ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB vs PBKS: ಆರ್‌ಸಿಬಿಗೆ ಇಂದು ಪಂಜಾಬ್ ಎದುರಾಳಿ: ಮತ್ತೊಂದು ಸೇಡಿನ ಸಮರ ಗೆಲ್ಲುತ್ತಾ ಬೆಂಗಳೂರು

IPL 2022: Match 60, Royal Challengers Bangalore vs Punjab Kings: RCB eye on playoff

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ರೋಚಕ ಸೆಣೆಸಾಟದ ನಿರೀಕ್ಷೆಯಲ್ಲಿದ್ದಾರೆ ಕ್ರಿಕೆಟ್ ಪ್ರೇಮಿಗಳು. ಪ್ಲೇಆಫ್ ಹಂತಕ್ಕೇರುವ ಉತ್ಸಾಹದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕರ್ನಾಟಕದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಯಾವ ರೀತಿಯ ಸವಾಲೊಡ್ಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿದೆ. ಪ್ಲೇಆಫ್ ಹಂತಕ್ಕೇರುವ ಅವಕಾಶವನ್ನು ಖಚಿತಪಡಿಸಿಕೊಳ್ಳಬೇಕಾದರೆ ಉಳಿದ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದು ಪಂದ್ಯವನ್ನು ದೊಡ್ಡ ಅಂತರದಿಂದ ಗೆದ್ದುಕೊಳ್ಳಬೇಕಿದೆ. ಮುಂದಿನ ಎರಡೂ ಪಂದ್ಯಗಳನ್ನು ಗೆದ್ದರೆ ಯಾವುದೇ ಆತಂಕವಿಲ್ಲದೆ ಪ್ಲೇಆಫ್ ಹಂತಕ್ಕೇರಬಹುದು. ಹೀಗಾಗಿ ಈ ಹಂತದಲ್ಲಿ ತಂಡದಿಂದ ಉತ್ಕೃಷ್ಟ ಪ್ರದರ್ಶನವನ್ನು ನಿರೀಕ್ಷಿಸಲಾಗುತ್ತಿದೆ.

ಸಾಧನೆಯ ಸಂಕಲ್ಪ: 9 ವರ್ಷಗಳ ನಂತರ ತವರಿಗೆ ಮರಳುತ್ತಿರುವ MI ಆಟಗಾರನ ರೋಚಕ ಕಥೆಸಾಧನೆಯ ಸಂಕಲ್ಪ: 9 ವರ್ಷಗಳ ನಂತರ ತವರಿಗೆ ಮರಳುತ್ತಿರುವ MI ಆಟಗಾರನ ರೋಚಕ ಕಥೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ 12 ಪಂದ್ಯಗಳ ಪೈಕಿ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ 5 ಪಂದ್ಯದಲ್ಲಿ ಸೋಲು ಅನುಭವಿಸಿದೆ. ಹೀಗಾಗಿ ತಂಡದ ಖಾತೆಯಲ್ಲಿ 14 ಅಂಕಗಳಿದೆ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ತಂಡ ಈವರೆಗೆ 11 ಪಂದ್ಯಗಳನ್ನು ಆಡಿದ್ದು 5ರಲ್ಲಿ ಗೆಲುವು ಹಾಗೂ 6 ಸೋಲು ಅನುಭವಿಸಿದೆ. ಹೀಗಾಗಿ ಪಂಜಾಬ್ ಪಡೆಗಿಂತ ಆರ್‌ಸಿಬಿ ಉತ್ತಮ ಸ್ಥಾನದಲ್ಲಿದೆ. ಆದರೆ ಆರ್‌ಸಿಬಿ ಸ್ಥಾನವನ್ನು ಕಿತ್ತುಕೊಳ್ಳಲು ಟೂರ್ನಿಯಿಂದ ಈಗಾಗಲೇ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಹೊರತುಪಡಿಸಿ ಉಳಿದ ಎಲ್ಲಾ ತಂಡಗಳು ಕೂಡ ಸರ್ವ ಪ್ರಯತ್ನವನ್ನು ನಡೆಸುತ್ತಿದೆ.

ಇನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿಗೆ ಈ ಪಂದ್ಯ ಸೇಡಿನ ಪಂದ್ಯವೂ ಹೌದು. ಈ ಬಾರಿಯ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಆರ್‌ಸಿಬಿ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವಲ್ಲಿ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿ 206 ರನ್‌ಗಳ ಬೃಹತ್ ಗುರಿಯನ್ನು ನಿಗದಿಪಡಿಸಿತ್ತು. ನಾಯಕ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ದಿನೇಶ್ ಕಾರ್ತಿಕ್ ಕೂಡ ಈ ಪಂದ್ಯದಲ್ಲಿ ಅಬ್ಬರಿಸಿದ್ದರು. ಆದರೆ ಬೌಲಿಂಗ್ ವಿಭಾಗದಲ್ಲಿ ಆರ್‌ಸಿಬಿ ವೈಫಲ್ಯವನ್ನು ಅನುಭವಿಸಿ ಸೋಲು ಕಾಣಬೇಕಾಯಿತು.

ತಂಡದ ಯಾವೊಬ್ಬ ಆಟಗಾರ ಅರ್ಧ ಶತಕವನ್ನು ದಾಖಲಿಸದಿದ್ದರೂ ಬ್ಯಾಟಿಂಗ್ ವಿಭಾಗದ ಒಗ್ಗಟ್ಟಿನ ಪ್ರದರ್ಶನ ಆರ್‌ಸಿಬಿ ಹಿನ್ನಡೆಗೆ ಕಾರಣವಾಯಿತು. ಶಿಖರ್ ಧವನ್, ಭಾನುಕಾ ರಾಜಪಕ್ಷ ಬ್ಯಾಟಿಂಗ್ ಪ್ರದರ್ಶನದ ಜೊತೆಗೆ ಅಂತಿಮ ಹಂತದಲ್ಲಿ ಓಡಿಯನ್ ಸ್ಮಿತ್ ಆರ್‌ಸಿಬಿ ತಂಡಕ್ಕೆ ಆಘಾತಕಾರಿ ಸೋಲು ಅನುಭವಿಸಲು ಕಾರಣವಾಗುದ್ದರು. ಈ ಸೋಲಿಗೆ ಆರ್‌ಸಿಬಿ ಈ ನಿರ್ಣಾಯಕ ಘಟ್ಟದಲ್ಲಿ ಪ್ರತಿಕಾರ ತೀರಿಸಲು ಸಿದ್ಧವಾಗಿದೆ.

IPL ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿಯೇ ಇಲ್ಲ: ಒಂದರ ಹಿಂದೆ ಮತ್ತೊಂದು ಸರಣಿIPL ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿಯೇ ಇಲ್ಲ: ಒಂದರ ಹಿಂದೆ ಮತ್ತೊಂದು ಸರಣಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರಜತ್ ಪಾಟಿದಾರ್, ಅನುಜ್ ರಾವತ್, ವಿರಾಟ್ ಕೊಹ್ಲಿ, ಶೆರ್ಫೇನ್ ರುದರ್‌ಫೋರ್ಡ್, ಚಾಮ ವಿ ಮಿಲಿಂದ್, ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಆಕಾಶ್ ದೀಪ್, ಸಿದ್ದಾರ್ಥ್ ಕೌಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಜೋಶ್ ಹೇಜಲ್‌ವುಡ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್

Kieron Pollard ಹುಟ್ಟು ಹಬ್ಬದ ದಿನ ಮಾಡಿದ್ದೇನು | Oneindia Kannada

ಪಂಜಾಬ್ ಕಿಂಗ್ಸ್: ಶಿಖರ್ ಧವನ್, ಕಗಿಸೊ ರಬಾಡ, ಜಾನಿ ಬೈರ್‌ಸ್ಟೋವ್, ರಾಹುಲ್ ಚಾಹರ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಪ್ರಭಾಸಿಮ್ರಾನ್ ಸಿಂಗ್, ಇಶಾನ್ ಪೊರೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಒಡಿಯನ್ ಸ್ಮಿತ್, ಸಂದೀಪ್ ಶರ್ಮಾ, ರಾಜ್ ಅಂಗದ್ ಬಾವಾ, ರಿಷಿ ಧವನ್, ಪ್ರೇರಕ್ ಮಂಕಡ್, ಅಥರ್ವ ಟೈಡೆ, ವೈಭವ್ ಅರೋರಾ, ಭಾನುಕಾ ರಾಜಪಕ್ಸೆ, ರಿಟಿಕ್ ಚಟರ್ಜಿ, ಬಲ್ತೇಜ್ ಧಂಡಾ, ಅನ್ಶ್ ಪಟೇಲ್, ಜಿತೇಶ್ ಶರ್ಮಾ, ಬೆನ್ನಿ ಹೋವೆಲ್, ನಾಥನ್ ಎಲ್ಲಿಸ್

Story first published: Friday, May 13, 2022, 10:11 [IST]
Other articles published on May 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X