ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಸೋತು ಸುಣ್ಣವಾದ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಹೊಸ ಪ್ಲೇಯರ್‌ ಸೇರ್ಪಡೆ

Kumar Kartikeya

ಐಪಿಎಲ್ 2022ರ ಸೀಸನ್‌ನಲ್ಲಿ ಪ್ಲೇ ಆಫ್‌ ಕನಸನ್ನೇ ಕೈ ಬಿಟ್ಟಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊಸ ಆಟಗಾರ ಸೇರ್ಪಡೆಗೊಂಡಿದ್ದಾನೆ. ಎಡಗೈ ಮಧ್ಯಮ ವೇಗಿ ಅರ್ಷಾದ್ ಖಾನ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಹಿನ್ನಲೆಯಲ್ಲಿ, ಆತನ ಬದಲಿಗೆ ಮಧ್ಯ ಪ್ರದೇಶದ ಎಡಗೈ ಸ್ಪಿನ್ನರ್ ಕುಮಾರ್ ಕಾರ್ತಿಕೇಯ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಗೆ ಸಹಿ ಮಾಡಿದ್ದಾರೆ.

24 ವರ್ಷದ ಬೌಲರ್ ಅರ್ಷಾದ್ ಖಾನ್ ಮೂರು ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದು, ಐಪಿಎಲ್‌ಗೆ ಪದಾರ್ಪಣೆ ಮಾಡುವ ಮುನ್ನವೇ ಗಾಯಗೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಮುಂಬೈ ಇಂಡಿಯನ್ಸ್‌ ಆತನನ್ನ ಮೂಲ ಬೆಲೆ 20 ಲಕ್ಷ ರೂಪಾಯಿಗೆ ಖರೀದಿಸಿತ್ತು.

IPL 2022: RCB ಕ್ಯಾಂಪ್‌ನಲ್ಲಿ ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ಮದುವೆ ಸೆಲೆಬ್ರೇಷನ್IPL 2022: RCB ಕ್ಯಾಂಪ್‌ನಲ್ಲಿ ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ಮದುವೆ ಸೆಲೆಬ್ರೇಷನ್

ಆದಾಗ್ಯೂ, ಹೊಸದಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಗೊಂಡಿರುವ ಕಾರ್ತಿಕೇಯ 9 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 19 ಲಿಸ್ಟ್ ಎ ಪಂದ್ಯಗಳನ್ನ ಆಡಿದ್ದಾರೆ. ಈ ಪಂದ್ಯಗಳಲ್ಲಿ ಕ್ರಮವಾಗಿ 35 ಹಾಗೂ 18 ವಿಕೆಟ್‌ಗಳನ್ನ ದೇಶೀಯ ಕ್ರಿಕೆಟ್‌ನಲ್ಲಿ ಪಡೆದಿದ್ದಾರೆ.

2021-22ರ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಈ ಸ್ಪಿನ್ನರ್ ಐದು ಪಂದ್ಯಗಳಲ್ಲಿ ಐದು ವಿಕೆಟ್ ಪಡೆದಿದ್ದಾರೆ. ಈತನ ಎಕಾನಮಿ 5.05 ಆಗಿದೆ.

ಪ್ಲೇ ಆಫ್‌ನಿಂದ ಹೊರಬಿದ್ದಿದೆ ಮುಂಬೈ ಇಂಡಿಯನ್ಸ್‌
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಯಾರೂ ಸೋಲದ ರೀತಿಯಲ್ಲಿ ಅವಮಾನ ಎದುರಿಸಿದೆ. ಆರಂಭಿಕ 8 ಪಂದ್ಯಗಳನ್ನ ಸೋತಿದ್ದು, ಒಂದೇ ಒಂದು ಗೆಲುವನ್ನ ಸಹ ಕಂಡಿಲ್ಲ. ವಿದೇಶಿ ಆಟಗಾರರನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಇಳಿಸಲು ಒದ್ದಾಡುತ್ತಿದ್ದು, ಜೊಫ್ರಾ ಆರ್ಚರ್ ಅನುಪಸ್ಥಿತಿ ತಂಡಕ್ಕೆ ಭಾರೀ ಕಾಡುತ್ತಿದೆ.

Kuldeep Yadav ಹಾಗು Chahal ಆಟದಲ್ಲಿ ಇಷ್ಟೊಂದು ಸುಧಾರಣೆ | Oneindia Kannada

ಈ ನಡುವೆ ದೇಶೀಯ ಆಟಗಾರ ತಿಲಕ್ ವರ್ಮಾ ಹಾಗೂ ದಕ್ಷಿಣ ಆಫ್ರಿಕಾ ಯುವ ಆಟಗಾರ ಡೆವಾಲ್ಡ್‌ ಬ್ರೆವಿಸ್‌ನಂತಹ ಅಚ್ಚರಿಯ ಫಲಿತಾಂಶ ನೀಡಬಲ್ಲ ಆಟಗಾರರು ತಂಡದಲ್ಲಿದ್ದಾರೆ.

Story first published: Thursday, April 28, 2022, 19:03 [IST]
Other articles published on Apr 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X