸಾಲಿನಲ್ಲಿ ಶ್ರೀಲಂಕಾ ಬೌಲರ್ ಚಮೀರ ನಾಲ್ಕನೇ ಸ್ಥಾನದಲ್ಲಿದ್ದಾರೆ. 5 ವರ್ಷಗಳ ನಂತರ 2022 ರಲ್ಲಿ ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲಿ ಗೋಲ್ಡನ್ ಡಕ್ ಔಟ್ ಆಗಿದ್ದಾರೆ.

ಸೆಂಚುರಿ ಬಾರಿಸುವುದಕ್ಕೆ ಎದುರಾದ ಸಮಸ್ಯೆಯನ್ನು ಬಿಚ್ಚಿಟ್ಟ Faf Du Plessis | Oneindia Kannada

ಈ ವರೆಗೂ ಉತ್ತಮ ಪ್ರದರ್ಶನ ನೀಡುವಲ್ಲಿ ಮಾಜಿ ನಾಯಕ ಕೊಹ್ಲಿ ವಿಫಲರಾಗಿದ್ದಾರೆ. ಕಳೆದ 7 ಪಂದ್ಯಗಳಲ್ಲಿ 119 ರನ್ ಕಲೆಹಾಕಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ 48 ರನ್ ಗಳಿಸಿದ ಕೊಹ್ಲಿ ಆರೆಂಜ್ ಕ್ಯಾಪ್ ರೇಸ್‌ನಿಂದ ಬಹುದೂರ ಉಳಿದಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 41 ರನ್ ಗಳಿಸಿದ್ದರು. ಉಳಿದ ಪಂದ್ಯಗಳಲ್ಲಿ 12, 5, 1 ಮತ್ತು 12 ರನ್ ಗಳಿಸಲು ಮಾತ್ರ ಸಾಧ್ಯವಾಗಿದೆ.

Story first published: Wednesday, April 20, 2022, 13:47 [IST]
Other articles published on Apr 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X